ಇತ್ತೀಚಿನ ಸುದ್ದಿ
ಮಕ್ಕಳು ಶಾಲೆಗೆ ಹೋಗಿದ್ದಾರಾ.!?_ ಚಕ್ಕರ್ ಹೊಡಿದಿದ್ದಾರಾ.!? ಖಚಿತ ಪಡಿಸಿಕೊಳ್ಳಿ ಪೋಷಕರೇ
13/12/2023, 19:28
ವಿ.ಜಿ.ವೃಷಭೆಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಮಕ್ಕಳು ಶಾಲೆಗೆಂದು ಮನೆಯಿಂದ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಹೊರಟಿದ್ದಾರೆಂದರೆ, ಪೋಷಕರಿಗೆ ಅದೇನೆೋ ಖುಷಿ ಅದೆಂತಹದ್ದೋ ಕನಸಿನ ಮನೆಯ ಕದ ತೆರೆದು ಬಿಡುತ್ತದೆ. ಆದ್ರೆ ಮೊಬೈಲ್ ಗೀಳು ಅವರ ವಿದ್ಯಾರ್ಥಿ ಜೀವನವನ್ನೇ ಹಾಳು ಮಾಡುತ್ತಿದೆ, ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ ಈ ವೀಡಿಯೋ ಉದಾಹರಣೆಗೆ ಮಾತ್ರ. ಆದ್ರೆ ಇಂತಹ ನೂರಾರು ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಚಕ್ಕರ್ ಹೊಡೆದು, ವಿದ್ಯಾಭ್ಯಾಸ ಬಿಟ್ಟು ಮೊಬೇಲ್ ನಲ್ಲಿ ಮುಳುಗುತ್ತಿದ್ದಾರೆ. ಮತ್ತು ಮೊಬೈಲ್ ಮೂಲಕ ಹತ್ತಾರು ದುರ್ವ್ಯೆಸನಗಳ ದಾಸರಾಗುತ್ತಿದ್ದಾರೆ, ಮಾನಸಿಕವಾಗಿ ಮೊಬೈಲ್ ದಾಸರಾಗಿ ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮೊಬೈಲ್ ನ್ನು ಮಕ್ಕಳಿಗೆ ಮಾತ್ರವಲ್ಲ ವಿವೇಚನೆ ರಹಿತ ವಿದ್ಯಾರ್ಥಿಗಳಿಗೆ, ಅಂದರೆ ಪದವಿ ಹಂತದವರೆಗೆ ಮೊಬೈಲ್ ಕೊಡಬಾರದು. ಇದು ತುಂಬಾ ವೈರಲ್ ಆಗಿರೋ ವೀಡಿಯೋ ವಿದ್ಯಾರ್ಥಿಗಳಿಬ್ಬರೂ, ಒಬ್ಬ ಶಾಲಾ ಸಮವಸ್ತ್ರದಲ್ಲಿದ್ದು ಮತ್ತೋರ್ವ ಸಮವಸ್ತ್ರದಲ್ಲಿಲ್ಲ. ಇವರಿಬ್ಬರೂ ಶಾಲೆಗೆ ತೆರಳದೇ ನಿರ್ಜನ ಪ್ರದೇಶದಲ್ಲಿ ಮೊಬೈಲ್ ನ್ನು ವೀಕ್ಷಿಸುವುದರಲ್ಲಿಯೇ ಕಾಲ ಹರಣ ಮಾಡಿದ್ದಾರೆ, ಮತ್ತು ಊಟ ಪಾಠವಿಲ್ಲದೇ ಮೊಬೈಲ್ ನ್ನು ಕೈ ಬಿಡದೇ ಹಿಡಿದಿದ್ದಾರೆ.
ಪುಸ್ತಕ ಪೆನ್ನು ಹಿಡಿಯಬೇಕಿರುವ ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾಗಿರುವ ವಿದ್ಯಾರ್ಥಿಗಳು, ಇಂದು ಮೊಬೈಲ್ ಹಿಡಿದು ಶಾಲೆಗೆ ಚಕರ್ ಹೊಡೆದು ನಿರ್ಜನ ಪ್ರದೇಶದಲ್ಲಿ ಅಹಿತಕರ ಚಟುವಟಿಕೆಗಳಲ್ಲಿ ಲೀನವಾಗಿತ್ತಿದ್ದಾರೆ. ಎಚ್ಚರ ಪೋಷಕರೇ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡದಿರಿ, ನಿಮ್ಮ ಮಕ್ಕಳು ಶಾಲೆಗೆ ತೆರಳಿದ್ದಾನಾ ಅಥವಾ ನಿಮ್ಮ ಮಗ ಹಾಸ್ಟೆಲ್ ನಲ್ಲಿದ್ದಾನಾ ಖಚಿತ ಪಡಿಸಿಕೊಳ್ಳಿ. ಅಪ್ಪಿತಪ್ಪಿ ಮೊಬೈಲ್ ಕೊಡದಿರಿ ಹಾಗೊಮ್ಮೆ ಮೊಬೈಲ್ ಕೊಟ್ಟಿದ್ದರೆ, ವಾಪಾಸು ಪಡೆಯಿರಿ ಅಥವಾ ಅವರ ಪ್ರತಿಯೊಂದು ನಡೆಗಳನ್ನ ತೀವ್ರ ನಿಗಾವಹಿಸಿ ಗಮನಿಸಿ. ಅವರ ದಿನಚರಿಯನ್ನು ಅಧ್ಯಯನ ಮಾಡಿ ಅವರು ತರಗತಿಗೆ ಹಾಜರಾಗುವುದರ ಬಗ್ಗೆ ಖಚಿತ ಪಡಿಸಿಕೊಳ್ಳಿ, ಅವರ ಸಹವಾಸದಲ್ಲಿರುವ ಸ್ನೇಹಿತರ ಹಿನ್ನಲೆ ಮತ್ತು ಪೂರ್ವ ಪರ ಬಗ್ಗೆ ಮಾಹಿತಿ ಹೊಂದಿ. ಇಲ್ಲವಾದಲ್ಲಿ ನಿಮ್ಮ ಮಕ್ಕಳಿಗೆ ನೀವೇ ಮೊಬೈಲ್ ಕೊಟ್ಟು, ಅವರ ಜೀವನವನ್ನು ನೀವೇ ಹಾಳು ಮಾಡಿದಂತೆ.. ಎಚ್ಚರ.!ಪೋಷಕರೇ ಎಚ್ಚರ.!