6:06 AM Sunday3 - May 2026
ಬ್ರೇಕಿಂಗ್ ನ್ಯೂಸ್
ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ…

ಇತ್ತೀಚಿನ ಸುದ್ದಿ

ರೋಟರಿ ಜಿಲ್ಲೆ 3181ರ ಪ್ರಥಮ ವಾಶ್ ಗ್ರೂಪ್ ರಾಯಭಾರಿಯಾಗಿ ಡಾ.ರಾಜೇಶ್ ಬೆಜ್ಜಂಗಳ ನೇಮಕ

07/08/2023, 13:33

ಪುತ್ತೂರು(reporterkarnataka.com): ಅಂತಾರಾಷ್ಟ್ರೀಯ ರೋಟರಿಯಲ್ಲಿ ನೀರು ಮತ್ತು ಶುಚಿತ್ವಕ್ಕೆ ಸಂಬಂಧಿಸಿದ ಕ್ರಿಯಾತ್ಮಕ ಗುಂಪು (WASH – water,sanitation ,hygiene) ಇದರ ರೋಟರಿ ಜಿಲ್ಲೆ 3181 ರ ಪ್ರಥಮ ರಾಯಭಾರಿಯಾಗಿ ರೊಟೇರಿಯನ್ ಡಾ. ರಾಜೇಶ್ ಬೆಜ್ಜಂಗಳ ಅವರು ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.
ಅಂತಾರಾಷ್ಟ್ರೀಯ ರೋಟರಿಯು WASH ಚಟುವಟಿಕೆಗಳನ್ನು ಏಷ್ಯಾ ,ಯುರೋಪ್, ಅಮೇರಿಕಾ ಮತ್ತು ಆಫ್ರೀಕನ್ ವಿಭಾಗ ಮಾಡಲಾಗಿದ್ದು 83ನೇ ರಾಯಭಾರಿಯಾಗಿ ರಾಜೇಶ್ ಬೆಜ್ಜಂಗಳ ನೇಮಕಗೊಂಡಿದ್ದಾರೆ. ರೋಟರಿ ಭಾರತದಲ್ಲಿ 16 ಮಂದಿ ಇದ್ದು ಕರ್ನಾಟಕದಲ್ಲಿ ಇವರು ಎರಡನೇ ರಾಯಭಾರಿಯಾಗಿರುತ್ರಾರೆ. ರೋಟರಿ ಜಿಲ್ಲೆ 3181ರ ಎಲ್ಲ ಕ್ಲಬ್ ಗಳಲ್ಲಿ ನಡೆಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಚಟುವಟಿಕೆ ಗಳಿಗೆ ಮಾರ್ಗದರ್ಶನ ಮತ್ತು ದಾಖಲೀಕರಣವು ರಾಯಭಾರಿಗಳ ಜವಾಬ್ದಾರಿಯಾಗಿರುತ್ತದೆ.
ಈ ವಲಯದ ಸೇವಾ ಅನುಭವ ಮತ್ತು ರೋಟರಿಯ 185 online course ಗಳು ಸೇರಿದಂತೆ ವಿಶ್ವಬ್ಯಾಂಕ್, ವಿಶ್ವ ಸಂಸ್ಥೆ ಮತ್ತು ಸ್ವಚ್ಛ ಭಾರತ ಮಿಷನ್ ಗಳ 200 online course ಗಳು ಈ ಸ್ಥಾನ ಪಡೆಯಲು ಸಹಕರಿಸಿತು.
ಪ್ರಸ್ತುತ ಅವರು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ಅಧ್ಯಕ್ಷರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು