ಇತ್ತೀಚಿನ ಸುದ್ದಿ
ಅಂಡರ್ 19 ವಿಶ್ವಕಪ್: ಬಿಸಿಸಿಐಯಿಂದ ಟೀಮ್ ಇಂಡಿಯಾ ಪ್ರಕಟ; ದಿಲ್ಲಿಯ ಯಶ್ ಧುಲ್ ನಾಯಕ
20/12/2021, 11:45
ಹೊಸದಿಲ್ಲಿ(reporterkarnataka.com):
ವೆಸ್ಟ್ ಇಂಡೀಸ್ನಲ್ಲಿ ಜನವರಿ 14ರಿಂದ ಫೆಬ್ರವರಿ 5ರವರೆಗೆ ನಡೆಯುವ 2022ರ ಅಂಡರ್ 19 ವಿಶ್ವಕಪ್ಗಾಗಿ ಬಿಸಿಸಿಐ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ.
ದಿಲ್ಲಿಯ ಯಶ್ ಧುಲ್ ನಾಯಕನಾಗಿ ಮತ್ತು ಆಂಧ್ರಪ್ರದೇಶದ ಎಸ್ ಕೆ ರಶೀದ್ ಉಪನಾಯಕನಾಗಿ ನೇಮಕವಾಗಿದ್ದಾರೆ.
ಈ 14ನೇ ಆವೃತ್ತಿಯ ಟೂರ್ನಿಯಲ್ಲಿ 16 ದೇಶಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು 4 ಕೆರಿಬಿಯನ್ ದೇಶಗಳಲ್ಲಿ ನಡೆಯಲಿವೆ.
ಯಶ್ ಧುಲ್(ನಾಯಕ, ಡೆಲ್ಲಿ), ಹರ್ನೂರ್ ಸಿಂಗ್(UTCA ಚಂಡೀಗಡ) ಅಂಗ್ಕ್ರಿಶ್ ರಘವಂಶಿ(ಮುಂಬೈ), ಎಸ್ಕೆ ರಶೀದ್(ಆಂದ್ರ ಪ್ರದೇಶ), ನಿಶಾಂತ್ ಸಿಂಧು(ಹರಿಯಾಣ), ಸಿದ್ಧಾರ್ಥ್ ಯಾದವ್(ಉತ್ತರಪ್ರದೇಶ), ಅನೀಶ್ವರ್ ಗೌತಮ್(ಕರ್ನಾಟಕ), ದಿನೇಶ್ ಬಾನ(ವಿಕೀ, ಹರಿಯಾಣ) ಆರಾಧ್ಯ ಯಾದವ್(ವಿಕೆಟ್ ಕೀಪರ್, ಉತ್ತರಪ್ರದೇಶ), ರಾಜ್ ಅಂಗದ್ ಬಾವಾ(UTCA ಚಂಡೀಗಢ), ಮನವ್ ಪ್ರಕಾಶ್(ತಮಿಳುನಾಡು), ಕೌಶಾಲ್ ತಾಂಬೆ(ಮಹಾರಾಷ್ಟ್ರ), ಆರ್ಎಸ್ ಹಂಗಾರ್ಗೆಕರ್ (ಮಹಾರಾಷ್ಟ್ರ), ವಾಸು ವತ್ಸ್(ಉತ್ತರಪ್ರದೇಶ), ವಿಕಿ ಒಸ್ತ್ವಾಲ್(ಮಹಾರಾಷ್ಟ್ರ) , ರವಿಕುಮಾರ್(ಬೆಂಗಾಲ್), ಗರ್ವ್ ಸಂಗ್ವಾನ್(ಹರಿಯಾಣ).
ಮೀಸಲು ಆಟಗಾರರು
ರಿಶಿತ್ ರೆಡ್ಡಿ(ಹೈದರಾಬಾದ್), ಉದಯ್ ಶಹರನ್(ಪಂಜಾಬ್), ಅನಶ್ ಗೋಸಾಯ್(ಸೌರಾಷ್ಟ್ರ), ಅಮೃತ್ ರಾಜ್ ಉಪಾಧ್ಯಾಯ್(ಬೆಂಗಾಲ್), ಪಿಎಂ ಸಿಂಗ್ ರಾಥೋರ್(ರಾಜಸ್ಥಾನ್)
ಭಾರತ U19 ಬಿ ಗುಂಪಿನಲ್ಲಿದ್ದು, ಜನವರಿ 15 ರಂದು ದಕ್ಷಿಣ ಆಫ್ರಿಕಾ, ಜನವರಿ 18ರಂದು ಐರ್ಲೆಂಡ್ ಮತ್ತು ಜನವರಿ 22ರಂದು ಉಗಾಂಡ ವಿರುದ್ಧ ಸೆಣಸಾಡಲಿದೆ.