9:11 AM Wednesday26 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

Raichuru | ಮಸ್ಕಿ ಹಿರೆದಿನ್ನಿಯಲ್ಲಿ ಸಂಭ್ರಮದ ಮಾವರು ಎಲ್ಲಮ್ಮನ ಜಾತ್ರೆ: ಹರಿದು ಬಂದ ಭಕ್ತ ಸಾಗರ

05/02/2026, 20:54

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಾರತ ಹುಣ್ಣಿಮೆ ಮರುದಿನ ವೈಭವದಿಂದ ಜಾತ್ರೆ ನೆರವೇರಿತು.


ಮಾವೂರು ಎಲ್ಲಮ್ಮ ಜಾತ್ರೆ ಅಂಗವಾಗಿ ಗುಳ್ಳೆದ ಗಾದಿಲಿಂಗೇಶ್ವರ ಪುರಾಣ ಕಾರ್ಯಕ್ರಮ ಜರಗಿತು. ಪುರಾಣ ಪಟ್ಟಣ ಅಖಂಡಯ್ಯ ಸ್ವಾಮಿ ಗುಡ್ನಾಳ ಅವರ ತಂಡದಿಂದ ಅದ್ಭುತವಾಗಿ ಮೂಡಿಬಂದಿತು.
ಈ ಕಾರ್ಯಕ್ರಮದಲ್ಲಿ ಉಡಿ ತುಂಬುವ ಕಾರ್ಯಕ್ರಮ ಭಕ್ತರು ತಮ್ಮ ಇಷ್ಟಾರ್ಥಗಳನ್ನು ತೀರಿಸಿಕೊಳ್ಳಲು ಭಕ್ತಿಯಿಂದ ಮಾವರು ಎಲ್ಲಮ್ಮ ತಾಯಿಗೆ ಅದ್ಭುತವಾಗಿ ನಡೆದುಕೊಂಡರು.
ಗ್ರಾಮದ ಯುವಕರು ಕಲ್ಲು ಎತ್ತುವ ಸ್ಪರ್ಧೆ ಉಸಿಗಿನ ಚೀಲ ಎತ್ತುವ ಸ್ಪರ್ಧೆ ಸರ್ಕಾರಿ ನೌಕರರಿಂದ ಸಾಯಂಕಾಲ ಮನರಂಜನ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದವು. ಮಾವುರ್ ಎಲ್ಲಮ್ಮನ ಅಪ್ಪಣೆಯಂತೆ ಪ್ರತಿ ವರ್ಷ ಚಿಕ್ಕಲಪರ್ವಿ ತಿಂಥಣಿ ಮೌನೇಶ್ ಒಳಗೆ ಹೋಗಿ ತನು ಬಿಂದಿಗೆ ನೀರು ತರುತ್ತಿದ್ದರು ಈ ವರ್ಷ ಚಿಕ್ಕದಿನ್ನಿ ಕಾಲೇಜ್ ಹತ್ತಿರ ಹೋಗಿ ಭಜನಾ ಡೊಳ್ಳು ಮುಖಾಂತರ ವೈಭವದಿಂದ ಕಳಸ ಕನ್ನಡಿಯೊಂದಿಗೆ ಶ್ರೀ ಗುಡಿಗೆ ತಲುಪಲಾಯಿತು.ಈ ಕಾರ್ಯಕ್ರಮಕ್ಕೆ ಪೂಜ್ಯರು ಶರಣರಾದ ಉಟಕನೂರು ಶ್ರೀ ಮರಿಬಸವ ಲಿಂಗದೇವರು ಗೌಡನ ಬಾವಿ ಅಮರೇಶ ತಾತನವರು ಅಂಕಲಿಮಠದ ಪೂಜ್ಯರು ಮಲ್ಲದಗುಡ್ಡದ ಪೂಜ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸಿದರು..
ಸಹಾಯಕಾಲ ಹುಚ್ಚಯ್ಯ ಕಾರ್ಯಕ್ರಮಕ್ಕೆ ಸುತ್ತ ಮುತ್ತಲಿನ ದಿನ್ನಿ ಕ್ಯಾಂಪ್ ಸುಂಕನೂರು ಚಿಕ್ಕದಿನ್ನಿ ಆಗ ದೂರಗಳಿಂದ ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ಭಕ್ತಿಯಿಂದ ಬೇಡಿಕೊಂಡರು
ಈ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಶ್ರೀಮತಿ ಬಸಮ್ಮ ಹಿರೇಮಠ ಹಿರೇದಿನ್ನಿ, ಮಲ್ಲೇಶ್ವರ ತಾತನ ಗದ್ದಿಗೆ ನಾಗಪ್ಪ ಪೂಜಾರಿ ಎಲ್ಲಪ್ಪ ಪೂಜಾರಿ ಶ್ರೀಮತಿ ಭಾಗ್ಯವಂತಿ ದೇವಿ ಪೂಜಾರಿ ಎಲ್ಲಪ್ಪ ಕಜ್ಜಿ ಮಲ್ಲಪ್ಪ ಮಾನ್ವಿ ವೀರೇಶ್ ಸೇರಿದಂತೆ ಅನೇಕ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು