6:39 PM Monday25 - May 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:… ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ…

ಇತ್ತೀಚಿನ ಸುದ್ದಿ

ಕಳವಾರು ಪೇಜಾರು ಸಂತ ಜೋಸೆಫರ ಚರ್ಚ್ ನಲ್ಲಿ 242ನೇ ಪವಿತ್ರ ಶಿಲುಬೆಯ ದಾರಿ: ಜಾಗತಿಕ ಶಾಂತಿಗಾಗಿ ಪ್ರಾರ್ಥನೆ

01/04/2026, 11:08

ಮಂಗಳೂರು(reporterkarnataka.com): ಕಳವಾರು ಪೇಜಾರು ಸಂತ ಜೋಸೆಫರ ಚರ್ಚ್ ನಲ್ಲಿ 242ನೇ ಪವಿತ್ರ ಶಿಲುಬೆಯ ದಾರಿ ಮಂಗಳವಾರ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತರು ಶಿಲುಬೆಯ ದಾರಿಯಲ್ಲಿ ಸಾಗಿ ಯೇಸು ಕ್ರೀಸ್ತರ ಕಷ್ಟ ಮರಣವನ್ನು ಸ್ಮರಿಸಿ ಧ್ಯಾನಿಸಿದರು. ನಟನೆಯ ಮೂಲಕ ಆಯೋಜಿಸಲಾದ ಶಿಲುಬೆಯ ದಾರಿ ಭಕ್ತಿ ಪರಾಕಾಷ್ಠೆಯನ್ನು ಹೆಚ್ಚಿಸಿತು. ಪ್ರತೀ ಹಂತದಲ್ಲೂ ಪ್ರತ್ಯೇಕ ವಿಚಾರಗಳನ್ನು ಮುಂದುಟ್ಟುಕೊಂಡು ಪ್ರಾರ್ಥಿಸಲಾಯಿತು. ಕ್ರಿಸ್ತರು ಶಿಲುಬೆ ಮರಣ ಹಾಗೂ ಅವರು ಸಹಿಸಿದ 14 ಹಂತಗಳನ್ನು ವಿವರಿಸುತ್ತಾ, ಶಿಲುಬೆ ಮರಣದ ಮಹತ್ವವನ್ನು ವಿವರಿಸಲಾಯಿತು. ಜಾಗತಿಕ ಶಾಂತಿಗಾಗಿ ಪ್ರಾರ್ಥಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪವಿತ್ರ ಬಲಿಪೂಜೆ ನೆರವೇರಿಸಿ ಶಿಲುಬೆ ಹಾದಿಯಲ್ಲಿ ನಡೆದು ವಿಶೇಷ ಪ್ರಾರ್ಥನೆ ನೆರವೇರಿಸಿದರು. ಆಶೀರ್ವಚನ ನೀಡಿದ ಅವರು, ನಿತ್ಯದ ಜೀವನದಲ್ಲಿ ಯಾರಿಗೆ ಎಂತಹ ಸನ್ನಿವೇಷ ಎದುರಾಗುತ್ತದೆ ಎಂಬುವುದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಕ್ರಿಸ್ತರ ಶಿಲುಬೆ ನಮಗೆಲ್ಲರಿಗೂ ಭರವಸೆಯಾಗಿದೆ. ಶಿಲುಬೆಯ ಹಾದಿಯಲ್ಲಿ ಹಲವು ಬಾರಿ ಕ್ರಿಸ್ತರು ಬಿದ್ದರೂ ಸಹ ಎದ್ದು ಮುಂದೆ ಸಾಗಿದರು. ಅದುವೇ ನಮ್ಮ ಪಯಣದಲ್ಲಿ ಮುನ್ನಡೆಯಲು ಪ್ರೇರಣೆ ಹಾಗೂ ಶಕ್ತಿ. ಯೇಸುವಿನ ಶಿಷ್ಯರಾದ ‘ಯೂದ ಇಸ್ಕರಿಯೋತು’ ಹಾಗೂ ‘ಪೇತ್ರ’ರು ಕ್ರಿಸ್ತರನ್ನು ನಿರಾಕರಿಸಿ ಬಳಿಕ ತಮ್ಮ ತಪ್ಪಿನ ಅರಿವಾದಂತೆ, ನಾವೆಲ್ಲರೂ ಕೂಡ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ನಡೆಯುವ ವ್ಯಕ್ತಿಗಳಾಗೋಣ ಎಂದು ಕರೆ ನೀಡಿದರು.
ವಂ| ವಿಜಯ್ ಮಚಾದೊ ಅವರು ಪ್ರವಚನ ನೀಡಿ, ಯೇಸುಕ್ರೀಸ್ತರು ಶಿಲುಬೆಯ ಕಷ್ಟಗಳನ್ನು ಸೋಲೆಂದು ಸ್ವೀಕರಿಸಲಿಲ್ಲ. ಒಳಿತು ಮಾಡಿದವರಿಗೆ ಕಷ್ಟ ತಪ್ಪಿದ್ದಲ್ಲ ಎಂದು ಅವರು ತಿಳಿದುಕೊಂಡಿದ್ದರು. ಅದಕ್ಕಾಗಿ ಶಿಲುಬೆಯ ಕಷ್ಟಗಳನ್ನು ಅವರು ಗೆಲುವೆಂದು ಸ್ವೀಕರಿಸಿದರು. ದೇವರ ಯೋಜನೆ ಪೂರ್ಣವಾಗಲು ಶಿಲುಬೆ ಮರಣ ಅನಿವಾರ್ಯವೆಂದು ಅವರು ನಂಬಿದ್ದರು. ಶಿಲುಬೆ ಮರಣ ಹಾಗೂ ಪುನರುತ್ಥಾನದ ಮೂಲಕ ದೇವರ ಯೋಜನೆ ಪೂರ್ಣಗೊಳಿಸಿದರು. ಆ ಮೂಲಕ ಶಿಲುಬೆ ಕ್ರೈಸ್ತರಿಗೆ ಗೆಲವು, ಅಭಿಮಾನದ ಸಂಕೇತವಾಗಿ ಮಾರ್ಪಟ್ಟಿತು.
ಪೇಜಾರು ವಲಯದ ಪ್ರಧಾನ ಗುರು ಹಾಗೂ ಗುರುಪುರ ಚರ್ಚ್ ನ ಧರ್ಮಗುರು ವಂ| ರುಡಾಲ್ಫ್ ರವಿ ಡೇಸಾ, ಪೇಜಾರು ಸಂತ ಜೋಸೆಫರ ಚರ್ಚಿನ ಧರ್ಮಗುರು ವಂ| ರೊನಾಲ್ಡ್ ಡಿಸೋಜಾ, ವಾಮಂಜೂರು ಚರ್ಚ್ ನ ಧರ್ಮಗುರು ವಂ| ಜೇಮ್ಸ್ ಡಿಸೋಜಾ, ಪಾಲ್ದನೆ ಚರ್ಚ್ ನ ಧರ್ಮಗುರು ವಂ| ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಮುಕ್ಕ ಚರ್ಚ್ ನ ಧರ್ಮಗುರು ವಂ| ಸ್ಟ್ಯಾನಿ ಪಿಂಟೊ, ವಂ| ಫ್ರಾನ್ಸಿಸ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಶಿಲುಬೆಯ ಹಾದಿಗೂ ಮೊದಲು ಪಾದಯಾತ್ರೆ ನಡೆಯಿತು. ಸಾವಿರಾರು ಕ್ರೈಸ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ಭಿನ್ನಹ ಪ್ರಾರ್ಥನೆ ಹಾಗೂ ದೇವರ ವಾಕ್ಯದ ಧ್ಯಾನ ಕೂಟ, ಕೆಥೋಲಿಕ್ ಧರ್ಮಪ್ರಾಂತದ ಕಾರಿಸ್ಮಾಟಿಕ ಸಂಚಾಲನದ ನಿರ್ದೇಶಕ ವಂ| ಕ್ಲಿಫರ್ಡ್ ಫೆರ್ನಾಂಡೀಸ್ ಅವರ ನೇತೃತ್ವದಲ್ಲಿ ಪವಿತ್ರ ಪರಮ ಪ್ರಸಾದದ ಆರಾಧನೆ ಹಾಗೂ ಆಧ್ಯಾತ್ಮಿಕ ಸೌಖ್ಯಕ್ಕಾಗಿ ಪ್ರಾರ್ಥನೆ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು