2:13 PM Saturday25 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

Mangaluru | ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮಂಗಳೂರಿಗೆ: ಪ್ರಜಾ ಸೌಧ ಉದ್ಘಾಟನೆ; ಉಳ್ಳಾಲ ಉರೂಸ್ ನಲ್ಲಿ ಭಾಗಿ

15/05/2025, 18:19

ಮಂಗಳೂರು(reporterkarnataka.com): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 16ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.
16ರಂದು ಮಧ್ಯಾಹ್ನ 3:15 – ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, 3:35- ನಗರದ ಉರ್ವಾ ಮಾರ್ಕೆಟ್‍ನಲ್ಲಿರುವ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಹಾಗೂ ವೀಕ್ಷಣೆ, ಸಂಜೆ 4:15- ಪಡೀಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿ ”ಪ್ರಜಾ ಸೌಧ” ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಸರ್ಕಾರಿ ಸವಲತ್ತುಗಳ ವಿತರಣಾ ಸಮಾರಂಭ, 6:30 – ಉಳ್ಳಾಲ ಸೈಯದ್ ಮೊಹಮ್ಮದ್ ಶರೀಫ್ ಫುಲ್ ಮದನಿ ದರ್ಗಾ ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಭಾಗಿ, ನಂತರ ರಾತ್ರಿ 8:25 – ಮಂಗಳೂರಿನಿಂದ ಮುಖ್ಯಮಂತ್ರಿಗಳು ಬೆಂಗಳೂರಿಗೆ ತೆರಳಲಿದ್ದಾರೆ.
*ಉಸ್ತುವಾರಿ ಸಚಿವರ ಪ್ರವಾಸ:* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು
ಮೇ 16ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. 16 ರಂದು ಬೆಳಿಗ್ಗೆ 6:55 – ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ, 7:25- ಸಕ್ರ್ಯೂಟ್ ಹೌಸ್ ಆಗಮನ, 10 – ಕದ್ರಿ ಉದ್ಯಾನವನದಲ್ಲಿ ಮಾವು ಮೇಳ 2025 ಉದ್ಘಾಟನೆ, 10:30 – ಸನ್ಮಾನ್ಯ ಮುಖ್ಯಮಂತ್ರಿಗಳು ಶಿಲನ್ಯಾಸ / ಲೋಕಾರ್ಪಣೆ ಮಾಡುವ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ, ಪ್ರಜಾಸೌಧ ಕಟ್ಟಡ, ನಾಡಕಚೇರಿ, ಜಿಲ್ಲಾಧಿಕಾರಿ ಕಚೇರಿಯ ಕಟ್ಟಡ, ಸರ್ಕಾರದ ವಿವಿಧ ಸೌಲಭ್ಯಗಳ ವಿತರಣಾ ಸ್ಥಳಗಳ ಪರಿಶೀಲನೆ, ಮಧ್ಯಾಹ್ನ 2- ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಸ್ವಾಗತ. 2:45- ನಗರದ ಉರ್ವಾದಲ್ಲಿರುವ ಕಬ್ಬಡಿ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ, 3:30 – ಪಡೀಲ್ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಪ್ರಜಾಸೌಧ ಕಟ್ಟಡ, ಹಳೇ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡ, ನಾಡಕಛೇರಿ ಗುರುಪುರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಕಾರ್ಯಕ್ರಮ, ಸಂಜೆ 4- ಮುಖ್ಯಮಂತ್ರಿಗಳೊಂದಿಗೆ ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಇವರ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ ಮತ್ತು ಕಟ್ಟಡ ವೀಕ್ಷಣೆ, 4:10- ಪಡೀಲ್ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸರ್ಕಾರದ ವಿವಿಧ ಸೌಲಭ್ಯಗಳ ವಿತರಣಾ ಸಭಾ ಕಾರ್ಯಕ್ರಮ, 5:50 – ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಪ್ರಜಾಸೌಧ ಕಚೇರಿ ಕಟ್ಟಡದ ವಿದ್ಯುತ್ ದೀಪಲಂಕಾರವಾದ ಚಾಲನಾ ಕಾರ್ಯದಲ್ಲಿ ಭಾಗಿ, 6:45- ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು