ಇತ್ತೀಚಿನ ಸುದ್ದಿ
ಸಜಿಪ ಜಯನಗರ: 20 ಲಕ್ಷ ಅನುದಾನದಲ್ಲಿ ಶರತ್ ಮಡಿವಾಳ ಮನೆ ಸಂಪರ್ಕ ರಸ್ತೆ ಉದ್ಘಾಟನೆ
25/10/2026, 20:22
ಬಂಟ್ವಾಳ(reporterkarnataka.com): ಸಜಿಪ ಜಯನಗರದಲ್ಲಿ ದಿವಂಗತ ಶರತ್ ಮಡಿವಾಳ ಅವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹20 ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಈ ರಸ್ತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟಿಸಿದರು.



ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗುವಂತೆ ಮನೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಉದ್ಘಾಟನೆಯ ಮೂಲಕ ಸಾರ್ವಜನಿಕ ಬಳಕೆಗೆ ರಸ್ತೆ ಮುಕ್ತಗೊಂಡಿತು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಹಿರಿಯರಾದ ತನಿಯಪ್ಪ ಮಡಿವಾಳ, ಪ್ರಮುಖರಾದ ಸದಾನಂದ ಪಡಿ, ಶಿವಾನಂದ, ಗೋವಿಂದ, ಸುರೇಶ್ ಶೆಟ್ಟಿ, ದಯಾನಂದ ಬಿ.ಎಂ., ಪ್ರಸಾದ್ ಜಯನಗರ, ಪ್ರತಾಪ್ ಅಂಚನ್, ಹೇಮಚಂದ್ರ, ರೂಪೇಶ್ ಆಚಾರ್ಯ, ನಿಖಿಲ್, ಆದಿತ್ಯ, ಗುತ್ತಿಗೆದಾರ ಮನೋಹರ್ ಕರ್ಕೇರ, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.
ಇದಲ್ಲದೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನವೀನ್ ಅಂಚನ್, ಸುಮತಿ ಎಸ್., ಅನಿತಾ ಹಾಗೂ ಸರೋಜಿನಿ ಸೇರಿದಂತೆ ಸ್ಥಳೀಯ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
₹20 ಲಕ್ಷ ಅನುದಾನದಲ್ಲಿ ಪೂರ್ಣಗೊಂಡ ಈ ರಸ್ತೆ ಅಭಿವೃದ್ಧಿ ಕಾಮಗಾರಿಯು ಸ್ಥಳೀಯ ನಿವಾಸಿಗಳಿಗೆ ಸಂಪರ್ಕ ಸೌಲಭ್ಯ ಕಲ್ಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.












