ಇತ್ತೀಚಿನ ಸುದ್ದಿ
ಸರಕಾರ ಘೋಷಿಸಿದ ಪ್ಯಾಕೇಜ್ ಅವೈಜ್ಞಾನಿಕ: ಅಥಣಿಯ ವಕೀಲ ಗೌತಮ್ ಬನಸೋಡೆ ಟೀಕೆ
20/05/2021, 20:48
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಸರಕಾರ ಘೋಷಿಸಿದ ಪ್ಯಾಕೇಜ್ ಅವೈಜ್ಞಾನಿಕವೆಂದು ಅಥಣಿಯ ವಕೀಲ ಡಾ. ಗೌತಮ್ ಬನಸೋಡೆ ಟೀಕಿಸಿದ್ದಾರೆ.
ತಮ್ಮ ಸ್ವಗೃಹದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಡಾ ಗೌತಮ್ ಬನಸೋಡೆ ಅವರು ಕೇವಲ ಧರ್ಮ , ವೃತ್ತಿ, ಆಧರಿಸಿ ಪ್ಯಾಕೇಜ್ ಘೋಷಿಸಲಾಗಿದ್ದು, ಈ ರೀತಿಯ ಅವೈಜ್ಞಾನಿಕ ಪ್ಯಾಕೇಜ್ ನೀಡುವುದು ಸರಿಯಲ್ಲ. ಈಗಾಗಲೇ ರಾಜ್ಯದಲ್ಲಿ ಹಲವಾರು ಜನರು ಲಾಕ್ಡೌನ್ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುವುದರಿಂದ ಎಲ್ಲ ಜನರಿಗೂ ಈ ಪ್ಯಾಕೇಜ್ ತಲುಪುವಂತಾಗಬೇಕು.
ಜಾತಿ ಮತ್ತು ವೃತ್ತಿಯನ್ನು ಗುರುತಿಸಲಾರದೆ ಕೇವಲ ಬಡತನ ರೇಖೆ ಎಂದು ಆಧರಿಸಿ ರೇಷನ್ ಕಾರ್ಡ್ ಮುಖಾಂತರ ಪರಿಹಾರ ನೀಡುವುದರಿಂದ ಸಮಾಜದ ಕಟ್ಟಕಡೆ ವ್ಯಕ್ತಿಗೂ ಸಹ ಈ ಪ್ಯಾಕೇಜ್ ಮೂಡುವಂತಾಗಬೇಕು. ಕೇವಲ ಜಾತಿ ಹಾಗೂ ವೃತ್ತಿಗಳನ್ನು ಆಧರಿಸಿ ಇರುವುದರಿಂದ ಹಲವಾರು ವೃತ್ತಿಯನ್ನು ಮಾಡುವ ಜನರಿಗೆ ದೊರೆಯುವುದಿಲ್ಲ . ಈ ಕೂಡಲೇ ಎಚ್ಚೆತ್ತುಕೊಂಡು ಜನರಿಗೆ ಪ್ಯಾಕೇಜ್ ನೀಡಬೇಕು ಮತ್ತು ಸರಕಾರ ಪತ್ರಕರ್ತರನ್ನು ಫ್ರಂಟ್ಲೈನ್ ವಾರಿಯರ್ ಎಂದು ಎಂದು ಗುರುತಿಸಿದರು ಸಹ ಅವರಿಗೆ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಇದು ಸರಕಾರದ ಒಂದು ನಿರ್ಲಕ್ಷದ ಧೋರಣೆಯಾಗಿದೆ. ಈ ಕೂಡಲೇ ಪತ್ರಕರ್ತರಿಗೂ ಸಹ ಒಂದು ವಿಶೇಷವಾದ ಪ್ಯಾಕೇಜ್ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.