6:20 PM Thursday15 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ವತ್ ಸ್ಫೂರ್ತಿ ಸಂಚಿಕೆ ಮೊದಲನೇ ಭಾಗದ ಅನಾವರಣ

10/07/2024, 20:55

ಮಂಗಳೂರು(reporterkarnataka.com): ಮಕ್ಕಳಿಗೆ ಸ್ಫೂರ್ತಿ ತುಂಬಿ ಓದಿನಡೆಗೆ ಹುರುದುಂಬಿಸಿ, ಪಿಯುಸಿಯಲ್ಲಿಯೇ ಮಹತ್ತರವಾದುದ್ದನ್ನ ಸಾಧಿಸಿ, ಭವಿಷ್ಯ ರೂಪಿಸಿಕೊಳ್ಳುವ ದೃಷ್ಟಿಯಿಂದ ವಿದ್ವತ್ ಪಿಯು ಕಾಲೇಜಿನಲ್ಲಿ ಮಹತ್ವದ ಓರಿಯಂಟೇಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ವತ್ ಸ್ಫೂರ್ತಿ ಸಂಚಿಕೆಯ ( Motivational Edition) ಮೊದಲನೇ ಭಾಗವಾದ ಈ ಕಾರ್ಯಕ್ರಮವನ್ನ ವಿದ್ವತ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ ಅವರು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗೆ ಓದುವ ವಿಧಾನ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ಕೆಲವು ವೈಜ್ಞಾನಿಕ ಸಲಹೆಗಳನ್ನೊಳಗೊಂಡಿದ್ದಲ್ಲದೇ, ಪಿಯು ಹಂತದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ವಿಸ್ತೃತ ಮಾಹಿತಿ, ಮಕ್ಕಳು ಸಾಧನೆ ಮಾಡುವ ಇಚ್ಛೆ ಇರುವವರು ಸಮಯವನ್ನ ಹೇಗೆ ಉಪಯೋಗಿಸಿಕೊಳ್ಳಬೇಕು, ಪ್ರತಿದಿನದ ದಿನಚರಿ ಹೇಗಿರಬೇಕು, ಬೇಸಿಕ್ಸ್ ಗಳನ್ನ ಹೇಗೆ ವರ್ಕ್ ಮಾಡಿಕೊಳ್ಳಬೇಕು, ಮನೆಯ ಕಷ್ಟದ ಪರಿಸ್ಥಿತಿಯನ್ನ ಹೇಗೆ ತೆಗೆದುಕೊಳ್ಳಬೇಕು, ಕೊರತೆಯನ್ನೇ ಹೇಗೆ ಮೆಟ್ಟಿನಿಲ್ಲಬೇಕು, ಪೋಷಕರ ಆಸೆಗಳೇನಾಗಿರುತ್ತವೆ ಹಾಗೂ ಅವುಗಳನ್ನ ಹೇಗೆ ಗಂಭೀರವಾಗಿ ಪರಿಗಣಿಸಬೇಕು ಎಂಬಿತ್ಯಾದಿ ಸೂಕ್ಷ್ಮಗಳನ್ನ ಮನಮುಟ್ಟುವಂತೆ ಎಲ್ಲಾ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ವಿದ್ವತ್ ಪಿಯು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರತಾಪ್ ದೊಡ್ಡಮನಿಯವರು ವಿದ್ವತ್ ಕಾಲೇಜಿನ ಪರೀಕ್ಷಾ ಮಾದರಿ, ಕೌನ್ಸಲಿಂಗ್ ಮಾದರಿ ಹಾಗೂ ಸಾಧಕ ಮಾದರಿಯ ಸಮಗ್ರ ಮಾಹಿತಿ ನೀಡಿದರು.
ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷರಾದ ಸುಭಾಶ್ವಂದ್ರ ಶೆಟ್ಟಿಯವರು ವಿದ್ವತ್ ಪ್ರತಿಷ್ಠಾನದ ಭವಿಷ್ಯದ ಕನಸನ್ನು ವ್ಯಕ್ತಪಡಿಸಿ, ಮಹತ್ವದ ಪಿಯು ಶಿಕ್ಷಣಕ್ಕೆ ವಿದ್ವತ್ ಕರ್ನಾಟಕದ ಮಹತ್ವಾಕಾಂಕ್ಷಿ ಮಕ್ಕಳಿಗೆ ಹೇಗೆ ವೇದಿಕೆಯಾಗಲಿದೆ ಎಂಬುದನ್ನ ತಿಳಿಸಿದರು.
ಪ್ರಾಂಶುಪಾಲರಾದ ಜಯೇಂದ್ರ ಬಂದ್ಯಾನ್ ವಿದ್ವತ್ ಡಿಜಿಟಲ್ ಪ್ಲಾಟ್ ಫಾರಂ ‘ವಿದ್ವತ್ ಯುಟಿಲಿಟಿ ಆ್ಯಪ್’ ಅನ್ನು ಪರಿಚಯಿಸಿದರು.
ವಿದ್ವತ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಪ್ರಜ್ವಲ್ ರೈ ಹಾಗೂ ಖಜಾಂಚಿ ಎಂ. ಕೆ. ಕಾಶೀನಾಥ್ ಅವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು