ಇತ್ತೀಚಿನ ಸುದ್ದಿ
ತಲವಾರು ದಾಳಿ ಪ್ರಕರಣ: ಕಾವೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ ಬಂಧನ
22/08/2023, 19:18
ಮಂಗಳೂರು(reporterkarnataka.com): ನಗರದ ಕಾವೂರು ಬಳಿ ಸ್ಕೂಟಿಯಲ್ಲಿ ಬಂದು ತಲವಾರು ದಾಳಿ ನಡೆಸಲು ಯತ್ನಿಸಿದ 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು
ಉರುಂದಾಡಿ ಗುಡ್ಡೆಯ ಚರಣ್, ಸುಮಂತ್ ಬರ್ಮನ್ ಹಾಗೂ ಕೋಡಿಕಲ್ ನ ಅವಿನಾಶ್ ಎಂದು ಗುರುತಿಸಲಾಗಿದೆ. ಕಾವೂರು ಪೊಲೀಸ್ ಕ್ಷಿಪ್ರ ಕಾರ್ಯಾಚರಣೆಯಿಂದ ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರ ಆರೋಪಿಗಳ ದಸ್ತಗಿರಿ ಮಾಡಲಾಗಿದೆ.
ಆಗಸ್ಟ್ 20ರಂದು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂ.ವಿ.ಶೆಟ್ಟಿ ಕಾಲೇಜು ರೋಡ್ ಬಳಿ ಚಂದ್ರಹಾಸ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಚರಣ್, ಸುಮಂತ್ ಬರ್ಮನ್ ಹಾಗೂ ಕೋಡಿಕಲ್ ನ ಅವಿನಾಶ್ ಎಂಬವರು ಸ್ಕೂಟಿಯಲ್ಲಿ ಬಂದು ಅಡ್ಡಹಾಕಿ ತಡೆದು ತಲವಾರು ಬೀಸಿದ್ದಾರೆ. ಅದೃಷ್ಟವರ ಪಿರ್ಯಾದಿಯು ತಪ್ಪಿಸಿಕೊಂಡಿದ್ದು ಆದರೆ ಮುಖಕ್ಕೆ ಗಾಯವಾಗಿರುತ್ತದೆ. ಅದರಂತೆ ಕಾವೂರು ಪೊಲೀಸ್ ಕಾರ್ಯಪೃವತ್ತರಾಗಿ ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎಸಿಪಿ ಮನೋಜ್ ಕುಮಾರ್ ರವರ ಸಲಹೆಯಂತೆ ಪ್ರಕರಣದ ತನಿಖೆಯನ್ನು ಕೈಗೊಂಡು, ಕೃತ್ಯಕ್ಕೆ ಬಳಸಿದ ತಲವಾರು, ವಾಹನ ಮತ್ತು ಆರೋಪಿತರನ್ನು ಬಂಧಿಸುವಲ್ಲಿ ಕಾವೂರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ