ಇತ್ತೀಚಿನ ಸುದ್ದಿ
ಶಿರ್ವ: ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ವಾಹನಗಳಿಂದ 41 ಸಾವಿರ ರೂ. ಮೌಲ್ಯದ ಬ್ಯಾಟರಿ, 40 ಲೀಟರ್ ಡೀಸೆಲ್ ಕಳವು
25/10/2021, 17:29
ಸಾಂದರ್ಭಿಕ ಚಿತ್ರ ಶಿರ್ವ(reporterkarnataka.com): ಶಿರ್ವ ಠಾಣೆ ವ್ಯಾಪ್ತಿಯ ಕುರ್ಕಾಲು ಮಲ್ಲಾರು ಗ್ರಾಮದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ವಾಹನಗಳ ಬ್ಯಾಟರಿಗಳು ಕಳವು ಮಾಡಿದ ಘಟನೆ ನಡೆದಿದೆ.
ಮೊಹಮ್ಮದ್ ರಮೀಝ್ ಅವರಿಗೆ ಸೇರಿದ ಎರಡು ಬಸ್ ಹಾಗೂ ಟೆಂಪೊ ವಿನ ಬ್ಯಾಟರಿಗಳು ಹಾಗೂ 40 ಲೀಟರ್ ಡಿಸೇಲ್ ಕಳವು ಮಾಡಿದ್ದಾರೆ. ಸುಮಾರು 41 ಸಾವಿರ ರೂ. ಮೌಲ್ಯದ ವಸ್ತುಗಳು ಕಾಣೆಯಾಗಿದೆ ಎಂದು ಶಿರ್ವ ಠಾಣೆ ಗೆ ಮೊಹಮ್ಮದ್ ರಮೀಝ್ ದೂರು ನೀಡಿದ್ದಾರೆ.
ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.