ಇತ್ತೀಚಿನ ಸುದ್ದಿ
Rain | ಚಿಕ್ಕಮಗಳೂರು: ಅಲಿಕಲ್ಲು ಸಹಿತ ಧಾರಾಕಾರ ಮಳೆ; ಕಾಫಿ ಬೆಳೆಗಾರರು ಕಂಗಾಲು
08/04/2025, 22:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದೆ. ಅಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಆಲಿಕಲ್ಲು ಮಳೆಯಿಂದ ಮನೆ ಅಂಗಳದ ತುಂಬಾ ಮಲ್ಲಿಗೆ ಹೂ ಸುರಿದಂತೆ ಕಂಡು ಬರುತ್ತಿತ್ತು. ಆಲಿಕಲ್ಲು ಮಳೆಯಿಂದ ಕಾಫಿ ಬೆಳೆಗೆ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಕಾಫಿ ಕಾಯಾಗುವ ವೇಳೆಯಲ್ಲಿ ಆಲಿಕಲ್ಲು ಮಳೆ ಬೆಳೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕಾಫಿ ಮೇಲೆ ಆಲಿಕಲ್ಲು ಬಿದ್ರೆ ಕಾಫಿ ಬೀಜಕ್ಕೆ ಡ್ಯಾಮೇಜ್ ಆಗಿ ಕೊಳೆಯುವ ಸ್ಥಿತಿ ತಲುಪುತ್ತದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಿನ್ನಡಿ, ತರುವೆ, ಬಣಕಲ್, ಅತ್ತಿಗೆರೆ, ಚಾರ್ಮಾಡಿ ಘಾಟ್, ಬಾಳೂರು ಸುತ್ತಮುತ್ತ,
ಕಳಸ, ಬಾಳೆಹೊನ್ನೂರು, ಮೂಡಿಗೆರೆ ತಾಲೂಕಿನ ವಿವಿಧ ಭಾಗದಲ್ಲಿ ಅಬ್ಬರದ ಮಳೆಯಾಗಿದೆ.