ಇತ್ತೀಚಿನ ಸುದ್ದಿ
Parliament Session | ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ಭೂಸ್ವಾಧೀನ: ಸಂಸತ್ ನಲ್ಲಿ ಗಮನಸಳೆದ ಕ್ಯಾಪ್ಟನ್ ಬ್ರಿಜೇಶ್ ಚೌಟ
28/03/2025, 18:56

ನವದೆಹಲಿ(reporterkarnataka.com): ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ಭೂಸ್ವಾಧೀನ ಮತ್ತು ಅದಕ್ಕೆ ಇರುವ ಅಡೆತಡೆಗಳ ಕುರಿತು ಇಂದು ಶೂನ್ಯ ವೇಳೆಯಲ್ಲಿ ಸಂಸತ್ ನಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗಮನ ಸೆಳೆದರು.
ಈ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮತ್ತು ಮಂಗಳೂರು ವಿಮಾನ ನಿಲ್ದಾಣವನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರ ಮಧ್ಯಪ್ರವೇಶವನ್ನು ಸಂಸದರು ಕೋರಿದರು.