5:35 PM Friday10 - April 2026
ಬ್ರೇಕಿಂಗ್ ನ್ಯೂಸ್
ಚಾಮರಾಜನಗರ; ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ… ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ: ಬಹುತೇಕ ಶಾಂತಿಯುತ ಮತದಾನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಪ್ರದೇಶ… ಎಲ್ಲ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ; ಕುಮಾರಸ್ವಾಮಿನಾ ಯಾರು ಎಂದು ಕೇಳ್ತಾರೆ:…

ಇತ್ತೀಚಿನ ಸುದ್ದಿ

Vijayanagara | ಕೂಡ್ಲಿಗಿ: 3 ವರ್ಷದ ಬಾಲಕಿ ಸೇರಿದಂತೆ ಐದಾರು ಜನರ ಮೇಲರಗಿದ ಬೀದಿನಾಯಿ; ಆತಂಕದಲ್ಲಿ ನಾಗರೀಕರು

10/04/2026, 17:01

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಒಂದನೇ ವಾರ್ಡ್ ಬಸ್ ನಿಲ್ದಾಣದ ಹಿಂಭಾಗದಲ್ಲಿ , ಇಂದು ಬೀದಿ ನಾಯಿ ಮೂರು ವರ್ಷದ ಹೆಣ್ಣು ಮಗು ಸೇರಿದಂತೆ. ಐದು ಜನರ ಮೈಲೆ ಎರಗಿ , ಗಂಭೀರ ಗಾಯಗೊಳಿಸಿರುವ ಘಟನೆ ಇಂದು ಜರುಗಿದೆ. ಗಾಯಾಳುಗಳು ಸಾರ್ವಜನಿಕ ಆಸ್ಪತ್ರೆಗೆ ತೆರಳಿ , ಚಿಕಿತ್ಸೆ ಪಡೆದಿದ್ದು ನಾಗರೀಕರು ತೀವ್ರ ಆತಂಕದಲ್ಲಿದ್ದಾರೆ. ಒಂದು ಬೀದಿನಾಯಿಯು ಇಂದು ಬೆಳಿಗ್ಗೆಯಿಂದ, ಸಂಜೆಯವರೆಗೆ ವಿನಾಕಾರಣ ಐದು ಜನರ ಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿದೆ. ಕೆ.ಎಸ್.ಆರ್ ಟಿಸಿ ಬಸ್ ಡಿಪೋ ಹಿಂಭಾಗದಲ್ಲಿ ವಾಸವಿರುವ , ಶ್ರೀನಿವಾಸ್ ಎಂಬುವವರ ಮಗಳ ಮಗಳು , ( ಮೊಮ್ಮಗಳು)ಮೂರು ವರ್ಷದ ಬಾಲಕಿ ಶ್ರೀನಿಧಿ. ಸಂಜೆ ಹೊತ್ತಲ್ಲಿ ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿರುವ ಸಂದರ್ಭದಲ್ಲಿ , ಬೀದಿ ನಾಯಿ ಏಕಾ ಏಕಿ ಮಗುವಿನ ಮೇಲೆ ಎರಗಿ ಬಾಲಕಿಯ ಕತ್ತಿಗೆ ಬಾಯಿ ಹಾಕಿ ಎಳೆದಾಡಿದೆ‌. ನಂತರ ಬಾಲಕಿಯ ಸೊಂಟದ ಭಾಗಕ್ಕೆ ಬಾಯಿ ಹಾಕಿ ತೀವ್ರವಾಗಿ ಗಾಯಗೊಳಿಸಿದೆ. ಬಾಲಕಿ ತೀವ್ರವಾಗಿ ಕಿರುಚಾಡಿ ಅರುಚಾಡಿದ್ದು , ಮನೆಯೊಳಗಿಂದ ಪೋಷಕರು ಹಾಗೂ ನೆರೆದವರು ನಾಯಿಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಪೋಷಕರು ಕೂಡಲೇ ಬಾಲಕಿಯನ್ನು , ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ್ದು , ಚುಚುಮದ್ದು ನೀಡಿದ್ದಾರೆ ಮತ್ತು , ಅನುಸರಿಸಬೇಕಾಗಿರುವ ಅಗತ್ಯ ನಿರ್ಧೇಶನಗಳನ್ನು ಪೋಷಕರಿಗೆ ತಿಳಿ ಹೇಳಿದ್ದಾರೆ.


ಅಲ್ಲದೇ ಇದೇ ನಾಯಿಯು ಈ ಮುನ್ನ , ಅದೇ ಏರಿಯಾದಲ್ಲಿ ಸಂಚರಿಸುವ ಇನ್ನೂ ನಾಲ್ಕು ಜನರ ಮೇಲೆ ಎರಗಿ ತೀವ್ರವಾಗಿ ಗಾಯಗೊಳಿಸಿದೆ ಎಂದು ನಾಗರೀಕರು ತಿಳಿಸಿದ್ದಾರೆ. ಈ ನಾಯಿಯು ಬೀದಿ ನಾಯಿಯಾಗಿದ್ದು ,ಅದು ಈವರೆಗೆ ಈ ಹಿಂದೆ ಈತರ ಯಾರ ಮೇಲೂ ಎರಗಿರಲಿಲ್ಲವಂತೆ. ಆದ್ರೆ ಇವತ್ತು ಬೆಳಿಗ್ಗೆ ಯಿಂದ ಸಂಜೆಯವರೆಗೆ , ಬಾಲಕಿ ಶ್ರೀನಿಧಿ ಸೇರಿದಂತೆ ಹತ್ತಿರದ ಹಾಸ್ಟೆಲ್ ವಿದ್ಯಾರ್ಥಿಯ ಮೇಲೆ ಎರಗಿ ಗಾಯಗೊಳಿಸಿದೆ. ಮತ್ತು ಇತರೆ ಅದೇ ಮಾರ್ಗದಲ್ಲಿ ಸಂರಿಸುವ , ನಾಲ್ವರ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ ಎಂದು ಅಲ್ಲಿಯ ವಾಸಿಗಳು ತಿಳಿಸಿದ್ದಾರೆ.
ಬೀದಿ ನಾಯಿ ದಾಳಿಗೆ , ಒಂದೇ ದಿನದಲ್ಲಿ ಐದು ಜನರು ತೀವ್ರ ಗಾಯಗೊಂಡು ನರಳಾಡುವಂತಾಗಿದ್ದು. ಘಟನೆಯಿಂದಾಗಿ ಒಂದನೇ ವಾರ್ಡಿನ ವಾಸಿಗಳು ಮಾತ್ರವಲ್ಲ , ಪಟ್ಟಣದ ಎಲ್ಲಾ ವಾರ್ಡ್ ಗಳ ನಾಗರೀಕರು ಬೆಚ್ಚಿಬಿದ್ದಿದ್ದಾರೆ ತೀವ್ರ ಆತಂಕಕ್ಕೀಡಾಗಿದ್ದಾರೆ. ಕೂಡಲೇ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು , ದಾಳಿ ಮಾಡಿರುವ ನಾಯಿಯನ್ನು ಸೆರೆ ಹಿಡಿಸಬೇಕು. ಮತ್ತು ಆ ನಾಯಿಯ ಆರೋಗ್ಯ ಸ್ಥಿತಿಗತಿ ಅರಿತ ಬೇಕಿದೆ , ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಅದನ್ನು ಬೇರೆಡೆಗೆ ನಿರ್ಜನ ಪ್ರದೇಶಕ್ಕೆ ಸಾಗಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಪಟ್ಟಣದ ಹಲವೆಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು , ಅವುಗಳನ್ನು ಕೂಡಲೇ ಸೆರೆಹಿಡಿದು ಸೂಕ್ತ ಚಿಕಿತ್ಸೆ ನೀಡಿ. ಜನವಸತಿ ರಹಿತ ನಿರ್ಜನ ಪ್ರದೇಶಗಳಿಗೆ , ಅವುಗಳನ್ನು ಸಾಗಿಸಬೇಕಾಗಿದೆ. ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು , ಕೂಡಲೇ ಅಗತ್ಯ ಕ್ರಮ ಜರುಗಿಸಬೆೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ಹಿರಿಯ ಮುಖಂಡರು , ಹಾಗೂ ಪತ್ರಕರ್ತರಾಗಿರುವ ವಿ. ಜಿ. ವೃಷಭೇಂದ್ರ ಸೇರಿದಂತೆ. ಪಟ್ಟಣದ ಹಿರಿಯ ನಾಗರೀಕರ , ವಿವಿದ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು