12:32 PM Thursday18 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ವಿರಾಜಪೇಟೆ | ಅಕ್ರಮ ಸಂಬಂಧ ಶಂಕೆ: ತಾತನಿಂದಲೇ ಮೊಮ್ಮಗನ ಹತ್ಯೆ

01/05/2026, 17:43

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ತೋಟದ ಕಾರ್ಮಿಕರಿದ್ದ ಒಂದೇ ಲೈನ್ ಮನೆಯಲ್ಲಿ ಕಾರ್ಮಿಕರ ನಡುವೆ ಅಕ್ರಮ ಸಂಬಂಧ ದ ವಿಚಾರ ಕೊಲೆಯಲ್ಲಿ ಅಂತ್ಯವಾದ ಘಟನೆ ವಿರಾಜಪೇಟೆ ಬೇಟೋಳಿ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಟೋಳಿ ಗ್ರಾಮದ ನಿವಾಸಿ ಅಮ್ಮಣಕುಟ್ಟಂಡ ಗಣೇಶ್ ಅವರ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ಪಣಿ ಎರವರ ಸಂಜು ಅಲಿಯಾಸ್ ಅಯ್ಯಪ್ಪ ಪ್ರಾಯ 19 ವರ್ಷ ಹತ್ಯೆಯಾದ ವ್ಯಕ್ತಿ. ಪಣಿ ಎರವರ ಅಪ್ಪು ಪ್ರಾಯ 65 ವರ್ಷ ಕೊಲೆಗೈದು ಬಂದಿತನಾದ ವ್ಯಕ್ತಿ.
ವಿರಾಜಪೇಟೆ ಆರ್ಜಿ ಬೇಟೋಳಿ ಗ್ರಾಮದ ಎ. ಗಣೇಶ್ ಅವರ ತೋಟದ ಲೈನ್ ಮನೆಯಲ್ಲಿ ಮೃತ ವ್ಯಕ್ತಿ ಸಂಜು ಮತ್ತು ಕೊಲೆಗೈದ ವ ತಾತ ಅಪ್ಪು ವಾಸವಿದ್ದರು. ಕಳೆದ ಮೂರು ತಿಂಗಳ ಹಿಂದೆ ಕೆಲಸ ಒತ್ತಡದ ನಿಮಿತ್ತ ಗಣೇಶ್ ಮಂಜು ಮತ್ತು ಸಿಂದು ಕಾರ್ಮಿಕ ದಂಪತಿಗಳನ್ನು ಸಂಪರ್ಕಿಸುತ್ತಾರೆ. ಮಾಲೀಕರ ಅಪೇಕ್ಷೆ ಮೇರೆಗೆ ಕಾರ್ಮಿಕ ದಂಪತಿಗಳು ಹಿರಿಯ ಮಗಳು ಕಾವೇರಿಯನ್ನು ಪೊನ್ನಂಪೇಟೆಯ ಕಿರುಗೂರು ನಲ್ಲಿ ಅಣ್ಣನ ಬಳಿ ಬಿಟ್ಟು. ಎರಡನೆ ಮಗಳು ದಿವ್ಯಳೊಂದಿಗೆ ಗಣೇಶ್ ಅವರ ಲೈನ್ ಮನೆಗೆ ಆಗಮಿಸುತ್ತಾರೆ. ಕೆಲಸ ಬಗ್ಗೆ ಮಾತನಾಡಲು ಸಂಜು ಮಂಜು ನ ಮನೆಗೆ ಬಂದು ಹೋಗುವುದು ಮಾಡುತಿದ್ದಾ. ಇದನ್ನು ಗಮನಿಸಿದ್ದ ವೃದ್ದ ಅಪ್ಪು ಅಕ್ರಮ ಮಂಜು ನ ಪತ್ನಿ ಸಿಂಧುಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅಪಾರ್ಥ ಕಲ್ಪಿಸುತ್ತಾನೆ ಅಪ್ಪು,ಇದೇ ವಿಷಯವಾಗಿ ಹಲವು ಭಾರಿ.ಇರ್ವರ ನಡುವೆ ಮಾತಿನ ಚಕಾಮುಕಿ ಅಲ್ಲದೆ ಜಗಳ ನಡೆಯುತ್ತದೆ. ಜಗಳ ಬಿಡಿಸಲು ಹಲವು ಭಾರಿ ದಂಪತಿಗಳು ಪ್ರಯತ್ನಪಟ್ಟಿದ್ದಾರೆ.
ಹೀಗಿರುವಾಗ 28-04-2026 ರಂದು ಬೆಳಿಗ್ಗೆ ತೋಟದ ಮಾಲೀಕ ಗಣೇಶ್ ಅವರು ಹೊಸ ಮನೆ ಕಟ್ಟುವ ಸ್ಥಳಕ್ಕೆ ಕಾರ್ಮಿಕರನ್ನು ಅಂದರೆ ಸಂಜು ಮತ್ತು ಮಂಜು ತೆರಳಲು ತಿಳಿಸಿದ್ದಾರೆ. ನಂತರ ‌ನನಗೆ ( ಸಿಂದು) ಗೆ ಹೂವಿನ ಗಿಡಕ್ಕೆ‌ ನೀರು ಎರೆಯಲು ತಿಳಿಸುತ್ತಾರೆ. ಕೆಲಸ ಮುಗಿದ ಬಳಿಕ ಸಂಜೆ ಮಂಜು ಮತ್ತು ಸಂಜು ಲೈನ್ ಮನೆಗೆ ಆಗಮಿಸಿದ್ದಾರೆ. ಎಂದಿನಂತೆ ಸಂಜು ಮತ್ತು ವೃದ್ದ ಅಪ್ಪು ನಡುವೆ. ನಿನಗೆ ಎಷ್ಟೋ ಬಾರಿ ಹೇಳಿದರು ಸಿಂಧುವಿನ ಸಂಪರ್ಕ ಬೀಡುವುದಿಲ್ಲ. ಅಲ್ಲದೆ ನೀನು ನನ್ನ ಪತ್ನಿಯನ್ನು ಕೊಲೆ ಮಾಡಿದ್ದೀಯ ಎಂದು ಜಗಳ ವಾಗಿದೆ. ಜಗಳ ಸಮಾನ್ಯ ಎಂದು ಸಿಂಧು ಮತ್ತು ಮಂಜು ದಂಪತಿಗಳು ಸುಮ್ಮನಿದ್ದರು. ಜಗಳವು ತಾರಕ್ಕೇರಿತು. ಸಿಟ್ಟಿನಿಂದ ವೃದ್ದ ಅಪ್ಪು ಮನೆಯಲ್ಲಿ ದ್ದ ಕಪಾತ್ ಕತ್ತಿಯಿಂದ ಸಂಜುವಿನ ಮೇಲೆ ಪ್ರಹಾರ ಮಾಡಿದ್ದಾನೆ. ಪರಿಣಾಮ ಸಂಜುವಿನ ಕುತ್ತಿಗೆ ಭಾಗಕ್ಕೆ ಮತ್ತು ಕಾಲು ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಬಳಿಕೆ ಹಲ್ಲೆ ಮಾಡಿದ ವೃದ್ದ ಅಪ್ಪು ಹಲ್ಲೆ ಮಾಡಿದ ಕತ್ತಿಯೊಂದಿಗೆ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿದ್ದ ಸಂಜುವನ್ನು ಗಮನಿಸಿದ ಕಾರ್ಮಿಕ ದಂಪತಿಗಳು ಹೆದರಿ ಮಾಲೀಕ ಗಣೇಶ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಕಾರ್ಮಿಕರೊಂದಿಗೆ ಗಣೇಶ್ ಗಾಯಳುವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಗೆ ತೆರಳಲು ತಿಳಿಸಿದ್ದಾರೆ. ಲರಾತ್ರಿ 10-45 ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ. ಸಂಜು ಮೃತನಾಗುತ್ತಾನೆ. ಸಿಂಧು ( ಮಂಜು ನ ಪತ್ನಿ) ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು