3:26 PM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಪ್ರಯಾಣಿಕರಿಗೆ ಬಸ್ ಟಿಕೆಟ್ ದರ ಏರಿಕೆ ಭೀತಿ ಬೇಡ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

21/03/2026, 16:53

ಬೆಂಗಳೂರು(reporterkarnataka.com): ಮದ್ಯ ಪ್ರಾಚ್ಯ ಯುದ್ಧದ ಪರಿಣಾಮವಾಗಿ ಇಂಧನ ದರಗಳಲ್ಲಿ ಏರಿಕೆ ಆಗಿದೆ. ಆದರೆ ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರುನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುದ್ಧದ ಪರಿಣಾಮವಾಗಿ ಡೀಸೆಲ್ ದರಗಳು ಏರಿಕೆಯಾಗಿದ್ದು, ಸಾರಿಗೆ ನಿಗಮಗಳು ಬಲ್ಕ್‌ನಲ್ಲಿ ಡೀಸೆಲ್ ಖರೀದಿ ಮಾಡುತ್ತಿರುವುದರಿಂದ ವೆಚ್ಚದ ಒತ್ತಡ ಹೆಚ್ಚಾಗಿದೆ. ಆದರೂ, ಈ ಭಾರವನ್ನು ಪ್ರಯಾಣಿಕರ ಮೇಲೆ ಹಾಕುವ ಉದ್ದೇಶ ಇಲ್ಲ ಎಂದು ತಿಳಿಸಿದ್ದಾರೆ.
ಡೀಸೆಲ್ ದರ ಏರಿಕೆಯಿಂದ ಖರ್ಚು ಹೆಚ್ಚಾಗಿದೆ. ಆದರೆ ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.

*ದೇಶಾದ್ಯಂತ ‘ಪ್ರೀಮಿಯಂ ಪೆಟ್ರೋಲ್’ ಬೆಲೆ ಹೆಚ್ಚಳ!*
ದೇಶದ ಜನರಿಗೆ ಮಧ್ಯ ಪ್ರಾಚ್ಯದ ಯುದ್ಧ ಬಿಸಿ ತಟ್ಟಿದೆ. ದೇಶಾದ್ಯಂತ ಪ್ರೀಮಿಯಂ ಪೆಟ್ರೋಲ್ (Premium Petrol) ಬೆಲೆ ಹೆಚ್ಚಾಗಿದೆ. ಮಾರ್ಚ್ 20, 2026 ರಿಂದ ಜಾರಿಗೆ ಬರುವಂತೆ, ಸ್ಪೀಡ್/ಪವರ್ ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ಹೆಚ್ಚಿಸಲಾಗಿದೆ. ಎಚ್‌ಪಿಸಿಎಲ್‌ನ ಪವರ್ ಪೆಟ್ರೋಲ್ ಮತ್ತು ಐಒಸಿಎಲ್‌ನ ಎಕ್ಸ್‌ಪಿ95 ನಂತಹ ಬ್ರಾಂಡೆಡ್ ಇಂಧನಕ್ಕಷ್ಟೇ ಅನ್ವಯ ಆಗುತ್ತದೆ.
ಯುದ್ಧದ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸುಮಾರು 2 ರಿಂದ 2.50 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಹೊಸ ಬರೆ ಬಿದ್ದಿದೆ.
ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರ 2.35 ರೂಪಾಯಿ, ಬಿಪಿಸಿಎಲ್ ಸ್ಪೀಡ್, ಎಚ್​ಪಿಸಿಎಲ್ ಪವರ್ ಐಓಸಿಎಲ್ ನ XP95 ಪೆಟ್ರೋಲ್ ದರ 2.09 ರೂಪಾಯಿ ಏರಿಸಲಾಗಿದೆ.
ಈ ಹೆಚ್ಚಳವು ಎಚ್‌ಪಿಸಿಎಲ್‌ನ ಪವರ್ ಪೆಟ್ರೋಲ್ ಮತ್ತು ಐಒಸಿಎಲ್‌ನ ಎಕ್ಸ್‌ಪಿ95 ನಂತಹ ಬ್ರಾಂಡೆಡ್ ಇಂಧನ ರೂಪಾಂತರಗಳಿಗೆ ಅನ್ವಯಿಸುತ್ತದೆ ಎಂದು ಡೀಲರ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. ಈ ಪ್ರೀಮಿಯಂ ಇಂಧನಗಳನ್ನು ಸಾಮಾನ್ಯವಾಗಿ ಸುಧಾರಿತ ಎಂಜಿನ್ ಕಾರ್ಯಕ್ಷಮತೆ ಮತ್ತು ವರ್ಧಿತ ಇಂಧನ ದಕ್ಷತೆಗಾಗಿ ಮಾರಾಟ ಮಾಡಲಾಗುತ್ತದೆ.
ಇತರ ಇಂಧನ ಪೂರೈಕೆದಾರರಿಂದಲೂ ದರ ಏರಿಕೆ ಆತಂಕ
ಸದ್ಯ ಶೆಲ್ ಪೆಟ್ರೋಲ್ ಪೂರೈಕೆದಾರರು ಪ್ರತಿ ಲೀಟರ್ ಇಂಧನ ದರದಲ್ಲಿ 2 ರೂಪಾಯಿ ಏರಿಕೆ ಮಾಡಿದ್ದಾರೆ. ಇದೀಗ ಇತರ ಪೂರೈಕೆದಾರರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ. ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಹಾಗೂ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು