3:19 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ

29/01/2026, 16:18

ಬೆಂಗಳೂರು(reporterkarnataka.com): ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ಸಮೀಕ್ಷೆ ವರದಿ ಹೊರಗೆ ಬಂದಿದೆ. ಭಾರತವು ಕಳೆದ ಕೊವಿಡ್ ನಂತರದ ವರ್ಷಗಳಲ್ಲಿ ಆರ್ಥಿಕವಾಗಿ ಬೆಳೆಯಲು ಹೇಗೆ ಸಾಧ್ಯವಾಗಿದೆ ಎಂಬುದನ್ನು ಈ ವರದಿ ಸ್ಪಷ್ಟವಾಗಿ ಹೇಳುತ್ತದೆ, ಮುಂದಿನ ವರ್ಷ ಶೇ 7.4 ರಷ್ಟು ಆರ್ಥಿಕ ಬೆಳವಣಿಗೆ ಆಗುತ್ತಿರುವುದು ಕೇಂದ್ರ ಸಕಾರ ತೆಗೆದುಕೊಂಡ ನಿರ್ಣಯಗಳೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು ಇಡೀ ಜನಗತ್ತಿನಲಿ ಆರ್ಥಿಕ ಸಂಕಷ್ಟ ಇರುವಂಥ ಸಂದರ್ಭದಲ್ಲಿ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಆಗುತ್ತಿರುವುದು ದೇಶ ಬೆಳವಣಿಗೆ ಹೊಂದುತ್ತಿರುವುದು ಕಾಣುತ್ತದೆ. ಕಳೆದ ವರ್ಷ ಜಿ ಎಸ್ ಟಿ ಯಲ್ಲಿ ಸುಧಾರಣೆ ತಂದಿರುವುದರಿಂದ ಜನರ ಕೈಯಲ್ಲಿ ಹಣ ಬರುತ್ತಿರುವುದರಿಂದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ. ಅದೇ ರೀತಿ ಕಳೆದ ವರ್ಷ ಕೇಂದ್ರ ಬಜೆಟ್ ನಲ್ಲಿ ತೆರಿಗೆ ಕಡಿತ ಮಾಡಿ ಇನ್ ಕಮ್ ಟ್ಯಾಕ್ಸ್ ರಿಯಾಯ್ತಿ ನೀಡಿರುವುದನ್ನು ಜನರು ಸದುಪಯೋಗ ಪಡೆಸಿಕೊಂಡಿದ್ದು, ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಮೂರನೆಯದ್ದು ವಿತ್ತಿಯ ಕೊರತೆ 9.2 ಇದ್ದಿದ್ದು 4.4 ಗೆ ಇಳಿದಿರುವುದು ಆರ್ಥಿಕ ನಿರ್ವಹಣೆಯಲ್ಲಿ ಸಮತೋಲನ ಕಾಯ್ದುಕೊಂಡಿರುವುದನ್ನು ತೋರಿಸುತ್ತದೆ. ಅದೇ ರೀತಿ ಹಣದುಬ್ಬರ ಕಡಿಮೆಯಾಗಿ ಬೆಲೆ ಏರಿಕೆ ನಿಯಂತ್ರಣದಲ್ಲಿದ್ದು ಆರ್ಥಿಕ ಬಳವಣಿಗೆಯಾಗಿರುವುದು ಒಳ್ಳೆಯ ಲಕ್ಷಣ ಕೂಡ. ಅದೇ ರೀತಿ ವಿದೇಶಿ ಬಂಡವಾಳ ಕೂಡ ಹೆಚ್ಚಳ ವಾಗಿದೆ. ಮತ್ತು ಯುರೋಪಿಯನ್ ಟ್ರೇಡ್ ಯೂನಿಯನ್ ಜೊತೆ ಒಪ್ಪಂದ ಮುಂಬರುವ ಅಮೇರಿಕ ಜೊತೆಗಿನ ಒಪ್ಪಂದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಬಲ ತುಂಬುವುದು ಈಗಾಗಲೇ ವರದಿಯಲ್ಲಿ ಹೇಳಿರುವುದು. ಇದರಿಂದ ಕಳೆದ ಹಲವಾರು ವರ್ಷಗಳಲ್ಲಿ ಆರ್ಥಿಕ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಹೂಡಿಕೆ ಮಾಡಿದೆ, ಅದರ ಲಾಭ ಬರುವಂತ ದಿನಗಳಲ್ಲಿ ಆಗುತ್ತದೆ ಎನ್ನುವ ನಿರೀಕ್ಷೆ ಈ ರಿಪೋರ್ಟ್ ನಲ್ಲಿ ಇರುವುದರಿಂದ ಒಂದು ಸದೃಢವಾಗಿರುವ ಆರ್ಥಿಕ ನಿರ್ವಹಣೆ ಮತ್ತು ಆರ್ಥಿಕ ಬೆಳವಣಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಭಲ ನಾಯಕತ್ವದಿಂದ ಎನ್ನುವಂಥದ್ದು ಸ್ಪಷ್ಟ. ಇದು ಬರುವಂತ ದಿನಗಳಲ್ಲಿ ಮುಂದುವರೆದರೆ ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವಂಥದ್ದು ಖಂಡಿತವಾಗಿದೆ. ಇದು ಒಳ್ಳೆಯ ಬೆಳವಣಿಗೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು