5:37 AM Wednesday5 - August 2026
ಬ್ರೇಕಿಂಗ್ ನ್ಯೂಸ್
ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ…

ಇತ್ತೀಚಿನ ಸುದ್ದಿ

ಸಿದ್ದರಾಮಯ್ಯರ ಇಳಿಸಿದ್ದು ಅಹಿಂದ ಹಾಗೂ ಹಿಂದುಳಿದ ವರ್ಗಕ್ಕೆ ಮಾಡುತ್ತಿರುವ ಮೋಸ ಮತ್ತು ದೋಖ: ಆರಗ ಜ್ಞಾನೇಂದ್ರ

30/05/2026, 22:00

ರಶ್ಮಿ ಶ್ರೀಕಾಂತ್ ನಾಯಕ್

ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@ gmail.com

ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಚಾಂಪಿಯನ್, ಅವರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಕಾಂಗ್ರೆಸ್ ನಡೆಸಿಕೊಂಡಿದೆ ಇಂದು ಅವರನ್ನು ಕೈ ಬಿಡುತ್ತಿದ್ದಾರೆ ಎಂದರೆ ಅಹಿಂದ ವರ್ಗಕ್ಕೆ ಹಾಗೂ ಹಿಂದುಳಿದ ವರ್ಗಕ್ಕೆ ಮಾಡುತ್ತಿರುವ ಮೋಸ ಮತ್ತು ದೋಖ, ಇನ್ನು ಅವರನ್ನು ಬೆಳೆಯಲು ಬಿಡುವುದಿಲ್ಲ ಕಾಂಗ್ರೆಸ್ ಎನ್ನುವುದು ಸಾಬೀತು ಆಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು..
ತೀರ್ಥಹಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು
ಸಿದ್ದರಾಮಯ್ಯನವರು ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ . ಮುಂದಿನ ಮುಖ್ಯಮಂತ್ರಿ ಯಾರು ಎಂದು ತಿಳಿಸಿಲ್ಲ,ಶಾಸಕಾಂಗ ಪಕ್ಷವನ್ನ ಕರೆದಿಲ್ಲ, ಇದೆಲ್ಲದಕ್ಕೂ ಎಷ್ಟು ದಿನ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ 139 ಸ್ಥಾನಗಳನ್ನು ನೀಡುವ ಮೂಲಕ ಚೆನ್ನಾಗಿ ಆಡಳಿತ ನಡೆಯಲಿ ಎಂದುಮೆಜಾರಿಟಿ ಗೆಲುವನ್ನು ಜನರ ನೀಡಿದ್ದರು.. ಆದರೆ ಕಳೆದ ಒಂದುವರೆ ವರ್ಷಗಳಿಂದ ಸರ್ಕಾರ ನಿಜವಾಗಿಯೂ ಇತ್ತಾ ಎಂಬುದೇ ಪ್ರಶ್ನೆಯಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಲ್ಲಿ ಮೊದಲ ಅವಧಿಗಿಂತ ನಂತರದ ಅವಧಿಯಲ್ಲಿ ಸಿದ್ದರಾಮಯ್ಯನವರು ಬದಲಾವಣೆಯಾಗಿದ್ದರು.
ಸಿದ್ದರಾಮಯ್ಯನವರಿಗೆ ಕೆಪಾಸಿಟಿ ಇದ್ದರೂ ಕೂಡ ಸರ್ಕಾರ ನಡೆಸಲು ಕಾಂಗ್ರೆಸ್ ಬಿಡಲಿಲ್ಲ. ಹಾಗೆಯೇ ಸಿದ್ದರಾಮಯ್ಯನವರು ಸಹ ಹತಾಶೆಯಿಂದ ಕೆಲಸ ಮಾಡುತ್ತಿದ್ದರು. ರಾಜೀನಾಮೆ ಕೊಡಬೇಕೆಂಬ ಒಪ್ಪಂದ ಆಗಿದ್ದ ಬಗ್ಗೆ ಅವರಿಗೂ ಗೊತ್ತಿತ್ತು. ಹಾಗಾಗಿ ಈ ಸರ್ಕಾರವನ್ನ ಉಳಿಸಿಕೊಳ್ಳಲು, ವೋಟ್ ಬ್ಯಾಂಕ್ ಗಾಗಿ ಮುಸ್ಲಿಮರ ಓಲೈಕೆ ಮಾಡಿದರು. ಹಿಜಾಬ್ ವ್ಯವಸ್ಥೆಯನ್ನು ತಂದರು. 600 ಕೋಟಿ ಹಣವನ್ನು ಮುಸ್ಲಿಂ ಕಾಲೋನಿಗೆ ನೀಡಿರುವುದು, ಅವರ ಮೇಲಿರುವ ಕ್ರಿಮಿನಲ್ ಕೇಸ್ ಗಳನ್ನ ವಾಪಾಸ್ ತೆಗೆದು ಹಾಕಿರುವುದು, ಇಂತಹದನ್ನೇ ಮಾಡುತ್ತಾ ಹೋದರು. ಹಾಗಾಗಿ ಇವತ್ತು ಸರ್ಕಾರ ಇದ್ದರೂ ಸಹ ಇಲ್ಲದಂತಾಗಿದೆ ಮುಂದೊಂದು ದಿನ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಜನರ ದೃಷ್ಟಿಯಲ್ಲಿ ಅನಾಹುತ ಆಗಬಹುದು ಎಂದರು.
ಈ ಅವಧಿಯಲ್ಲಿ ಕಾಂಗ್ರೆಸ್ ಗೆ ಅಭೂತಪೂರ್ವ ಗೆಲುವನ್ನು ಜನರು ನೀಡಿದ್ದರು. ಆದರೆ ಅದು ವೇಸ್ಟ್ ಆಗಿದೆ. ಅಭಿವೃದ್ಧಿ ಶೂನ್ಯ ಆಗಿರುವಂತಹ ಸರ್ಕಾರ ಆಗಿದೆ. ಸಾಲ ಸಿಕ್ಕಾಪಟ್ಟೆ ಮಾಡಿದ್ದಾರೆ. ಹಾಗೆಯೇ ಈಗ ಅಭಿವೃದ್ಧಿಗೆ ಹಣ ಇಲ್ಲದಂತಾಗಿದೆ.
ತೆರಿಗೆಯ ಮೇಲೆ ತೆರಿಗೆ ಹೇರುತ್ತಿದ್ದಾರೆ.. ಪೆಟ್ರೋಲ್ ಡೀಸೆಲ್ ಬೆಲೆ
ರಾಷ್ಟ್ರೀಯ ಮಟ್ಟದಲ್ಲಿ ಜಾಸ್ತಿಯಾಗಿದೆ. ಕೇಂದ್ರ ಸರ್ಕಾರ ಅದಕ್ಕೆ ಟ್ಯಾಕ್ಸ್ ಹಾಕಿಲ್ಲ. ರಾಜ್ಯ ಸರ್ಕಾರಕ್ಕೆ ಬರುವಂತಹ 32 ರೂಪಾಯಿ ತೆರಿಗೆ ಹಣವನ್ನು ಕೈ ಬಿಡಲಿ. ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವನ್ನ ದೂರುವುದನ್ನೇ ಕಾಂಗ್ರೆಸ್ ನವರು ತಮ್ಮದೊಂದು ಸಾಧನೆ ಎಂದುಕೊಂಡಿದ್ದಾರೆ ಎಂದು ಅವರು ನುಡಿದರು.
ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಬರಲು ಮೂರು ತಿಂಗಳು ಬೇಕು, ಯಾರನ್ನ ಮಂತ್ರಿ ಮಾಡಲ್ಲವೋ ಅಂತವರು ವಿರೋಧ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ಗಡಿಬಿಡಿ, ಗೊಂದಲ, ತನಗೆ ಕೊಟ್ಟಂತಹ ಮೆಜಾರಿಟಿ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದೆ ಜನಕ್ಕೆ ಕಿರುಕುಳ ಕೊಟ್ಟಂತಹ ಒಂದು ಸರ್ಕಾರ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು