5:12 PM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮುಕ್ಕೋಟಿ ದ್ವಾದಶಿ: ಬಂಟ್ವಾಳದಲ್ಲಿ ಶ್ರೀ ದೇವರ ಸಹಿತ ಕಾಶೀ ಮಠಾಧೀಶರ ತೀರ್ಥ ಸ್ನಾನ

15/12/2021, 18:49

ಚಿತ್ರ : ಮಂಜು ನೀರೇಶ್ವಾಲ್ಯ ​​ಮಂಗಳೂರು(reporterkarnataka.com) : 

ಕರಾವಳಿಯ ಪುಣ್ಯಕ್ಷೇತ್ರಗಳಲ್ಲೊಂದಾದ ​ಬಂಟ್ವಾಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ಮುಕ್ಕೋಟಿ ದ್ವಾದಶಿ’ ಉತ್ಸವ ಗಮನಸೆಳೆಯಿತು.​ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ  ಶ್ರೀ ದೇವರ ​ನೇತ್ರಾವತಿ ನದಿಯಲ್ಲಿ  ತೀರ್ಥ ಸ್ನಾನ​ ನಡೆಯಿತು.

ಬುಧವಾರ ವೈಕುಂಠ ಏಕಾದಶಿ ವೈಭವ ಇಂದು ಪ್ರಾತಃಕಾಲ ಶ್ರೀನಿವಾಸ ದೇವರ ಪಲ್ಲಕಿ ಉತ್ಸವವು ಭಕ್ತಸಮೂಹದ ಕಣ್ಮನ ಸೆಳೆಯಿತು. ಬಳಿಕ ಶ್ರೀ ದೇವರ ಸ್ವಯಂಸೇವಕರ ಭುಜ ಸೇವೆಯೊಂದಿಗೆ​ ​ಹಗಲು ಪೇಟೆ ಉತ್ಸವ ​ಬಳಿಕ ರಥೋತ್ಸವ ಜರಗಿತು.

ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

ಆ ದಿನದಂದು ವೈಕುಂಠದ ಉತ್ತರ ದ್ವಾರ ತೆರೆಯುತ್ತದೆ. ದೇವತೆಗಳೆಲ್ಲ ಮಹಾವಿಷ್ಣುವಿನ ದರ್ಶನ ಪಡೆಯುವ ಸಲುವಾಗಿ ಆ ದ್ವಾರದ ಮೂಲಕ ತೆರಳುತ್ತಾರೆ. ಆದ್ದರಿಂದ ದೇವಾಲಯಗಳ ಉತ್ತರ ದಿಕ್ಕಿನ ದ್ವಾರಗಳನ್ನು ತೆರೆಯಲಾಗುತ್ತದೆ. ಆ ಮೂಲಕ ದರ್ಶನ ಪಡೆಯಲಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು