10:42 AM Wednesday7 - October 2026
ಬ್ರೇಕಿಂಗ್ ನ್ಯೂಸ್
ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್

ಇತ್ತೀಚಿನ ಸುದ್ದಿ

Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ಕಾಂಗ್ರೆಸ್ ಮುಖಂಡೆ!

17/03/2026, 23:17

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಾಂಗ್ರೆಸ್ ಮುಖಂಡನೊಬ್ಬನ ವಿರುದ್ಧ ಕೈ ಮುಖಂಡೆ ಪ್ರಧಾನಿ ಮೋದಿ ಅವರಿಗೆ ದೂರು ನೀಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಚೇತನಾ ಎಂಬ ಕಾಂಗ್ರೆಸ್ ಮುಖಂಡೆ
ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಷರೀಫ್ ವಿರುದ್ಧ ದೂರು ನೀಡಿದ್ದಾರೆ.
ರಾಹಿಲ್ ಷರೀಫ್ ಚೇತನಾ ಮನೆ ಬಳಿ ಹೋಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ
ಇದರಿಂದ ತನ್ನ ಗಂಡನ ಕೈಗೆ ಗಾಯವಾಗಿದೆ ಎಂದು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಹಿಲ್ ಷರೀಫ್ ಅಪಾರ್ಟ್ ಮೆಂಟ್ ನಲ್ಲಿ ಮಹಿಳೆ ಜೊತೆಗಿದ್ದ ಪೋಟೋ ವೈರಲ್ ಆಗಿತ್ತು. ಆ ಅಪಾರ್ಟ್ಮೆಂಟ್ ಚೇತನಾಳದ್ದಾಗಿದ್ದು, ಇದೇ ಷರೀಫ್ ಅವರಿಂದ ಬಾಡಿಗೆ ಪಡೆದುಕೊಂಡಿದ್ದ. ಅನ್ಯ ಕೋಮಿನ ಮಹಿಳೆ ಜೊತೆ ಅದೇ ಅಪಾರ್ಟ್‌ಮೆಂಟ್ ನಲ್ಲಿದ್ದ ಫೋಟೋ ವೈರಲ್ ಆಗಿತ್ತು. ಚೇತನಾ ಅವರೇ ಫೋಟೋ ವೈರಲ್ ಮಾಡಿರೋದು ಎಂದು ಮನೆ ಬಳಿ ಹೋಗಿ ರಾಹಿಲ್ ಮಚ್ಚು ಬೀಸಿದ್ದಾನೆ.
ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಇದೀಗ ನ್ಯಾಯಕ್ಕಾಗಿ ಪ್ರಧಾನಿ ಅವರಿಗೆ ಚೇತನಾ ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಸಚಿವಾಲಯ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸೇರಿ ಹಲವರಿಗೆ ಪತ್ರ ಬರೆದಿದ್ದಾರೆ. ಆತನ ಮೊಬೈಲ್ ನಲ್ಲಿ ಹೆಣ್ಣು ಮಕ್ಕಳ ಜೊತೆಗಿರೋ ಫೋಟೋಗಳಿವೆ.
ಹೆಣ್ಣು ಮಕ್ಕಳ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲೆ ಮಾಡುತ್ತಾನೆ ಎಂದು ದೂರು ಕೇಳಿ ಬಂದಿದೆ.
ಆತ ಎಲ್ಲರಿಂದ ರಕ್ಷಣೆಗೆ ಒಳಗಾಗಿದ್ದಾನೆ, ಯಾವುದೇ ಕ್ರಮವಾಗುತ್ತಿಲ್ಲ ಎಂದು ತಿಳಿಸಲಾಗಿದೆ.
ತಿಂಗಳ ಅಂತರದಲ್ಲಿ 2 ಬಾರಿ ರಾಹಿಲ್ ಗಲಾಟೆ ಮಾಡಿದ್ದಾನೆ.
ಸದ್ಯ ಈ ಎಲ್ಲಾ ಬೆಳವಣಿಗೆ ಮಧ್ಯೆ ರಾಹಿಲ್ ಷರೀಫ್ ಕಾಂಗ್ರೆಸ್ಸಿನಿಂದ ಉಚ್ಚಾಟನೆ ಆಗಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು