ಇತ್ತೀಚಿನ ಸುದ್ದಿ
ಶಬರಿಮಲೆ ದೇಗುಲ ಜುಲೈ 17ರಿಂದ 5 ದಿನ ಓಪನ್ : ಯಾರಿಗೆಲ್ಲ ಸಿಗಲಿದೆ ಪ್ರವೇಶ?
13/07/2021, 08:37
ತಿರುವನಂತಪುರ(reporterkarnataka news): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಸ ಪೂಜೆಯ ಅಂಗವಾಗಿ ಜುಲೈ 17ರಿಂದ 21ರ ವರೆಗೆ 5 ದಿನಗಳ ಕಾಲ ದೇಗುಲದ ಬಾಗಿಲು ತೆರೆಯಲಿದೆ.
ಮಲಯಾಳಂ ತಿಂಗಳ ಆಚರಣೆಯ ಸಲುವಾಗಿ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಗರಿಷ್ಠ 5 ಸಾವಿರ ಮಂದಿ ಭಕ್ತರಿಗೆ ಮಾತ್ರ ಅವಕಾಶ ಕೊಡಲಾಗುತ್ತದೆ. ಎರಡು ಡೋಸ್ ಲಸಿಕೆ ಪಡೆದು ಅದರ ಪ್ರಮಾಣ ಪತ್ರ ಹೊಂದಿದರಬೇಕು. 48 ತಾಸು ಹಿಂದೆ ಪಡೆದಿರುವ ಆರ್ ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.