ಇತ್ತೀಚಿನ ಸುದ್ದಿ
ಹೋಟೆಲ್ ಪ್ರಚಾರಕ್ಕಾಗಿ ಮಾಂಸಾಹಾರ ಖಾದ್ಯದೊಂದಿಗೆ ಶ್ರೀಕೃಷ್ಣನ ಚಿತ್ರ: ಮೂವರ ಬಂಧನ
21/04/2026, 20:59
ತಿರುವನಂತಪುರಂ(reporterkarnataka.com):ಹೋಟೆಲ್ವೊಂದರ ಪ್ರಚಾರಕ್ಕಾಗಿ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನೊಳಗೊಂಡ ‘ವಿಷು’ ಹಬ್ಬದ ಪೋಸ್ಟರ್ ಹಂಚಿಕೊಂಡ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಲಂಬೂರು ಮೂಲದ ಹೋಟೆಲ್ ಒಂದು ‘ಕುಝಿ ಮಂದಿ’ ಎನ್ನುವ ಅರೇಬಿಯನ್ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನು ಪ್ರಕಟಿಸಿತ್ತು. ವಿಷಯ ಗೊತ್ತಾಗಿದ್ದು, ಕೂಡಲೇ ‘ಯಮಾಮ ಶವಾಯ’ ಹೋಟೆಲ್ನ ಮಾಲೀಕರು ಮತ್ತು ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅವರನ್ನು ಮಂಕಡ ಪೊಲೀಸ್ ಠಾಣೆಗೆ ಕರೆಸಿ, ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಹೋಟೆಲ್ ಮಾಲೀಕರಾದ ಮುಸ್ತಫಾ ಕುಂದುವಾಯಿಲ್ ಮತ್ತು ಶಾಹುಲ್ ಹಮೀದ್ ಹಾಗೂ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುತ್ತಿದ್ದ ಮುಹಮ್ಮದ್ ಶಾಹಿನ್ ಎಂದು ಗುರುತಿಸಲಾಗಿದೆ.












