2:12 PM Monday22 - June 2026
ಬ್ರೇಕಿಂಗ್ ನ್ಯೂಸ್
ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

Good News | ಮಂಗಳೂರಿಗೆ ಬಂತು ಅಮೆರಿಕದಿಂದ ಎಲ್‌ಪಿಜಿ ಹೊತ್ತ ಹಡಗು: ಬಂದರಿನ 13ನೇ ಬರ್ತ್‌ನಲ್ಲಿ ಲಂಗರು

23/03/2026, 11:40

ಮಂಗಳೂರು(reporterkarnataka.com): ಅಡುಗೆ ಅನಿಲಕ್ಕಾಗಿ ಕರಾವಳಿ ಜನತೆ ಪರದಾಡುತ್ತಿರುವಾಗ ಒಂದು ಗುಡ್ ನ್ಯೂಸ್ ಸಿಕ್ಕಿದೆ.
ಅಮೆರಿಕದ ಟೆಕ್ಸಾಸ್‌ನಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ತುಂಬಿಕೊಂಡು ಬಂದ ಹಡಗು ಮುಂಜಾನೆ ನವಮಂಗಳೂರು ಬಂದರಿನಲ್ಲಿ ಲಂಗರು ಹಾಕಿದೆ. ಇದರೊಂದಿಗೆ ಅನಿಲ ಸರಬರಾಜಿನ ಬಿಗು ಪರಿಸ್ಥಿತಿ ತುಸು ನಿರಾಳಗೊಳ್ಳುವ ನಿರೀಕ್ಷೆ ಮೂಡಿದೆ.
‘ಪಿಕ್ಸಿಸ್ ಪಯೋನೀರ್’ ಹೆಸರಿನ ಈ ಹಡಗು ಫೆ.14ರಂದು ಟೆಕ್ಸಾಸ್‌ನಿಂದ 16,000 ಮೆಟ್ರಿಕ್ ಟನ್ ಎಲ್‌ಪಿಜಿ ಅನಿಲದೊಂದಿಗೆ ಯಾನ ಆರಂಭಿಸಿತ್ತು. ಮೊದಲಿಗೆ ಅದು ಗುಜರಾತ್‌ಗೆ ಬಂದು ಅಲ್ಲಿಂದ ನವಮಂಗಳೂರು ಬಂದರಿಗೆ ಆಗಮಿಸಿದೆ. ಏಜಿಸ್ ಎಂಬ ಖಾಸಗಿ ಕಂಪನಿಗೆ ಎಲ್‌ಪಿಜಿ ಹೊತ್ತು ತಂದ ಕಾರ್ಗೋ ಹಡಗು ಇದಾಗಿದೆ. ಇದು ಈಗ ಮಂಗಳೂರು ಬಂದರಿನೊಳಗಿನ 13ನೇ ಬರ್ತ್‌ನಲ್ಲಿ ಲಂಗರು ಹಾಕಿದೆ. 12 ತಾಸುಗಳಲ್ಲಿ ಇದರಿಂದ ಅನ್‌ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮಂಗಳೂರಿನ ತಣ್ಣೀರುಬಾವಿ ಬಳಿ ಇರುವ ಘಟಕದಲ್ಲಿ ಈ ಅನಿಲವನ್ನು ಸಂಗ್ರಹಿಸಿ, ಅಲ್ಲಿಂದ ಮಾರಾಟ/ವಿತರಣೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು