5:22 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಬಾಲ ಪ್ರತಿಭೆಗಳಾದ ಲಾಲಿತ್ಯ, ಪೂರ್ವಿ ಕಟೀಲು ಆಗಸ್ಟ್ ತಿಂಗಳ ಟಾಪರ್

08/09/2021, 21:56

ಮಂಗಳೂರು(reporterkarnataka.com):

ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಲಾಲಿತ್ಯ ಕುಮಾರ್ ಹಾಗೂ ಪೂರ್ವಿ ಕಟೀಲ್ ಆಯ್ಕೆಗೊಂಡಿದ್ದಾರೆ.

ಲಾಲಿತ್ಯ ಕುಮಾರ್ ಹುಟ್ಟಿದು ಶಿಲ್ಪ ಕಲೆಗಳ ತವರೂರಾದ ಬೇಲೂರಿನಲ್ಲಿ. 3 ವರ್ಷದಿಂದಲೇ ಭರತನಾಟ್ಯ, ಸಂಗೀತ ಅಭ್ಯಾಸ ಮಾಡುವುದರ ಜತೆಗೆ ಕರಾಟೆ ಕೂಡ ಕಲಿಯುತ್ತಿದ್ದಾಳೆ. 

ಭರತನಾಟ್ಯವನ್ನು ವಿಶೇಷ ರೀತಿಯಲ್ಲಿ ನೃತ್ಯ ಕರಗತ ಮಾಡಿಕೊಂಡಿದ್ದಾಳೆ. ಪುಟ್ಟ ವಯಸ್ಸಿನಲ್ಲಿಯೇ ಹಲವು ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಹಲವಾರು ಪ್ರೇಕ್ಷಕರ ಮನ ಗೆದ್ದಿದ್ದಾಳೆ.

ನಾಟ್ಯ ಶಾಂತಲೇ ಪುರಸ್ಕಾರ ಸತತ ಎರಡು ಬಾರಿ ಪಡೆದಿದ್ದಾಳೆ. ಅಷ್ಟೇ ಅಲ್ಲದೆ ನಾಟ್ಯ ಚತುರೆ, ನಾಟ್ಯ ಶಿಲ್ಪ, ನಂದಿ ಅವಾರ್ಡ್, ಒನಕೆ ಓಬ್ಬವ್ವ ಪ್ರಶಸ್ತಿ, ಕರುನಾಡ ಕಣ್ಮಣಿ, ಮಂಜುನಾಥ ರಾಷ್ಟ್ರೀಯ. ಪ್ರಶಸ್ತಿ, ಕಲಾರತ್ನ ರಾಷ್ಟ್ರೀಯ ಪ್ರಶಸ್ತಿ, ಕ್ಲಾಸಿಕಲ್ ಐಕಾನ್ ಪ್ರಶಸ್ತಿ, ರಾಷ್ಟೀಯ ನಾಟ್ಯ ಕರಾವಳಿ ಪ್ರಶಸ್ತಿ, ವಾಯ್ಸ್ ಆಫ್ ಆರಾಧನಾ ಅವಾರ್ಡ್  ಹೀಗೆ ಇನ್ನು ಹಲವಾರು ಪ್ರಶಸ್ತಿ ಪಡೆದಿದ್ದಾಳೆ.

ಪುಟ್ಟ ವಯಸ್ಸಿನಲ್ಲಿಯೇ ಸುಮಾರು 8 ರೆಕಾರ್ಡ್ ಗಳನ್ನು ಸಹ ತನದಾಗಿಸಿಕೊಂಡಿದ್ದಾಳೆ

ಪೂರ್ವಿ ಕಟೀಲು 10ನೇ ತರಗತಿ ವಿದ್ಯಾರ್ಥಿನಿ. ಮುಲ್ಕಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಿಕ್ಷಣ ಪಡೆಯುತ್ತಿದ್ದಾಳೆ. ತಂದೆ  ಕುಮಾರ್ ಡಿ. ಶೆಟ್ಟಿ  ಹಾಗೂ ತಾಯಿ ರೇಣುಕಾ ಕೆ. ಶೆಟ್ಟಿ.

ಕಿಲ್ಪಾಡಿ ವಿದ್ಯಾ ಪೀಠದಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತಿರುವ ಪೂರ್ವಿ ಒಂದು ವರುಷ ಯಕ್ಷಗಾನ ಕಲಿತು ಲಿಂಗಪ್ಪಯ್ಯಕಾಡಿನಲ್ಲಿ ಸ್ಟೇಜ್ ಪೋಗ್ರಾಮ್ ಕೊಟ್ಟಿದ್ದಾಳೆ. ವಿದ್ಯಾಶ್ರೀ ರಾಧಾಕೃಷ್ಣ ಅವರಿಂದ ಮೂರು ವರುಷದಿಂದ ಭರತನಾಟ್ಯ ಕಲಿಯುತ್ತಿದ್ದಾಳೆ. ಶಿಮಂತೂರು, ಗಿಡಿಗೆರೆ, ತೋಕೂರು ಇನ್ನೂ ಹಲವಾರು ಕಡೆ ಸ್ಟೇಜ್ ಪ್ರೋಗ್ರಾಮ್ ಕೊಟ್ಟಿದ್ದಾಳೆ. ಸಂಗೀತ ಈಕೆಯ ಕನಸು. ಅದರದಲ್ಲಿ ತುಂಬಾ ಆಸಕ್ತಿ ಇದೆ. ಒಂದು ವರುಷ ಕಲಿತು ಅದನ್ನೇ ಮುಂದುವರಿಸಬೇಕೆಂಬ ಆಸೆ ಈಕೆಯದು.

ಇತ್ತೀಚಿನ ಸುದ್ದಿ

ಜಾಹೀರಾತು