8:12 AM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಕಡಲನಗರಿಯ ಶಿಖಾ ಸುಶೀಲ್ ಗೆ ಪ್ರತಿಷ್ಠಿತ ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026 ಕಿರೀಟ

17/02/2026, 20:09

ಮಂಗಳೂರು(reporterkarnataka.com): ಮಂಗಳೂರಿನ ಶಿಖಾ ಸುಶೀಲ್ ಪ್ರತಿಷ್ಠಿತ ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ನಗರದ ಮಿಲಾಗ್ರಿಸ್ ಸಭಾಭವನದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಶಿಖಾ ಸುಶೀಲ್ ಅವರನ್ನ ವಿಜೇತರೆಂದು ಘೋಷಿಸಲಾಯಿತು.

ಸೆರೆನಾ ಎವ್ಜಿನ್ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರೆ ಫೇ ಮಾರ್ಟಿಸ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನಾರದರು. ದೇಶ ವಿದೇಶಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ದ್ವಿತೀಯ ಹಂತಕ್ಕೆ ಇಪ್ಪತ್ತೈದು ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಆತ್ಮಸ್ಥೈರ್ಯ, ಸ್ವ ಪರಿಚಯಿಸುವಿಕೆ, ರೇಂಪ್ ವಾಕ್, ಪ್ರಶ್ನೋತ್ತರಿ, ಹಾಗೂ ಎಕ್ಸ್ ಫಾಕ್ಟರ್ ವಿಭಾಗಳಲ್ಲಿ ಮಿಂಚಿದ ಶಿಖಾ ಸುಶೀಲ್, ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್ ಕಿರೀಟಕ್ಕೆ ಭಾಜನರಾದರು. ಹಿಸ್ನಾ ಇಂಟರ್ ನ್ಯಾಶನಲ್ ನಿರ್ದೇಶಕರಾದ ರೊನಾಲ್ಡ್ ಪಿಂಟೊ , ಪತ್ನಿ ದೊರೊತಿ ಪಿಂಟೊ, ವಿಜೇತರನ್ನು ಕಿರೀಟದ ಜೊತೆಗೆ ತಲಾ ಮೂರು, ಎರಡು ಹಾಗೂ ಒಂದು ಲಕ್ಷದ ನಗದು ಬಹುಮಾನಗಳನ್ನು ನೀಡಿ ಗೌರವಿಸಿದರು. ಅಂತಿಮ ಸುತ್ತಿಗೆ ಪ್ರವೇಶಿಸಿದ ಇತರ ಒಂಭತ್ತು ಸ್ಪರ್ಧಿಗಳು ವೈಯುಕ್ತಿಕ ಬಿರುದುಗಳೊಂದಿಗೆ ತಲಾ ಇಪ್ಪತ್ತೈದು ಸಾವಿರ ನಗದನ್ನು ಪಡೆದುಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು