7:41 PM Monday5 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ಹಬ್ಬದ ಸ್ಪೆಷಲ್: ಕಾರವಾರ- ಉಡುಪಿ- ಮಂಗಳೂರು- ಬೆಂಗಳೂರಿಗೆ ವಿಶೇಷ ರೈಲು; ವೇಳಾಪಟ್ಟಿ ರೆಡಿ

20/03/2026, 12:21

ಮಂಗಳೂರು(reporterkarnataka.com): ಯುಗಾದಿ, ರಂಜಾನ್ ಹಬ್ಬಕ್ಕೆ ಊರಿಗೆ ಹೋದವರು ವಾಪಸ್ ಬೆಂಗಳೂರು ನಗರಕ್ಕೆ ಆಗಮಿಸಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಮಡಗಾಂವ್‌ನಿಂದ ಹೊರಡಲಿರುವ ರೈಲು ಕಾರವಾರ, ಉಡುಪಿ, ಮಂಗಳೂರು ಮೂಲಕ ಬೆಂಗಳೂರು ನಗರ ತಲುಪಲಿದೆ.
ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರಿಗೆ ಬಂದಿರುವ ಕರಾವಳಿ ಭಾಗದ ಜನರು ವಾಪಾಸು ಬೆಂಗಳೂರಿಗೆ ತೆರಳಲು ರೈಲು ಸೀಟುಗಳ ಲಭ್ಯವಿಲ್ಲ ಎಂಬ ದೂರುಗಳ ಮೇರೆಗ ಮತ್ತೊಮ್ಮೆ ವಿಶೇಷ ರೈಲು ಸೇವೆಯನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಈ ರೈಲು ಮಾರ್ಚ್ 22ರ ಭಾನುವಾರ ಮಡಗಾಂವ್-ಕಾರವಾರ-ಉಡುಪಿ-ಮಂಗಳೂರು ಮೂಲಕ ಸಂಚಾರವನ್ನು ನಡೆಸಲಿದೆ. ಕರಾವಳಿ ಭಾಗದ ಪ್ರಯಾಣಿಕರು ಈ ವಿಶೇಷ ರೈಲು ಸೇವೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

*ವಿಶೇಷ ರೈಲು ವೇಳಾಪಟ್ಟಿ:*
ಈ ವಿಶೇಷ ರೈಲು ಮಡಗಾಂವ್‌ನಿಂದ ಬೆಳಗ್ಗೆ 11ಕ್ಕೆ ಹೊರಡಲಿದೆ. ಕಾರವಾರಕ್ಕೆ ಬೆಳಗ್ಗೆ 11:28, ಗೋಕರ್ಣ ಮಧ್ಯಾಹ್ನ 12:30, ಮುರ್ಡೇಶ್ವರ ಮಧ್ಯಾಹ್ನ 1:40, ಬೈಂದೂರು ಮಧ್ಯಾಹ್ನ 2:12, ಕುಂದಾಪುರ ಮಧ್ಯಾಹ್ನ 2:40, ಬಾರ್ಕೂರು ಮಧ್ಯಾಹ್ನ 2:55, ಉಡುಪಿ ಮಧ್ಯಾಹ್ನ 3:30, ಮುಲ್ಕಿ ಮಧ್ಯಾಹ್ನ 3:58, ಮಂಗಳೂರಿನ ಸುರತ್ಕಲ್ ಮಧ್ಯಾಹ್ನ 4:14 ತಲುಪಲಿದೆ.
ಬಂಟ್ವಾಳ ಸಂಜೆ 6:00, ಕಬಕ ಪುತ್ತೂರು ಸಂಜೆ 6:28, ಸುಬ್ರಹ್ಮಣ್ಯ ಸಂಜೆ 7:50, ಬೆಂಗಳೂರು ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬೆಳಗ್ಗೆ 5:00ಕ್ಕೆ ತಲುಪಲಿದೆ.
ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕರಾವಳಿಗೆ ಬರುವ ಪ್ರಯಾಣಿಕರಿಗೆ ವಿಶೇಷ ರೈಲು ಒದಗಿಸಲಾಗಿತ್ತು. ಆ ರೈಲು ಮಧ್ಯಾಹ್ನದ ಹೊತ್ತು ಹೊರಡಿತ್ತಾದರೂ 700ಕ್ಕೂ ಅಧಿಕ ಸೀಟುಗಳು ಭರ್ತಿಯಾಗಿ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿತ್ತು.
ಇದೀಗ ವಾಪಾಸು ಬೆಂಗಳೂರಿಗೆ ತೆರಳುವ ಕರಾವಳಿ ಭಾಗದ ಪ್ರಯಾಣಿಕರಿಗೆ ಸುಲಭವಾಗುವಂತೆ ಮತ್ತು ಸೋಮವಾರದಂದು ತಮ್ಮ ಕೆಲಸ ಕಾರ್ಯಗಳಿಗೆ ಹಾಜರಾಗುವಂತೆ ಸಮಯವನ್ನು ರೈಲ್ವೆ ಇಲಾಖೆ ಒದಗಿಸಿದ್ದು ಉಪಯುಕ್ತವಾಗಿದೆ. ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿಕೆ ಎಂದು ಸಂಸದರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು