6:55 PM Saturday9 - May 2026
ಬ್ರೇಕಿಂಗ್ ನ್ಯೂಸ್
ನಂಜನಗೂಡು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಚಿಕ್ಕರಂಗನಾಯಕ ಚಾಲನೆ ಚಿಕ್ಕಮಗಳೂರು | ಕಾಡಿನೊಳಗೂ ಕಳ್ಳರ ಕೈಚಳಕ: ಮುತ್ತೋಡಿ ಅರಣ್ಯ ವಲಯದಲ್ಲಿದ್ದ ಕ್ಯಾಮೆರಾ ಹೊತ್ತೊಯ್ದ… ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ

ಇತ್ತೀಚಿನ ಸುದ್ದಿ

ಹಠ ಬಿಡದ ‘ದ್ರೌಪದಿ’ಗೆ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಪಟ್ಟ?: ಯಾರು ಆ ನಟಿ?

09/05/2026, 18:36

ಕೋಲ್ಕತ್ತಾ(reporterkarnataka.com): ಕೌರವರ ಪತನಕ್ಕಾಗಿ ಪಣತೊಟ್ಟು ಮುಡಿ ಕಟ್ಟದೆ ಕಾದಿದ್ದಳು ಮಹಾಭಾರತದ ದ್ರೌಪದಿ. ಅದೇ ಹಠದಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪತನಕ್ಕಾಗಿ ದಶಕದಿಂದ ಕಾದಿದ್ದ ‘ದ್ರೌಪದಿ’ಗೆ ಈಗ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ ಬಿಜೆಪಿ.
ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಸತತ ಹೊರಾಟ, ಪ್ರಯತ್ನಗಳ ಬಳಿಕ ಕೊನೆಗೂ ಮಮತಾ ಬ್ಯಾನರ್ಜಿಯನ್ನು ಕುರ್ಚಿಯಿಂದ ಕೆಳಗಿಳಿಸಿರುವ ಬಿಜೆಪಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸುವೇಂದು ಅಧಿಕಾರಿ ಇದೀಗ ಪಶ್ಚಿಮ ಬಂಗಾಳದ ಮೊಟ್ಟ ಮೊದಲ ಬಿಜೆಪಿ ಸಿಎಂ ಆಗಲಿದ್ದಾರೆ. ಮಾತ್ರವಲ್ಲದೆ, ಇಬ್ಬರನ್ನು ಡಿಸಿಎಂ ಅನ್ನಾಗಿ ಸಹ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಒಬ್ಬರು ನಟಿ ರೂಪಾ ಗಂಗೂಲಿ.
ರೂಪಾ ಗಂಗೂಲಿ ಎಂದರೆ ಹೆಚ್ಚು ಜನರಿಗೆ ತಿಳಿಯಲಿಕ್ಕಿಲ್ಲ, ಆದರೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’ ಧಾರಾವಾಹಿಯ ದ್ರೌಪದಿ ಎಂದರೆ ಥಟ್ಟನೆ ನೆನಪಾಗುತ್ತದೆ. ಅದೇ ‘ದ್ರೌಪದಿ’ ಪಾತ್ರಧಾರಿ ರೂಪಾ ಗಂಗೂಲಿ ಈಗ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ. ರೂಪಾ ಗಂಗೂಲಿ ಅವರದ್ದು ಟಿವಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು. ರಾಜಕೀಯಕ್ಕೆ ಕಾಲಿಟ್ಟಮೇಲೂ ನಟನೆ ಮುಂದುವರೆಸಿದ್ದ ರೂಪಾ ಗಂಗೂಲಿ ಅವರಿಗೆ ಈಗಲೂ ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಇದೆ. ಆದರೆ ಈಗ ಉಪ ಮುಖ್ಯಮಂತ್ರಿ ಆದ ಬಳಿಕ ಅವರು ನಟನೆ ಮುಂದುವರೆಸುತ್ತಾರೋ ಇಲ್ಲವೋ ನೋಡಬೇಕು.

*ರಾಜಕೀಯ ಜರ್ನಿ:*
ರೂಪಾ ಗಂಗೂಲಿ ಸಿನಿಮಾ ರಂಗದಲ್ಲಿ ಸೌಮ್ಯ, ಸುಂದರ ನಾಯಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು, ಆದರೆ ರಾಜಕೀಯದಲ್ಲಿ ಅವರದ್ದು ಹೋರಾಟದ ಹಾದಿ. 2015 ರಲ್ಲಿ ಬಿಜೆಪಿ ಸೇರುವ ಮೂಲಕ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಹವಾ ಬಲು ಜೋರಾಗಿದ್ದ ಕಾಲವದು. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಯಾವ ಕಾಲದಲ್ಲೂ ಸುಲಭವಾಗಿರಲಿಲ್ಲ. ರಾಜಕೀಯ ಹಿಂಸಾಚಾರವಂತೂ ‘ಸಾಮಾನ್ಯ’ ಎಂಬಂತಿತ್ತು, ಅಂಥಹಾ ಸಮಯದಲ್ಲೂ ಗಟ್ಟಿ ಮನಸ್ಸು ಮಾಡಿ, ದೊಡ್ಡ ಪಕ್ಷದ ವಿರುದ್ಧ ಪಕ್ಷ ಸಂಘಟನೆ ಶುರು ಮಾಡಿದರು ರೂಪಾ ಗಂಗೂಲಿ.
2015 ರಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಆದ ರೂಪಾ ಗಂಗೂಲಿ, 2016 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಆದರೆ ಛಲ ಬಿಡದೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ರೂಪಾ. ಅದೇ ವರ್ಷ ಮೇ ತಿಂಗಳಲ್ಲಿ ಚುನಾವಣಾ ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾಗಿ ಮರಳಿ ಬರುವಾಗ ಟಿಎಂಸಿ ಕಾರ್ಯಕರ್ತರು ರೂಪಾ ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದರು. ಹಲ್ಲೆಯಲ್ಲಿ ರೂಪಾ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ಅವರು ಆಸ್ಪತ್ರೆ ಸಹ ಸೇರಿದರು. ಅದೇ ವರ್ಷ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿ ಕಳಿಸಿತು ಬಿಜೆಪಿ. 2022 ರಲ್ಲಿ ತಮ್ಮ ಅವಧಿ ಮುಗಿಸಿದ ರೂಪಾ, ಈಗ ಮತ್ತೆ ಚುನಾವಣೆ ಸ್ಪರ್ಧಿಸಿ ಗೆದ್ದಿಲ್ಲದೆ, ಉಪ ಮುಖ್ಯಮಂತ್ರಿ ಸಹ ಆಗಲಿದ್ದಾರೆ.

*ವೈಯಕ್ತಿಕ ಜೀವನ:*
ಇನ್ನು ರೂಪಾ ಅವರ ವೈಯಕ್ತಿಕ ಜೀವನ ಗಮನಿಸುವುದಾದರೆ ರೂಪಾ ಅವರು ಎಂಜಿನಿಯರ್ ಒಬ್ಬರನ್ನು 1992 ರಲ್ಲಿ ವಿವಾಹವಾಗಿ ಅವರಿಂದ ಒಂದು ಗಂಡು ಮಗುವನ್ನೂ ಪಡೆದರು. ಆದರೆ 2007 ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರಾದರು. ಬಳಿಕ ರೂಪಾ ಅವರು ಬೆಂಗಾಲಿ ಗಾಯಕ ದಿವ್ಯೇಂದು ಮುಖರ್ಜಿ ಜೊತೆಗೆ ಲಿವಿನ್ ರಿಲೇಷನ್​​ನಲ್ಲಿದ್ದರು. ರೂಪಾ ಮತ್ತು ದಿವ್ಯೇಂದು ಮುಂಬೈನಲ್ಲಿ ಒಟ್ಟಿಗೆ ಹಲವು ವರ್ಷ ಇದ್ದರು. ಬಳಿಕ ಇಬ್ಬರೂ ದೂರಾದರು. ಆದರೆ ಆ ಬಳಿಕವೂ ಅವರು ಗೆಳೆತನ ಕಾಪಾಡಿಕೊಂಡಿದ್ದಾರೆ. ಪ್ರಸ್ತುತ ರೂಪಾ ಅವರು ಒಂಟಿ. ಪುತ್ರ ಜೊತೆಗಿದ್ದಾನೆ.

*ಸಿನಿಮಾ ಜರ್ನಿ:*
ರೂಪಾ ಗಂಗೂಲಿ ಅದ್ಭುತ ನಟಿಯಾಗಿದ್ದವರು. ಟಿವಿ ಧಾರಾವಾಹಿ ಮಾತ್ರವೇ ಅಲ್ಲದೆ ಹಿಂದಿ, ಕನ್ನಡ, ತೆಲುಗು, ಒಡಿಯಾ, ಮಲಯಾಳಂ, ಮರಾಠಿ, ಬೆಂಗಾಲಿ, ಅಸ್ಸಾಮಿ ಹೀಗೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ವಿಷ್ಣುವರ್ಧನ್ ಜೊತೆಗೆ ‘ಪೊಲೀಸ್ ಮತ್ತು ದಾದ’, ‘ಕದನ’, ‘ಸಿಬಿಐ ವಿಜಿ’, ‘ಬಹದ್ಧೂರ್ ಹೆಣ್ಣು’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಅವರ ಕೈಯಲ್ಲಿ ಮೂರು ಸಿನಿಮಾಗಳಿವೆ.

ಇತ್ತೀಚಿನ ಸುದ್ದಿ

ಜಾಹೀರಾತು