ಇತ್ತೀಚಿನ ಸುದ್ದಿ
ಮಂಗಳೂರು ವಿವಿ ಕಾಲೇಜು ನಿವೃತ್ತ ಪ್ರಾಧ್ಯಾಪಕ, ಸಾಮಾಜಿಕ ಹೋರಾಟಗಾರ ಪಟ್ಟಾಭಿರಾಮ ಸೋಮಯಾಜಿ ಇನ್ನಿಲ್ಲ
01/07/2023, 18:24
ಮಂಗಳೂರು(reporterkarnataka.com): ಮಂಗಳೂರು ವಿವಿ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ, ಚಿಂತಕ, ಸಾಮಾಜಿಕ ಹೋರಾಟಗಾರ ಪ್ರೊ. ಎಚ್. ಪಟ್ಟಾಭಿರಾಮ ಸೋಮಯಾಜಿ(64) ಶನಿವಾರ ನಿಧನರಾದರು.
ಅವರು ನಗರದ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನ ಗಿರಿನಗರದಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸೋಮಯಾಜಿ ಅವರು ಸಾಮಾಜಿಕ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೋಮುವಾದ ವಿರುದ್ಧ ಹಾಗೂ ಕೋಮು ಸೌಹಾರ್ದ ಪರ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದರು. ಸೋಮಯಾಜಿ ಅವರ ಪಾರ್ಥಿವ ಶರೀರವನ್ನು ಎಜೆ ಆಸ್ಪತ್ರೆಯಲ್ಲಿರಿಸಿ ನಂತರ ಅವರ ಹುಟ್ಟೂರಿಗೆ ಕೊಂಡೋಗಿ ಅಂತ್ಯ ಸಂಸ್ಕಾರ ನಡೆಸಲಾಗುವುದು.