ಇತ್ತೀಚಿನ ಸುದ್ದಿ
ಮೂಡಿಗೆರೆಯಿಂದ ತೆರಳಿದ ಬಿಜೆಪಿ ತಂಡದಿಂದ ಅಯೋಧ್ಯೆಯಲ್ಲಿ ಶ್ರೀ ರಾಮನ ದರ್ಶನ
10/02/2024, 20:46
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಳೆದ ಬುಧವಾರ ಬಿಜೆಪಿ ಆಯೋಜಿಸಿದ್ದ ಅಯೋಧ್ಯ ಶ್ರೀರಾಮ ದರ್ಶನ 2024 ಅಂಗವಾಗಿ ಕಳೆದ ಬುಧವಾರ ರಾಜ್ಯದ ಬಿಜೆಪಿ ಮೊದಲ ತಂಡವಾಗಿ ತುಮಕೂರು ಚಿಕ್ಕಮಗಳೂರು, ಹಾಸನ ಮಧುಗಿರಿಯ 1200 ಜನರ ಜನರ ತಂಡ ಹೊರಟಿದ್ದು ತುಮಕೂರಿನಲ್ಲಿ ಚಾಲನೆ ನೀಡಲಾಗಿದ್ದು ಮೂಡಿಗೆರೆ ಸೇರಿದಂತೆ ಚಿಕ್ಕಮಗಳೂರಿನ ತಂಡವನ್ನು ಕಡೂರಿನಲ್ಲಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮಾಜಿ ಶಾಸಕರುಗಳಾದ ಬೆಳ್ಳಿ ಪ್ರಕಾಶ್ ಡಿ ಎಸ್, ಸುರೇಶ್ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರಡಪ್ಪ, ಪ್ರಧಾನ ಕಾರ್ಯದರ್ಶಿಗಳಾದ ನರೇಂದ್ರಜಿ ಪುಣ್ಯಪಾಲ್ ಹಾಗೂ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಕಡೂರು ರೈಲ್ವೆ ನಿಲ್ದಾಣದಲ್ಲಿ ಬೀಳ್ಕೊಟ್ಟರು ಯಾತ್ರೆಯನ್ನು ಅತ್ಯಂತ ಭದ್ರತೆಯಿಂದ ತಲುಪಿಸುವ ವ್ಯವಸ್ಥೆ ಮಾಡಿದ್ದು ರಾಮಭಕ್ತರು ಸೇರಿದಂತೆ ಸಾರ್ವಜನಿಕರು ಹೂಮಾಲೆ ಹಾರಗಳು ಹಾಗೂ ಕಾಣಿಕೆ ನೀಡುವ ಮೂಲಕ ಎಲ್ಲಾ ರೈಲ್ವೆ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ನೀಡಿದ್ದಾರೆ.
ಇಂದು ಅಯೋಧ್ಯ ದಶನವನ್ನು ನಡೆಸಲಾಯಿತು. ನಯನ, ಪರೀಕ್ಷಿತ್, ಪದ್ಮಣ್ಣ, ಸಂಜಯ್ ಭಾರತಿ, ರವೀಂದ್ರ ನಂದನ್ ಕುಂದೂರು, ಪ್ರಸನ್ನ, ರವಿ, ಪ್ರದೀಪ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸುಧೀರ್ ಕಮಲಾಕ್ಷ್ಮ ಸೇರಿದಂತೆ ಹಲವರು ದರ್ಶನ ಪಡೆದರು.