1:11 AM Monday31 - August 2026
ಬ್ರೇಕಿಂಗ್ ನ್ಯೂಸ್
*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ

ಇತ್ತೀಚಿನ ಸುದ್ದಿ

ಪೀಠ ಸೇವಕರ ವಾರ್ಷಿಕ ದಿನ: ಆಂಜೆಲೋರ್ ಚರ್ಚ್‌ನಲ್ಲಿ ಹರ್ಷಭರಿತ ಆಚರಣೆ

25/10/2024, 13:47

ಮಂಗಳೂರು(reporterkarnataka.com): ನಗರದ ನಾಗುರಿಯ ಗಾರ್ಡಿಯನ್ ಏಂಜಲ್ ಚರ್ಚ್ ಆಂಜೆಲೋರ್ ನಲ್ಲಿ, ಇದೇ ಅಕ್ಟೋಬರ್ 20ರಂದು ಪೀಠ ಸೇವಕರ ವಾರ್ಷಿಕ ದಿನವನ್ನು ಹರ್ಷಭರಿತವಾಗಿ ಆಚರಿಸಲಾಯಿತು.
ಬೆಳಗ್ಗೆ 9:30ಕ್ಕೆ ಚರ್ಚ್‌ನಲ್ಲಿ ಬಲಿಪೂಜೆಯನ್ನು ಸಲ್ಲಿಸಲಾಯಿತು. ಈ ಬಲಿಪೂಜೆಗೆ ಆಂಜೆಲೋರ್ ಚರ್ಚಿನ ಧರ್ಮಗುರು ವಂ. ಫ್ರೆಡ್ರಿಕ್ ಮೊಂತೇರೊರವರು ಪ್ರಧಾನ ಯಾಜಕರಾಗಿದ್ದರು. ಬಲಿಪೂಜೆಯ ಬಳಿಕ ಚರ್ಚಿನ ಸ್ವರ್ಣ ಮಹೋತ್ಸವ ಸ್ಮಾರಕ ಸಭಾಂಗಣದಲ್ಲಿ ಸಣ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಾರ್ಷಿಕ ವರದಿಯನ್ನು ಹಾಗೂ ವರುಷದ ಹಿಂದೆ ನಡೆದ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣವನ್ನು ನೀಡಿದ ವಸತಿ ಯಾಜಕರಾದ, ವಂ. ಸ್ಟ್ಯಾನಿ ಫೆರ್ನಾಂಡಿಸ್ ಅವರು ಬಲಿ ಪೂಜಾ ಸೇವೆಯಲ್ಲಿ ಪೀಠ ಸೇವಕರ ಪಾತ್ರದ ಮಹತ್ವವನ್ನು ವಿವರಿಸಿ, ಅವರ ನಿಷ್ಠೆಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ವಂ. ಫ್ರೆಡ್ರಿಕ್ ಮೊಂತೇರೊರವರು ಪೀಠ ಸೇವೆ, ಧರ್ಮಗುರು ಮತ್ತು ಧಾರ್ಮಿಕ ಜೀವನದ ಕರೆಗೆ ನೆಲೆ ಎಂದು ವಿವರಿಸಿದರು. ಅಲ್ಲದೆ, ಮಕ್ಕಳು ಪೀಠ ಸೇವೆಗೆ ತೊಡಗಿಸಿಕೊಳ್ಳಲು ಸಹಕರಿಸಿದ ಪಾಲಕರಿಗೆ ಧನ್ಯವಾದಗಳನ್ನು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಪೀಠ ಸೇವಕರು ಸುಂದರ ಮತ್ತು ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಸೇವಾದರ್ಷಿ ಜೀವನ್ ಲೋಬೊ, ಪಾವ್ಲ್ ರೋಡ್ರಿಗಸ್ (ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರು), ಲೋಲಿನಾ ಡಿಸೋಜಾ (ಕಾರ್ಯದರ್ಶಿ), ರೆನಿಟಾ ಮೆನೇಜಸ್ (21 ಆಯೋಗಗಳ ಸಂಯೋಜಕಿ), ಮರಿಯಾ ಡೆಸಾ, ಜ್ಯೋತಿ ಮೊಂತೇರೊ, ಸರಿತಾ ಡಿಸಿಲ್ವಾ (ಪ್ರೇರಕರು) ಮತ್ತು ಪೀಠ ಸೇವಕರ ಸಂಘದ ಅಧ್ಯಕ್ಷೆ ರಿವಾ ಪಿಂಟೊ ಹಾಗೂ ಕಾರ್ಯದರ್ಶಿ ಗ್ಲೆನಿತ್ ಡಿಕುನ್ಹಾ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು