9:02 PM Sunday17 - May 2026
ಬ್ರೇಕಿಂಗ್ ನ್ಯೂಸ್
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ…

ಇತ್ತೀಚಿನ ಸುದ್ದಿ

ಮತ್ತೆ ಮತ್ತೆ ಓದಿದಷ್ಟು ಹೊಸ ಜಗತ್ತನ್ನು ಪರಿಚಯಿಸುವ ತೇಜಸ್ವಿ ಕೃತಿಗಳು: ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ಸಬಿತಾ ಬನ್ನಾಡಿ

09/09/2023, 16:40

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಸಾಮಾನ್ಯರ ಬದುಕಿನ ವಿವರಗಳು ದಟ್ಟೈಸಿರುವ ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳನ್ನು ಮತ್ತೆ ಮತ್ತೆ ಓದಿದಷ್ಟು ಹೊಸ ಹೊಸ ಜಗತ್ತು ತೆರೆದುಕೊಳ್ಳುವುದು ಎಂದು ಕನ್ನಡ ಪ್ರಾಧ್ಯಾಪಕರಾದ ಡಾ.ಸಬಿತಾ ಬನ್ನಾಡಿ ಹೇಳಿದರು.


ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 85ನೇ ಜನ್ಮದಿನದ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ತೇಜಸ್ವಿ ಅವರು ತೋರಿದ ಲೋಕದೃಷ್ಟಿ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ನಾಡಿನ ಪಾಠ ಕಾಡಿನಲ್ಲಿದೆ ಎನ್ನುವಂತೆ ಪ್ರಾಣಿ ಪಕ್ಷಿ ಸಸ್ಯಗಳು ತೋರುವ ಹೊಂದಾಣಿಕೆಯನ್ನು ಮನುಷ್ಯನ್ನೂ ಕೂಡ ತೋರಬಹುದಾಗಿದೆ ಎಂಬುದನ್ನು ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ. ತೇಜಸ್ವಿ ಅವರ ಕೃತಿಗಳನ್ನು ಯುವ ಪೀಳಗೆ ಓದಬೇಕು. ತೇಜಸ್ವಿ ಅವರ ಕೃತಿಗಳು ಹೊಸ ಜಗತ್ತನ್ನು ತೆರೆದಿಡುತ್ತವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ತೇಜಸ್ವಿ ಪ್ರತಿಷ್ಠಾನದಿಂದ ನೂತನವಾಗಿ ತೇಜಸ್ವಿ ಓದಿನ ಮನೆ ನಿರ್ಮಾಣವಾಗಿದೆ. ಪ್ರಕೃತಿಯ ನಡುವೆ ತೇಜಸ್ವಿ ಅವರ ಕೃತಿಗಳನ್ನು ಓದಲು ಪೂರಕವಾದ ವಾತಾವರಣ ಇಲ್ಲಿದೆ. ಪ್ರತಿಷ್ಠಾನದಿಂದ ಚಾರಣ, ವಿಚಾರ ಮಂಥನ, ಚಿತ್ರಕಲಾ, ಪೋಟೋಗ್ರಫಿ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ಅವರು ನುಡಿದರು.
ತೇಜಸ್ವಿ ಒಡನಾಡಿಗಳು ಹಾಗೂ ಪುಸ್ತಕ ಪ್ರಕಾಶನದ ಮುಖ್ಯಸ್ಥರಾದ ರಾಘವೇಂದ್ರ ಮಾತನಾಡಿ, ತೇಜಸ್ವಿ ಅವರು ಪರಿಸರದ ನಡುವೆ ಬದುಕಿ ತಮ್ಮ ಅನುಭವಗಳನ್ನು ಕೃತಿಗಳಲ್ಲಿ ದಾಖಲಿಸಿದ್ದಾರೆ. ಚಂದ್ರಯಾನ, ಜೀವ ವಿಕಾಸ, ಪರಿಸರ ಮುಂತಾದ ಕ್ಷೇತ್ರಗಳ ಬಗ್ಗೆ ಬೆರಗು ಮೂಡಿಸುವ ವಿವರಗಳು ತೇಜಸ್ವಿ ಅವರ ಕೃತಿಗಳಲ್ಲಿವೆ ಎಂದು ಅವರು ಹೇಳಿದರು.
ಕೊಟ್ಟಿಗೆಹಾರ ಪ್ರೌಢಶಾಲೆಯ ವಿದ್ಯಾರ್ಥಿಗಳು ತೇಜಸ್ವಿ ಅವರ ಸಾಲುಗಳ ಭಿತ್ತಿಚಿತ್ರವನ್ನು ಪ್ರದರ್ಶಿಸಿದರು. ವಿದ್ಯಾರ್ಥಿ ದರ್ಶನ್ ತೇಜಸ್ವಿ ಅವರಂತೆ ವೇಷ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಕಲಾವಿದ ಹರ್ಷ ಕಾವಾ ಅವರ ನಿರ್ಮಿಸಿದ ಮಾಯಾಲೋಕ ಪ್ರತಿಕೃತಿಗಳು ತೇಜಸ್ವಿ ಅವರ ಪಾತ್ರಗಳ ಲೋಕವನ್ನು ತೆರೆದಿಟ್ಟವು. ನೂತನವಾಗಿ ನಿರ್ಮಾಣವಾದ ತೇಜಸ್ವಿ ಓದಿನ ಗಾಜಿನ ಮನೆಯನ್ನು ಗಣ್ಯರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತರುವೆ ಗ್ರಾ.ಪಂ ಅಧ್ಯಕ್ಷ ಸತೀಶ್ ಬಿ.ಎಂ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಪ್ರಜ್ವಲ್, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಪ್ರಾಧ್ಯಾಪಕರಾದ ದೀಪಾರಾಣಿ ಬಿ.ಎಸ್, ಡಾ. ನಾಗರಾಜ್ ಎಂ.ಎಸ್, ರವಿಕುಮಾರ್, ಸುಶ್ಮಿತಾ, ಸತೀಶ್, ಕಿರಣ್, ಲೇಖಕ ಕಾರ್ತಿಕ್ ಬೆಳಗೋಡು, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಹೋಬಳಿ ಅಧ್ಯಕ್ಷ ತರುವೆ ಆದರ್ಶ್, ಕಲಾವಿದ ಹರ್ಷ ಕಾವಾ, ಮಂಜುನಾಥ್, ಜಾನುವಾರು ಅಧಿಕಾರಿ ಡಾ.ನವೀನ್ ಕುಮಾರ್, ಗ್ರಾಮಸ್ಥರಾದ ನರೇಂದ್ರ ತರುವೆ, ಸಂಜಯಗೌಡ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು