ಇತ್ತೀಚಿನ ಸುದ್ದಿ
ಶೃಂಗೇರಿ | ಬೆಟ್ಟಗೆರೆ ಸಮೀಪದ ಕಲ್ಲೊಳ್ಳಿ ಗ್ರಾಮದಲ್ಲಿ ಏಣಿಗೆ ಕಟ್ಟಿದ್ದ ಸೀರೆ ಕುತ್ತಿಗೆ ಬಿಗಿದು ಬಾಲಕಿ ಸಾವು
19/05/2026, 17:45
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಶೃಂಗೇರಿ ತಾಲೂಕಿನ ಬೆಟ್ಟಗೆರೆ ಸಮೀದ ಕಲ್ಲೊಳ್ಳಿ ಗ್ರಾಮದಲ್ಲಿ
ಏಣಿಗೆ ಕಟ್ಟಿದ್ದ ಸೀರೆಗೆ ಕುತ್ತಿಗೆ ಬಿಗಿದು ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
8ನೇ ತರಗತಿ ಓದುತ್ತಿದ್ದ ಸಪ್ತಮಿ (14) ಮೃತ ಬಾಲಕಿ.
ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ.
ಅಟ್ಟದ ಮೇಲೆ ಆಟವಾಡಿ ಕೆಳಗಿ ಇಳಿಯುವಾಗ ದುರಂತ ಸಂಭವಿಸಿದೆ. ಏಣಿಯಿಂದ ಇಳಿಯುವಾಗ ಸೀರೆಯ ಹಗ್ಗ ಕುತ್ತಿಗೆಗೆ ಬಿಗಿದು ಸಾವು ಸಂಭವಿಸಿದೆ. ಬಾಲಕಿಯನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












