8:16 AM Tuesday26 - May 2026
ಬ್ರೇಕಿಂಗ್ ನ್ಯೂಸ್
ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು

ಇತ್ತೀಚಿನ ಸುದ್ದಿ

ಕುಲಶೇಖರ ಹೋಲಿ ಕ್ರಾಸ್ ಚರ್ಚ್: ಡಿ. 10ರಂದು ಹೊರಕಾಣಿಕೆ ಮೆರವಣಿಗೆ; 11ರಂದು ಅನ್ನ ಸಂತರ್ಪಣೆ

08/12/2023, 21:58

ಮಂಗಳೂರು(reporterkarnataka.com): ನಗರದ ಕುಲಶೇಖರದ ಕೋರ್ಡೆಲ್‌ ನ ಹೋಲಿ ಕ್ರಾಸ್ ಚರ್ಚ್‌ನ ಶತಮಾನೋತ್ತರ ಸುವರ್ಣ ಮಹೋತ್ಸವ ಹಾಗೂ ಚರ್ಚ್‌ನ ಸಂಸ್ಥಾಪಕ ಫಾ. ಅಲೆಕ್ಸಾಂಡರ್ ಡುಬೋಯ್‌ ಅವರ 146ನೇ ಪುಣ್ಯತಿಥಿಯ ಅಂಗವಾಗಿ ಡಿಸೆಂಬರ್‌ 11ರಂದು ಅನ್ನ ಸಂತರ್ಪಣೆ ನಡೆಯಲಿದ್ದು, ಆ ಪ್ರಯುಕ್ತ ಹೊರಕಾಣಿಕೆ ಮೆರವಣಿಗೆಯು ಡಿ. 10 ರಂದು ನಡೆಯಲಿದೆ.
ಹೊರೆ ಕಾಣಿಕೆ ಮೆರವಣಿಗೆಯು ಅಂದು ಅಪರಾಹ್ನ 3.30 ಕ್ಕೆ ಬಿಕರ್ನಕಟ್ಟೆಯ ಬಾಲ ಯೇಸು ಪುಣ್ಯ ಕ್ಷೇತ್ರದ ಆವರಣದಿಂದ ಹೊರಡಲಿದೆ. 4 ವಾರ್ಡ್ ಒಳಗೊಂಡ 11 ವಲಯಗಳು ಹೊರಕಾಣಿಕೆಯನ್ನು ತರಲಿವೆ. ಈ ಮೆರವಣಿಗೆಯಲ್ಲಿ ಭಾಗವಹಿಸಿ ಕುಲ್ಯರ್ದ ಅಜ್ಜೆರ್‌ ಎಂದೇ ಖ್ಯಾತಿವೆತ್ತ ಫಾ. ಅಲೆಕ್ಸಾಂಡರ್ ಡುಬೋಯ್‌ ಅವರ ಆಶೀರ್ವಾದಗಳನ್ನು ಪಡೆಯ ಬೇಕೆಂದು ವಿನಂತಿಸಲಾಗಿದೆ.

ಡಿ. 11ರಂದು ಕುಲ್ಯರ್ದ ಅಜ್ಜೆರ್ ಅವರ 146ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಸಂಜೆ 5.30ಕ್ಕೆ ಪವಿತ್ರ ಬಲಿ ಪೂಜೆ ನಡೆಯಲಿದೆ. ಬಿಷಪ್‌ ರೈ.ರೆ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ನೇತೃತ್ವ ವಹಿಸುವರು. ಸಂಜೆ 7.00 ಗಂಟೆಗೆ ಪರಮ ಪ್ರಸಾದದ ಮೆರವಣಿಗೆ ನಡೆಯಲಿದೆ. ಬಳಿಕ ಎಲ್ಲ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕುಲಶೇಖರ ಚರ್ಚಿನ ಪ್ರಕಟನೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು