12:07 PM Thursday28 - May 2026
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: 15 ದಿನದೊಳಗೆ ದುಷ್ಕರ್ಮಿಗಳ ಗುಂಡೇಟಿಗೆ 2 ಕಾಡು ಕೋಣಗಳು… ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಸಿಹಿಸುದ್ದಿ ಕೊಟ್ಟ ಇರಾನ್; 10 ಇಂಡಿಯನ್ ನಾವಿಕರ… Kerala | ಮಾಜಿ ಸಿಎಂ ಪಿಣರಾಯಿ ಮನೆ ಎದುರು ಇ.ಡಿ ವಾಹನಗಳ ಮೇಲೆ… Bangalore | ಐಪಿಎಲ್ ಬೆಟ್ಟಿಂಗ್ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಜನ… ಕಾಂಗ್ರೆಸ್‌ ಹೈಡ್ರಾಮಾಕ್ಕೆ ವಿಜಯೇಂದ್ರ ವ್ಯಂಗ್ಯ: ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದ್ರೂ ಅದು… ಬೆಂಗಳೂರಿಗೆ ಮಹಾಮಾರಿ ಎಬೋಲಾ ಎಂಟ್ರಿ?: ಉಗಾಂಡದ ಮಹಿಳೆ ಐಸೋಲೇಷನ್‌ನಲ್ಲಿ..! ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ 30ರಂದು ಮಂಗಳೂರಿಗೆ: ಧರ್ಮಸ್ಥಳದಲ್ಲಿ ವಾಸ್ತವ್ಯ ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು… ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು…

ಇತ್ತೀಚಿನ ಸುದ್ದಿ

ತೊಕ್ಕೊಟ್ಟು ಜಂಕ್ಷನ್; ದಿನದ 24 ತಾಸು 110 ಅಡಿ ಎತ್ತರದಲ್ಲಿ ಹಾರಲಿದೆ ತ್ರಿವರ್ಣ ಧ್ವಜ!: ಶಾಸಕ ಖಾದರ್ ಈ ಕುರಿತು ಹೇಳಿದ್ದೇನು?

20/07/2022, 18:10

ಮಂಗಳೂರು(reporterkarnataka.com): ಉಳ್ಳಾಲದ ಗೇಟ್ ವೇ ಎಂದೇ ಪರಿಗಣಿಸಲಾದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ 110 ಅಡಿ ಎತ್ತರದಲ್ಲಿ ರಾಷ್ಟ್ರ ಧ್ವಜವನ್ನು 24 ಗಂಟೆಗಳ ಕಾಲ ಹಾರಾಟ ಮಾಡಲು ಧ್ವಜಸ್ತಂಭ ಸಿದ್ಧವಾಗಿದ್ದು ಉಳ್ಳಾಲವನ್ನು ಪಾಕಿಸ್ತಾನ ಅಂತ ಹೇಳಿದವರಿಗೆ ಇದು ಪರದೇಶ ಅಲ್ಲ, ನಮ್ಮ ದೇಶ ಎಂಬ ಭಾವನೆ ಬರಲಿದೆ ಎಂದು ಪ್ರತಿಪಕ್ಷದ ಉಪ ನಾಯಕ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದ‌ರ್ ಪರೋಕ್ಷ ಟಾಂಗ್ ನೀಡಿದ್ದಾರೆ.

ಉಳ್ಳಾಲ ಓವರ್‌ ಬ್ರಿಡ್ಜ್ ಬಳಿ ಧ್ವಜಸ್ತಂಭ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮ ಜತೆ ಮಾತನಾಡಿದ ಖಾದರ್, ಉಳ್ಳಾಲದ ಜನತೆಯ ಗೌರವದ ಸಂಕೇತವಾಗಿ ಧ್ವಜಸ್ತಂಭ ನಿರ್ಮಾಣವಾಗಿದೆ. ಅದರ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭ ದಾಖಲೆ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಕುತ್ತಾರು ದೇರಳಕಟ್ಟೆ ರಸ್ತೆಯ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಶ್ರೀನಿವಾಸ ಮಲ್ಯ ಪ್ರತಿಮೆಯ ನಿರ್ಮಾಣ ಕಾರ್ಯವೂ ನಡೆಯಲಿದೆ ಎಂದರು.


ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಒಟ್ಟು ಎರಡು ಧ್ವಜಸ್ತಂಭ ನಿರ್ಮಾಣವಾಗಲಿದ್ದು, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಸ್ಥಳಾಂತರ ಮಾಡಲೂ ಅಡ್ಡಿಯಿಲ್ಲ ಎಂದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಪಾಧ್ಯಕ್ಷ ಸುರೇಶ್‌ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು