ಇತ್ತೀಚಿನ ಸುದ್ದಿ
ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ ಬಾಲಕ ಗಂಭೀರ
20/04/2026, 21:45
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕೆಳಗೂರು ಗ್ರಾಮದ ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ ನಡೆಸಿದ್ದು, ಓರ್ವ ಬಾಲಕ ಗಂಭೀರ ಗಾಯಗೊಂಡಿದ್ದಾನೆ.
ತೋಟದೊಳಗಿನ ಲೈನ್ ಮನೆಗಳ ಬಳಿ ಇರುವ ನಾಯಿಗಳಿಂದ ಅಟ್ಯಾಕ್ ನಡೆದಿದೆ. 7 ವರ್ಷ ಬಾಲಕನ ಮೇಲೆ ಭೀಕರವಾಗಿ ನಾಯಿಗಳು ದಾಳಿ ನಡೆಸಿವೆ.
5-6 ಸಾಕು ನಾಯಿಗಳಿಂದ ಬಾಲಕನ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದೆ. 7 ವರ್ಷದ ಮಾಧವ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಬಾಲಕ ಎಂದು ತಿಳಿದು ಬಂದಿದೆ.
ಬಾಲಜನ ತಲೆ, ಭುಜ, ಕುತ್ತಿಗೆ ಮೇಲೆ ಭೀಕರವಾಗಿ ದಾಳಿ ನಡೆಸಿದೆ.
ಕಾಫಿ ಗಿಡದ ಕಸಿಗೆ ಬಂದಿದ್ದ ತಮಿಳುನಾಡಿನ ಕಾರ್ಮಿಕ ಕುಟುಂಬ 4-5 ವರ್ಷಗಳಿಂದ ಕಾಫಿತೋಟದಲ್ಲೇ ವಾಸ ಮಾಡುತ್ತಿದ್ದಾರೆ. ಬಾಲಕನ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












