8:34 PM Saturday25 - July 2026
ಬ್ರೇಕಿಂಗ್ ನ್ಯೂಸ್
ಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ ಜಾಲ ಭೇದಿಸಿದ ಪೋಲಿಸರು: ಇಬ್ಬರ ಬಂಧನ, ₹18,000… ಕಡೂರು | ತೆಂಗಿನಕಾಯಿ ಕದ್ದ ಆರೋಪ: ಮಹಿಳೆಯ ಬಟ್ಟೆ ಹರಿದು ಮೂವರು ಪುರುಷರಿಂದ… ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಖಂಡಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ: 3… ಶಾಸಕ ಪೊನ್ನಣ್ಣ ಕೋರಿಕೆ‌: ಭಾಗಮಂಡಲ ಮೇಲ್ಸೇತುವೆ ಸುತ್ತಲಿನ ಕಾಮಗಾರಿಗೆ 3 ಕೋಟಿ ಅನುದಾನ… ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ

ಇತ್ತೀಚಿನ ಸುದ್ದಿ

ಮಂಜೇಶ್ವರ ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರದಲ್ಲಿ “ಸ್ನೇಹ ಮಿಲನ-2024 “

23/12/2024, 12:43

ಮಂಗಳೂರು(reporterkarnataka.com): ಮಂಜೇಶ್ವರ ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರದಲ್ಲಿ “ಸ್ನೇಹ ಮಿಲನ-2024 ” ಎಂಬ ಕ್ರಿಸ್‌ಮಸ್ ಕಾರ್ಯಕ್ರಮವನ್ನು ಡಿಸೆಂಬರ್ 21ರಂದು ಆಚರಿಸಲಾಯಿತು. ಸ್ನೇಹಾಲಯದ ವಾರ್ಷಿಕ ಕ್ರಿಸ್‌ಮಸ್ ಆಚರಣೆಯು ನಿವಾಸಿಗಳಲ್ಲಿ ಹೊಸ ಉತ್ಸಾಹವನ್ನು ಜೀವಂತವಾಗಿರಿಸಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರಾದ ಶಿಲ್ಪಾ ದ್ಯಾವಯ್ಯ, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ.ಎಸ್. ಸೇರಿದಂತೆ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.


ಹೊಸಂಗಡಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾ. ಲೋಯಸ್ ಮರಿಯದಾಸ್, ಸ್ನೇಹಾಲಯದ ನಿವಾಸಿ ಗುರುಗಳಾದ ಫಾ. ಸಿರಿಲ್ ಡಿ ಸೋಜಾ, ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ದೆಹಲಿ, ನಿರ್ದೇಶಕರಾದ ಮತ್ತು PTI ಕನ್ಸಲ್ಟೆನ್ಸಿ ಬಾಂಬೆಯ ಮಾಲೀಕರಾದ ಶ್ರೀ ಜೋಸೆಫ್ ಇಲಿಯಾಸ್ ಮಿನೇಜಸ್ ಮತ್ತು ಮಂಗಳೂರಿನ ಪ್ರೇರಕ ಭಾಷಣಕಾರರಾದ ರಫೀಕ್ ಮಾಸ್ಟರ್ ಸಂಭ್ರಮದ ಗೌರವ ಅತಿಥಿಗಳಾಗಿದ್ದರು. ಮಂಗಳೂರಿನ ಜಿಜಿ100 ಕೋರಸ್ ತಂಡ ಸುಂದರ ಕ್ರಿಸ್ಮಸ್ ಸಂಗೀತದೊಂದಿಗೆ ಸಭಿಕರನ್ನು ರಂಜಿಸಿತು.
ಕಾರ್ಯಕ್ರಮವನ್ನು ಜಿಯೋ ಡಿಸಿಲ್ವಾ ನಿರೂಪಿಸಿದರು. ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಜೋಸೆಫ್ ಕ್ರಾಸ್ತಾ ಕಾರ್ಯಕ್ರಮಕ್ಕೆ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳ ಜೊತೆ ಸಂಭ್ರಮಕ್ಕೆ ಚಾಲನೆ ನೀಡಿದರು.
ಅತಿಥಿಗಳು ಕ್ರಿಸ್ಮಸ್ ಕೇಕ್ ಕತ್ತರಿಸಿ ಸಾಂತಕ್ಲೋಸ್ ಸಮ್ಮುಖದಲ್ಲಿ ಎಲ್ಲರಿಗೂ ಸಿಹಿ ಹಂಚಿದರು. ಕಾರ್ಯದರ್ಶಿ ಕಮ್ ಟ್ರಸ್ಟಿ ಒಲಿವಿಯಾ ಕ್ರಾಸ್ತಾ ವಂದಿಸಿದರು. ಇದು ಹೃದಯಸ್ಪರ್ಶಿ ಮತ್ತು ಸಂತೋಷದಾಯಕ ಆಚರಣೆಯಾಗಿದ್ದು, ಹಾಜರಿದ್ದ ಎಲ್ಲರ ಮುಖದಲ್ಲಿ ನಗುವನ್ನು ತಂದಿತು. ಪ್ರತಿಯೋರ್ವ ಅತಿಥಿಯರ ಅಮೋಘ ಸಂದೇಶ ಮಾನಾವಿಯತೆ, ದಾನ, ಪ್ರೀತಿ, ಸಮಾಜಿಕ ನ್ಯಾಯ ಹಾಗೂ ಹಂಚುವಿಕೆ ಬಗ್ಗೆ ಇದ್ದು ಸ್ನೇಹಾಲಯದ ಕೆಲಸವನ್ನು ಶ್ಲಾಫೀಸಿ ಹೊಗಳಿದರು. ಕ್ರಿಸ್ಮಸ್ ಹೊಸ ಅಲೆಯನ್ನು ಪರಿಸರದಲ್ಲಿ ಸೃಷ್ಠಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು