ಇತ್ತೀಚಿನ ಸುದ್ದಿ
ಆಕ್ಸಿಜನ್ ಕೊರತೆ: ದ.ಕ. ಜಿಲ್ಲೆಗೆ ಆಕ್ಸಿಜನ್ ಟ್ಯಾಂಕರ್ ಒದಗಿಸಲು ಮುಖ್ಯಮಂತ್ರಿಗೆ ಉಸ್ತವಾರಿ ಸಚಿವ ಆಗ್ರಹ
21/05/2021, 09:43

ಮಂಗಳೂರು(reporterkarnataka news)
ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿದ್ದು, ಆಕ್ಸಿಜನ್ ಟ್ಯಾಂಕರ್ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರು ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರನ್ನು ಒತ್ರಾಯಿಸಿದ್ದಾರೆ.
ಮುಖ್ಯಮಂತ್ರಿಯವರನ್ನು ಭೇಟಿ ಯಾದ ಸಚಿವರು, ಕೋವಾಕ್ಸಿನ್, ಕೋವಿಡ್ ಸೀಲ್ಡ್ ಲಸಿಕೆಯನ್ನು 50 ಸಾವಿರ ಮತ್ತು 1 ಲಕ್ಷಕ್ಕೆ ಪ್ರಮಾಣದಲ್ಲಿ ಸರಬರಾಜು ಮಾಡಬೇಕು. 40 ಜನ ಆರೋಗ್ಯ ಮಿತ್ರ ಕಾರ್ಯ ನಿರ್ವಾಹಕರನ್ನು ಹೆಚ್ಚುವರಿ ನೇಮಕಾತಿ ಮಾಡಿಕೊಳ್ಳಬೇಕು, ಸುಳ್ಯ ಮತ್ತು ಪುತ್ತೂರು ತಾಲೂಕಿನ ಕೋವಿಡ್ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲು ಸುಳ್ಯದ ಕೆವಿಜಿ ಆಸ್ಪತ್ರೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.