3:33 AM Friday15 - May 2026
ಬ್ರೇಕಿಂಗ್ ನ್ಯೂಸ್
ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ…

ಇತ್ತೀಚಿನ ಸುದ್ದಿ

ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡಿ; ಸಾರ್ವಜನಿಕರಿಗೆ ಮಾರಕವಾಗುವ ಡಿಜೆ ಬೇಡ: ಡಿವೈಎಸ್’ಪಿ ಗಜಾನನ ವಾಮನ ಸುತಾರ

03/09/2024, 16:15

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಗಣಪತಿ ಹಬ್ಬದ ಸಂದರ್ಭದಲ್ಲಿ ದಯವಿಟ್ಟು ಪೊಲೀಸರ ಜೊತೆಗೆ ನೀವು ಕೂಡ ಸಹಕರಿಸಿ. ಗಣೇಶೋತ್ಸವಕ್ಕೆ ಸಂಬಂಧಪಟ್ಟಂತೆ ಪ್ರತಿ ಇಲಾಖೆಯಿಂದ ತಹಸೀಲ್ದಾರ್ ಕಚೇರಿಯಲ್ಲೇ ಒಂದೇ ಕಡೆ ಅನುಮತಿ ಪಡೆಯಬಹುದು. ಇದರಿಂದ ನಿಮ್ಮ ಸಮಯ ಮತ್ತು ಪದೇ ಪದೇ ಅಲೆದಾಟ ಇರುವುದಿಲ್ಲ. ಇನ್ನುಳಿದಂತೆ ಏನಾದರು ಸಮಸ್ಯೆ ಅಥವಾ ಅನುಮಾನ ಇದ್ದರೆ ನಮ್ಮನ್ನು ಸಂಪರ್ಕಿಸಬಹುದು ಎಂದು ಡಿವೈಎಸ್’ಪಿ ಗಜಾನನ ವಾಮನ ಸುತಾರ ಹೇಳಿದರು.
ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಗಣಪತಿ ಉತ್ಸವದ ಸಮಿತಿ ಜೊತೆಗೆ ಮಾತನಾಡಿದ ಅವರು, ಛತ್ರಕೇರಿಯ ಗಣಪತಿ ಪ್ರತಿಯೊಬ್ಬರಿಗೂ ಆದರ್ಶವಾಗಿದೆ.
ಛತ್ರಕೇರಿ ಗಣಪತಿ ಸಮಿತಿಯಿಂದ ವಿಸರ್ಜನೆ ಸಮಯದಲ್ಲಿ ಡಿಜೆ, ಸೌಂಡ್, ಅಶ್ಲೀಲತೇ ಗೀತೆ ಇರುವುದಿಲ್ಲ. ಹಾಗಾಗಿ ಡಿಜೆ ಬದಲಾಗಿ ಜಾನಪದ, ಚಂಡೆಯಂತೆ ಏನಾದರು ಈ ಬಾರಿ ಬದಲಾವಣೆಯನ್ನು ಪ್ರತಿಯೊಬ್ಬರು ಗಣಪತಿ ಸಮಿತಿಯವರು ಮಾಡಿಕೊಳ್ಳಿ. ಯಾವ ರಸ್ತೆಯಲ್ಲಿ ಹೋಗಬೇಕು ಎಂದು ಮೊದಲು ತೀರ್ಮಾನ ತೆಗೆದುಕೊಂಡಿರುತ್ತಿರೋ ಅದೇ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಹೋಗಬೇಕು, ಖಡ್ಡಾಯವಾಗಿ ಯಾವುದೇ ಕಾರಣಕ್ಕೂ ಗಣಪತಿ ಮೆರವಣಿಗೆಯ ರಸ್ತೆ ಬದಲಾವಣೆ ಮಾಡುವಂತಿಲ್ಲ, ಹಾಗೆ ಮದ್ಯಪಾನ ಮಾಡಿ ಕೊಂಡು ಗಣಪತಿ ವಿಸರ್ಜನೆ ಮೆರವಣಿಗೆ ಮಾಡುವಂತಿಲ್ಲ ಎಂದರು.
ಆದಷ್ಟು ಪರಿಸರ ಸ್ನೇಹಿ ಗಣಪತಿಯನ್ನು ಇಡುವಂತೆ ನೋಡಿಕೊಳ್ಳಿ. ನದಿ , ಕೆರೆ, ಬಾವಿ ಜಲಚರಗಳಿಗೆ ತೊಂದರೆ ಆಗದಂತೆ ಮಣ್ಣಿನ ಗಣಪತಿ ಇಡಿ. ಸಮಿತಿಯಿಂದ ಊಟ ಹಾಗೂ ಸತ್ಯನಾರಾಯಣ ಪೂಜೆಯನ್ನು ಪ್ರತಿಯೊಬ್ಬರು ಮಾಡುತ್ತೀರಾ ಊಟದ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಇಡಬೇಕು, ಆ ಸಮಯದಲ್ಲಿ ಬ್ಯಾರಿಕೇಡ್ ಹಾಗೂ ಪೊಲೀಸ್ ವ್ಯವಸ್ಥೆ ಬೇಕಾದರೆ ಮೊದಲೇ ತಿಳಿಸಬೇಕು. ಗಣಪತಿ ಪೆಂಡಾಲ್ ಬಳಿ ಸಮಿತಿಯವರು ಇರಲೇಬೇಕು, ಗಣಪತಿಯನ್ನು ಒಬ್ಬನ್ನನ್ನೇ ಬಿಟ್ಟು ಹೋಗುವಂತಿಲ್ಲ ಎಂದು ಅವರು ತಿಳಿಸಿದರು.
ವಿಸರ್ಜನೆ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸದೆ ಕೆಲವು ಅವಘಡ ಅಗುವ ಸಂಭವ ಸಾಧ್ಯತೆ ಇದ್ದು ಕೆಲವು ಕಡೆಗಳಲ್ಲಿ ನಾವು ಅವಘಡ ಸಂಭವಿಸಿದ್ದು ನೊಡಿದ್ದೇವೆ. ಇದರ ಬಗ್ಗೆ ತಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಈಜು ಬರುವವರು ಮಾತ್ರ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆಗೆ ಬಿಡಲು ನದಿಗೆ ಇಳಿಯಬೇಕು. ಗಣಪತಿ ಇಡುವಂತಹ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು. ಹಬ್ಬವನ್ನು ಸಾಮರಸ್ಯದಿಂದ ಮಾಡಬೇಕು, ವಿವಾದಿತ ಘೋಷಣೆ ಕೂಗುವ, ಪೋಸ್ಟ್ ಹಾಕುವುದು ಅಥವಾ ಇತರ ಕೋಮು ಸಂಘರ್ಷಕ್ಕೆ ಕಾರಣವಾದರೆ ಕೇಸ್ ದಾಖಲು ಮಾಡಲಾಗುತ್ತದೆ.
ಮಸೀದಿ, ಚರ್ಚ್, ದೇವಸ್ಥಾನ ಬಳಿ ಗಲಾಟೆ, ಅಥವಾ ಡಿಜೆ ಸೌಂಡ್ ಹಾಕಿ ಕುಣಿಯುವುದು ಸರಿಯಲ್ಲ. ಬ್ಯಾನರ್, ಬಂಟಿಂಗ್ಸ್ ಹಾಕುವಾಗ ಅದರಲ್ಲಿ ಯಾರಿಗಾದರೂ ನೋವು ಮಾಡುವಂತೆ ಇದ್ದರೆ ಅಂತಹ ಪೋಸ್ಟರ್ ಹಾಕುವಂತಿಲ್ಲ. ಜಾಹಿರಾತು ಹಾಕುವುದಾದರೆ ಪೊಲೀಸ್ ಇಲಾಖೆಯ 112, ಮಾದಕ ವಸ್ತು ನಿಷೇಧ, ಆನ್ಲೈನ್ ಗೇಮ್ ನಿಷೇಧ ಇರುವ , ಇತರ ಜಾಹಿರಾತು ಹಾಕಿ ಅದರಿಂದ ಪ್ರತಿಯೊಬ್ಬರಿಗೂ ಅನುಕೂಲ ಎಂದರು.

ದೇವಂಗಿಯಲ್ಲಿ ಕಳೆದ ಬಾರಿ ಸಮಸ್ಯೆ ಆಗಿತ್ತು. ಹಾಗಾಗಿ ಯಾರೇ ಆಗಲಿ 10 ಗಂಟೆಯ ನಂತರ ಸೌಂಡ್ ಬಳಕೆ ಮಾಡುವಂತಿಲ್ಲ. ಡಿಜೆಯನ್ನು ಯಾರು ಕೂಡ ಹಾಕುವಂತಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶ ಇದ್ದು ಅದನ್ನು ಮೀರಿ ಡಿಜೆ ಬಳಸಿದರೆ ಕೇಸ್ ದಾಖಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಅಶ್ವಥ್ ಗೌಡ ಮಾತನಾಡಿ ಮೆರವಣಿಗೆ ಎಷ್ಟು ಹೊತ್ತು ಬೇಕಾದರೂ ಮಾಡಿ ಆದರೆ ಡಿಜೆ ಹಾಕುವಂತಿಲ್ಲ. ಬೇಗ ಮೆರವಣಿಗೆ ಪ್ರಾರಂಭ ಮಾಡಿ, ಬೇಗ ವಿಸರ್ಜನೆ ಮಾಡುವ ಕೆಲಸ ಮಾಡಿ. ನಾವು ಕೂಡ ಕಳೆದ ಬಾರಿ ಗಣೇಶ ಹಬ್ಬ ಮಾಡಿದ್ದೇವೆ. ಯಾವ ರೀತಿ ಮಾಡಬೇಕು ಎಂದು ಆದರ್ಶವಾಗಿ ತೋರಿಸಿದ್ದೇವೆ. ಇನ್ನೊಬ್ಬರಿಗೆ ತೊಂದರೆ ಮಾಡಿ ಹಬ್ಬ ಮಾಡುವ ಅವಶ್ಯಕತೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಶಿವನಗೌಡ, ಪೊಲೀಸ್ ಸಿಬ್ಬಂದಿಗಳಾದ ದೀಪಕ್, ವೀರೇಂದ್ರ, ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಗಣಪತಿ ಸಮಿತಿ ಸದಸ್ಯರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು