3:54 PM Monday1 - June 2026
ಬ್ರೇಕಿಂಗ್ ನ್ಯೂಸ್
ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ನಡೆ; ಬಿಜೆಪಿಗೆ ಶುರುವಾಯ್ತು ಢವ ಢವ ನಾವು ಪಕ್ಷನಿಷ್ಠರು, ಜಮೀರ್‌ ವಿರುದ್ದ ಬೃಹತ್‌ ಷಡ್ಯಂತ್ರ: ವೈರಲ್‌ ಆಡಿಯೋ ಬಗ್ಗೆ ಸಿರಾಜ್‌… ಪಕ್ಷ ವಿರೋಧಿ ಕೃತ್ಯಕ್ಕೆ ಸಿಕ್ತು ಸಾಕ್ಷ್ಯ: ಜಮೀರ್ ಅಹ್ಮದ್ ಸ್ಫೋಟಕ ಆಡಿಯೋ ವೈರಲ್ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಇದ್ದೊಬ್ಬ ಒಬಿಸಿ ಸಿಎಂ ಕೆಳಗಿಳಿಸಿ ಅಪಮಾನ: ಮಂಗಳೂರಿನಲ್ಲಿ ಕೇಂದ್ರ… Kodagu | ಕುಶಾಲನಗರ: 15 ದಿನದೊಳಗೆ ದುಷ್ಕರ್ಮಿಗಳ ಗುಂಡೇಟಿಗೆ 2 ಕಾಡು ಕೋಣಗಳು… ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಸಿಹಿಸುದ್ದಿ ಕೊಟ್ಟ ಇರಾನ್; 10 ಇಂಡಿಯನ್ ನಾವಿಕರ… Kerala | ಮಾಜಿ ಸಿಎಂ ಪಿಣರಾಯಿ ಮನೆ ಎದುರು ಇ.ಡಿ ವಾಹನಗಳ ಮೇಲೆ… Bangalore | ಐಪಿಎಲ್ ಬೆಟ್ಟಿಂಗ್ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಜನ… ಕಾಂಗ್ರೆಸ್‌ ಹೈಡ್ರಾಮಾಕ್ಕೆ ವಿಜಯೇಂದ್ರ ವ್ಯಂಗ್ಯ: ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದ್ರೂ ಅದು… ಬೆಂಗಳೂರಿಗೆ ಮಹಾಮಾರಿ ಎಬೋಲಾ ಎಂಟ್ರಿ?: ಉಗಾಂಡದ ಮಹಿಳೆ ಐಸೋಲೇಷನ್‌ನಲ್ಲಿ..!

ಇತ್ತೀಚಿನ ಸುದ್ದಿ

ನಾವು ಪಕ್ಷನಿಷ್ಠರು, ಜಮೀರ್‌ ವಿರುದ್ದ ಬೃಹತ್‌ ಷಡ್ಯಂತ್ರ: ವೈರಲ್‌ ಆಡಿಯೋ ಬಗ್ಗೆ ಸಿರಾಜ್‌ ಪ್ರತಿಕ್ರಿಯೆ

01/06/2026, 15:29

ಬೆಂಗಳೂರು(reporterkarnataka.com): ಜಮೀರ್‌ ಅಹ್ಮದ್‌ ಹಾಗೂ ಕೆಎಂಡಿಸಿ ಅಧ್ಯಕ್ಷ ಮೊಹಮ್ಮದ್‌ ಸಿರಾಜ್‌ ನಡುವೆ ನಡೆದ ಆಡಿಯೊ ಈಗ ಕಾಂಗ್ರೆಸ್‌ ಪಕ್ಷದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್‌ ಸಿರಾಜ್‌, ನಾವು ಸಂಪೂರ್ಣ ಪಕ್ಷನಿಷ್ಠರಾಗಿದ್ದೇವೆ. ಜಮೀರ್‌ ಅಹ್ಮದ್‌ ವಿರುದ್ದ ದೊಡ್ಡ ಷಡ್ಯಂತ್ರವೇ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವ ಜಮೀರ್‌ ಅಹ್ಮದ್‌ ಹಾಗೂ ಕೆಎಂಡಿಸಿ ಅಧ್ಯಕ್ಷ ಮೊಹಮ್ಮದ್‌ ಸಿರಾಜ್‌ ನಡುವೆ ನಡೆದಿದೆ ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಉರ್ದುವಿನಲ್ಲಿ ನಡೆದಿದ್ದ ಈ ಸಂಭಾಷಣೆಯಲ್ಲಿ ಆಗ ಸಚಿವರಾಗಿದ್ದ ಜಮೀರ್‌ ಅಹ್ಮದ್‌ ದಾವಣಗೆರೆ ಉಪಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದರು. ಕಾಂಗ್ರೆಸ್‌ ಪಕ್ಷಕ್ಕೆ ಓಟು ಹಾಕುವಂತೆ ಮುಸ್ಲಿಮರಿಗೆ ಹೇಳುವುದು ಬೇಡ. ಎಲ್ಲರೂ ಸ್ವತಂತ್ರ್ಯ ಅಭ್ಯರ್ಥಿಗೆ ಅಥವಾ ಎಸ್‌ಡಿಪಿಐ ಅಭ್ಯರ್ಥಿಗೆ ಮತ ಚಲಾಯಿಸಲಿ ಎಂದು ಹೇಳಿರುವುದು ದಾಖಲಾಗಿತ್ತು.
ಈ ಹಿಂದೆಯೇ ಜಮೀರ್‌ ಅಹ್ಮದ್‌ ಮತ್ತು ಇತರೆ ಮುಸ್ಲಿಂ ನಾಯಕರ ವಿರುದ್ದ ಪಕ್ಷದ್ರೋಹ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಹಲವರು ಮುಸ್ಲಿಂ ನಾಯಕರ ತಲೆದಂಡವೂ ನಡೆದಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು