5:11 PM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿ ದಸರಾ ಉತ್ಸವದ ಖರ್ಚು ಪಾರದರ್ಶಕದಿಂದ ಕೂಡಿದೆ: ಸಂದೇಶ್ ಜವಳಿ

03/12/2024, 13:27

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಈ ಬಾರಿ ಎಲ್ಲರ ಸಹಕಾರದಿಂದ ಅತ್ಯಂತ ವೈಭವದಿಂದ ದಸರಾ ಉತ್ಸವ ನಡೆದಿದೆ. ಈ ಬಾರಿ ರಶೀದಿ ಪುಸ್ತಕ ಹಾಗೂ ಸಾರ್ವಜನಿಕರ ದೇಣಿಗೆಯಿಂದ 8,98,395 ರೂ, ಪಟ್ಟಣ ಪಂಚಾಯಿತಿ ವತಿಯಿಂದ 2.50 ಲಕ್ಷ, ಎಲ್ಲಾ ಗ್ರಾಮಪಂಚಾಯಿತಿ ವತಿಯಿಂದ 47000 ದೇಣಿಗೆ ಬಂದಿದೆ ಹಾಗೂ ಕಳೆದ ಬಾರಿ 93341 ರೂ ಉಳಿತಾಯ ಖಾತೆಯಲ್ಲಿ ಇತ್ತು. ಒಟ್ಟು 12 ಲಕ್ಷದ 90 ಸಾವಿರದ 736 ರೂ ಈ ಬಾರಿ ದಸರಾ ಉತ್ಸವಕ್ಕಾಗಿ ದೇಣಿಗೆ ಬಂದಿದೆ ಎಂದು ದಸರಾ ಸಂಚಾಲಕರಾದ ಸಂದೇಶ್ ಜವಳಿ ಹೇಳಿದರು.
ಸೋಮವಾರ ಪಟ್ಟಣದ ಮಯೂರ ಹೋಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 12 ಲಕ್ಷದ 90 ಸಾವಿರದ 736 ರೂ ವೆಚ್ಚದಲ್ಲಿ ಧಾರ್ಮಿಕ ಸಮಿತಿಯ ಅರ್ಚಕರ ದಕ್ಷಿಣೆ, ಹೂವಿನ ಅಲಂಕಾರ, ದೇವಸ್ಥಾನಕ್ಕೆ ದೀಪಾಲಂಕಾರ ಸೇರಿದಂತೆ 61,650 ರೂ ವೆಚ್ಚವಾಗಿದೆ. ಸಾಂಸ್ಕೃತಿಕ ಸಮಿತಿಯ ದಸರಾ ಕವಿಗೋಷ್ಠಿ, ನೃತ್ಯ ಕಾರ್ಯಕ್ರಮ ಸಂಗೀತ ಕಾರ್ಯಕ್ರಮ ಸೇರಿ 1, 52, 965 ರೂ ಖರ್ಚು ಮಾಡಲಾಗಿದೆ.
ಮೆರವಣಿಗೆ ಸಮಿತಿಯ ಚಂಡೆ, ಕೀಲುಕುದುರೆ, ಬ್ಯಾಂಡ್ ಸೆಟ್, ಡೊಳ್ಳುಕುಣಿತ, ಭಜನಾ ಕುಣಿತ, ಸೇರಿ ಒಟ್ಟು 2.55.000 ರೂ ಹಣ ಖರ್ಚು ಮಾಡಿದರೆ ಸ್ತಬ್ದ ಚಿತ್ರ ಸಮಿತಿಗೆ 1.15.000 ರೂ ವೇದಿಕೆಯ ಪೆಂಡಾಲ್, ಶಾಮಿಯಾನ, ಧ್ವನಿ ಮತ್ತು ಬೆಳಕು, ಸನ್ಮಾನ ಸೇರಿ 2.71.660 ರೂ ಖರ್ಚು ಹಾಗೂ ಊಟ ಉಪಹಾರಕ್ಕೆ 89.500 ರೂ ಖರ್ಚು ಪ್ರಚಾರಕ್ಕಾಗಿ 87.372 ರೂ, ಇತರೆ 95.000 ರೂ ಒಟ್ಟು 12.90.736 ರೂ ಆಗಿದೆ ಎಂದರು. ಅದರಲ್ಲಿ ಉಳಿದ 1.62.589 ರೂ ಬ್ಯಾಂಕ್ ಖಾತೆಯಲ್ಲಿ ಇಡಲಾಗಿದೆ ಎಂದರು.
ವಿಶ್ವನಾಥ್ ಶೆಟ್ಟಿ ಮಾಡಿದ ಆರೋಪದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಆದಷ್ಟು ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಕೈಯಲ್ಲಿ ಹಣವನ್ನು ನೀಡದೇ ಆದಷ್ಟು ಚೆಕ್ ಮೂಲಕವೇ ಅದರಲ್ಲೂ ತಹಸೀಲ್ದಾರ್ ಅಕೌಂಟ್ ಗೆ ಜಮಾ ಮಾಡಿ ಅ ಖಾತೆಯಿಂದ ಎಲ್ಲಾರಿಗೂ ಚೆಕ್ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಿದ್ದೇವೆ. ಹಿಂದಿನಂತೆ ಈಗಲೂ ಕೂಡ ಪ್ರಗತಿ ಕೃಷ್ಣ ಬ್ಯಾಂಕ್ ನಲ್ಲಿ ದಸರಾ ಉತ್ಸವ ಸಮಿತಿ ತಹಸೀಲ್ದಾರ್ ಎಂಬ ಹೆಸರಿನಲ್ಲಿಯೇ ಖಾತೆ ಇದೆ ಎಂದರು.
ನೀರಿನಲ್ಲಿ ಇದ್ದ ಮೀನು ಹೊರಗೆ ಹಾಕಿದ ಹಾಗೆ ವಿಶ್ವನಾಥ್ ಶೆಟ್ಟಿ ಚಡಪಡಿಸುತ್ತಿದ್ದಾರೆ. ದಸರಾ ಸಮಿತಿ ಸಂಚಾಲಕರಾಗಲು ಅವಕಾಶ ಸಿಗದ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ದಸರಾ ಉತ್ಸವದಲ್ಲಿ ಅಧಿಕಾರ ಸಿಗದ ಕಾರಣಕ್ಕೆ ಹುಲಿವೇಷ ಸ್ಪರ್ಧೆ ಮಾಡಿದರು. ಆದರೆ ನಾವು ಹುಲಿವೇಷ ಸ್ಪರ್ಧೆ ಮಾಡಿದ್ದು ತಪ್ಪು ಎನ್ನುವುದಿಲ್ಲ, ಜನರಿಗೆ ಯಾವ ಕಾರ್ಯಕ್ರಮ ಇಷ್ಟವೋ ಅದನ್ನು ನೋಡುತ್ತಾರೆ. ಆದರೆ ನಾವು ನಡೆಸಿದ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಆಗಿಲ್ಲ ಎಂದರು.
ದಸರಾ ವಿಷಯದಲ್ಲಿ ವಿಶ್ವನಾಥ್ ಶೆಟ್ಟಿ ಅವರದ್ದೇ ಸಮಸ್ಯೆ, ನಮ್ಮಲ್ಲಿ ಎಲ್ಲಾ ಪಕ್ಷದವರು ಇದ್ದಾರೆ, ಸಮನ್ವಯತೆ ಇದೆ. ಇದು ಯಾವುದೇ ಪಕ್ಷದ ಕಾರ್ಯಕ್ರಮ ಅಲ್ಲ, ನಾವು ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ. ಸಾರ್ವಜನಿಕರು ನೀಡಿರುವ ಹಣ ಪಾರದರ್ಶಕವಾಗಿ ನಿರ್ವಹಣೆ ಮಾಡಿದ್ದೇವೆ ಎಂದರು.
ನಾವು ಬ್ಯಾಂಕ್ ಖಾತೆಯನ್ನು ಮೋಸ ಮಾಡಿಲ್ಲ. ನಮ್ಮ ಹೆಸರಿನಲ್ಲಿ ಖಾತೆ ಮಾಡಿಲ್ಲ. ಸಾರ್ವಜನಿಕರು ನೀಡಿದ ಹಣವನ್ನು ತಹಸೀಲ್ದಾರ್ ಇರುವ ಖಾತೆಯಲ್ಲೇ ಜಮಾ ಮಾಡಲಾಗಿದೆ. ನಾವು ಮೋಸ ಮಾಡಿದ್ದರೆ ರಾಮೇಶ್ವರ ದೇವರೇ ನೋಡಿಕೊಳ್ಳುತ್ತಾನೆ, ಒಂದು ವೇಳೆ ವಿಶ್ವನಾಥ್ ಶೆಟ್ಟಿ ಮೋಸ ಆಗಿದೆ ಎಂದು ಖಚಿತ ಪಡಿಸಿದರೆ ನಾನು ಜಗತ್ತಿನಲ್ಲೇ ಇರುವುದಿಲ್ಲ ಎಂದು ಸಂದೇಶ್ ಜವಳಿ ಸವಾಲು ಎಸೆದರು.
ಈ ಸಂದರ್ಭದಲ್ಲಿ ಸೊಪ್ಪುಗುಡ್ಡೆ ರಾಘವೇಂದ್ರ, ಜಯಪ್ರಕಾಶ್ ಶೆಟ್ಟಿ, ನಯನ ಜಯಪ್ರಕಾಶ್, ಜ್ಯೋತಿ ಮೋಹನ್, ಜ್ಯೋತಿ ದೀಲಿಪ್, ಡಾನ್ ರಾಮಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು