ಇತ್ತೀಚಿನ ಸುದ್ದಿ
ಕೇಂದ್ರ ಬಜೆಟ್ | 2047ರ ವಿಕಸಿತ ಭಾರತಕ್ಕೆ ಸುಧಾರಣಾ ಎಕ್ಸ್‌ಪ್ರೆಸ್ ಎಂದ ಪ್ರಧಾನಿ ನರೇಂದ್ರ ಮೋದಿ
01/02/2026, 17:48
ನವದೆಹಲಿ(reporterkarnataka.com): ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026 – 2027ನೇ ಸಾಲಿನ ಕೇಂದ್ರ ಸಾಲಿನ ಬಜೆಟ್ ಅನ್ನು ಸುಧಾರಣಾ ಎಕ್ಸ್‌ಪ್ರೆಸ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಈ ಬಾರಿಯ ಬಜೆಟ್ 2047ರ ವಿಕಸಿತ ಭಾರತ್ ಕಡೆಗೆ ಭಾರತದ ಸುಧಾರಣಾ ಎಕ್ಸ್‌ಪ್ರೆಸ್‌ಗೆ ಐತಿಹಾಸಿಕ ಮಾರ್ಗಸೂಚಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಈ ಬಾರಿಯ ಬಜೆಟ್ ಹೆಚ್ಚಿನ ಬಂಡವಾಳ ಖರ್ಚು, ಹಣಕಾಸಿನ ಶಿಸ್ತು ಮತ್ತು ಹಣದುಬ್ಬರ ನಿಯಂತ್ರಣದ ಮೂಲಕ ಭಾರತದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಯುವ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಇನ್ನು ಮುಖ್ಯವಾಗಿ ಈ ಬಾರಿಯ ಬಜೆಟ್ ಭಾರತದ ಸುಧಾರಣಾ ಎಕ್ಸ್‌ಪ್ರೆಸ್‌ಗೆ ಮಾರ್ಗಸೂಚಿಯಾಗಿದೆ. ವಿಕಸಿತ ಭಾರತ 2047ರ ದೃಷ್ಟಿಕೋನ ಹಾಗೂ ಪ್ರಗತಿಗೆ ಈ ಬಜೆಟ್ ಮಾರ್ಗಸೂಚಿಯಾಗಿದೆ. ವಿಕಸಿತ ಭಾರತದ ಪರಿಕಲ್ಪನೆಗೆ ಇಂದಿನ ಬಜೆಟ್ ಅಡಿಪಾಯವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿಗೆ ಬಜೆಟ್ ಭಾಷಣ ಮಾಡುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಬಜೆಟ್‌ನಲ್ಲಿ ಘೋಷಿಸಲಾಗಿರುವ ದಿಟ್ಟ, ಪ್ರತಿಭಾನ್ವಿತ ಯುವಕರಿಗೆ ಮುಕ್ತ ಅವಕಾಶವನ್ನು ನೀಡುವ ಅಂಶಗಳು ಯುವ ಸಬಲೀಕರಣಕ್ಕೆ ವೇದಿಕೆಯಾಗಲಿದೆ. ಬಜೆಟ್ ಹಣಕಾಸಿನ ಕೊರತೆಯನ್ನು ಕಡಿಮೆ ಮಾಡುವುದು ಹಾಗೂ ಹಣದುಬ್ಬರವನ್ನು ನಿಯಂತ್ರಣ ಮಾಡುವ ಉದ್ದೇಶಗಳನ್ನು ಒಳಗೊಂಡಿದೆ. ಈ ಬಜೆಟ್ ಭಾರತದ ಜಾಗತಿಕ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ. ಭಾರತದ 140 ಕೋಟಿ ಜನರು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಬಗ್ಗೆ ತೃಪ್ತರಾಗಿದ್ದಾರೆ.
*Railway Budget 2026:* ‘ಕೇಂದ್ರವು ಬೆಂಗಳೂರು- ಪುಣೆ ಹೈಸ್ಟೀಡ್ ರೈಲು ಕಾರಿಡಾರ್ ಕೈ ಬಿಟ್ಟಿದೆ’
ಅಲ್ಲದೇ ಕೆಲವೇ ದಿನಗಳಲ್ಲಿ ನಾವು ವಿಶ್ವದ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕ ಶಕ್ತಿಯಾಗುವುದನ್ನು ನಿರೀಕ್ಷಿಸುತ್ತಿದ್ದೇವೆ. ಇದು ದೇಶದ ಕೋಟ್ಯಂತರ ಜನರ ಸಂಕಲ್ಪವಾಗಿದೆ. ವಿಶ್ವದ ವಿಶ್ವಾಸಾರ್ಹ, ಪ್ರಜಾಪ್ರಭುತ್ವ ಪಾಲುದಾರರಾಗಿ ಮತ್ತು ವಿಶ್ವಾಸಾರ್ಹ ಗುಣಮಟ್ಟದ ಪೂರೈಕೆದಾರರಾಗಿ, ಭಾರತದ ಪಾತ್ರ ನಿರಂತರವಾಗಿ ವಿಸ್ತರಿಸುತ್ತಲೇ ಇದೆ.
ಇನ್ನು ಭಾರತವೂ ಈಚೆಗೆ ಐರೋಪ್ಯ ಒಕ್ಕೂಟದೊಂದಿಗೆ ಸಹಿ ಹಾಕಿದೆ. ಈ ವ್ಯಾಪಾರ ಒಪ್ಪಂದಗಳ ಗರಿಷ್ಠ ಲಾಭವಾಗಲಿದೆ. ಇದು ಎಲ್ಲಾ ಒಪ್ಪಂದಗಳ ತಾಯಿ, ಭಾರತದ ಯುವಜನರಿಗೆ, ಭಾರತದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಲಾಭವಾಗಲಿದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದೂ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲಿ ಹೇಳಿದ್ದಾರೆ.
ಕೇಂದ್ರ ಬಜೆಟ್‌ನಲ್ಲಿ ಟರ್ಟಲ್ ಟ್ರೇಲ್ಸ್‌ಗೆ ಒತ್ತು; ಕರ್ನಾಟಕದ ಕರಾವಳಿ ಪ್ರವಾಸೋದ್ಯಮಕ್ಕೆ ಆಮೆ ತೋರಲಿದೆ ಹೊಸ ದಿಕ್ಕು
*ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ:*
ಇನ್ನು ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗಿದೆ. ವಿಶೇಷವಾಗಿ ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ಮಹತ್ವದ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಬಜೆಟ್‌ನಲ್ಲಿ ವಿಶೇಷವಾಗಿ ಈಶಾನ್ಯ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.













