ಇತ್ತೀಚಿನ ಸುದ್ದಿ
ಕೂಡ್ಲಿಗಿ: ವಿಜೃಂಭಣೆಯ ಶ್ರೀಕೊತ್ತಲಾಂಜನೇಯ ಕಾರ್ತೀಕೋತ್ಸವ; ರಸ್ತೆಯ ಇಕ್ಕೆಲೆಗಳಲ್ಲಿ ಎಣ್ಣೆ ದೀಪಗಳ ರಂಗು
19/12/2021, 16:14
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ಸ್ವಾಮಿ ದೇವರ ಕಾರ್ತೀಕೋತ್ಸವ ಬಹು ಅದ್ಧೂರಿಯಾಗಿ ಹಾಗೂ ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಜರುಗಿತು.
ಪಟ್ಟಣ ಹಾಗೂ ಪಟ್ಟಣದ ನೆರೆ ಹೊರೆಯ ಗ್ರಾಮಗಳ ನಾಗರೀಕರು, ಸಾವಿರಾರು ಭಕ್ತರು ಶ್ರೀಆಂಜನೇಯ ಕಾರ್ತೀಕೋತ್ಸವದಲ್ಲಿ ಭಾಗಿಯಾಗಿದ್ದರು.ಮಹಿಳೆಯರು ಮಕ್ಕಳು ಯುವಕರು ಹಿರಿಯ ನಾಗರೀಕರು ಕಾರ್ತೀಕೋತ್ಸವದಲ್ಲಿ ಭಾಗಿಯಾಗಿ ದೀಪ ಬೆಳಗಿದರು. ದೇವಸ್ಥಾನದ ಭಕ್ತ ಮಂಡಳಿಯಿಂದ ಬಣ್ಣದ ಪಟಾಕಿ ಸಿಡಿಮದ್ದನ್ನು ಸಿಡಿಸಲಾಯಿತು. ಈ ಮೂಲಕ ಬಾನಂಗಳದಲ್ಲಿ ಬಣ್ಣ ಬಣ್ಣದ ಬೆಳಕಿನ ರಂಗೋಲಿ ಹಾಕಿದಂತಿತ್ತು, ಇದರಿಂದಾಗಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ,ವಾಲ್ಮೀಕಿ ಮುಖಂಡ ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಹಾಗೂ ಕೆಲ ಹಿರಿಯ ನಾಗರೀಕರ ನೇತೃತ್ವದಲ್ಲಿ ಹಲವು ದೇವಸ್ಥಾನಗಳ ಸೇವಾಕರ್ತರು, ಶ್ರೀಕೊತ್ತಲಾಂಜನೇಯ ಭಕ್ತ ಮಂಡಳಿ ಪದಾಧಿಕಾರಿಗಳು ಹಾಗೂ ದೇವಸ್ಥಾನದ ಸೇವಾಕರ್ತರು ಕಾರ್ತೀಕೊತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ದೇವಸ್ಥಾನದ ಆವರಣ ಹಾಗೂ ಪ್ರಮುಖ ರಸ್ಥೆಗಳ ಇಕ್ಕೆಲಗಳಲ್ಲಿ ಸಹಸ್ರಾರು ಎಣ್ಣೆದೀಪಗಳನ್ನು ಬೆಳಗಿಸಲಾಗಿತ್ತು. ಸಹಸ್ರಾರು ಮಣ್ಣಿನ ಪ್ರಣತಿಗಳನ್ನು ಹಾಗೂ ಎಣ್ಣೆ ಬತ್ತಿಯಿಂದ ದೀಪ ಬೆಳಗುವ ಮೂಲಕ ,ಬಹು ಅರ್ಥಪೂರ್ಣವಾಗಿ ಶ್ರದ್ಧಾಭಕ್ತಿಯಿಂದ ಕಾರ್ತೀಕೋತ್ಸವ ಆಯೋಜಿಸಿದ್ದರು.ಪಟ್ಟಣದ ಸಹಸ್ರಾರು ಭಕ್ತರು ತಮ್ಮ ಕುಟುಂಬ ಸದಸ್ಯರ ಸಮೇತವಾಗಿ ಶ್ರೀಕೊತ್ತಲಾಂಜನೇಯ ದರ್ಶನ ಪಡೆದು,ದೇವಸ್ಥಾನದ ಆವರಣದಲ್ಲಿ ವ್ಯವಸ್ಥೆಮಾಡಲಾಗಿದ್ದ ಸಹಸ್ರಾರು ಪ್ರಣತಿಗಳಲ್ಲಿ ದೀಪಬೆಳಗಿಸುವ ಮೂಲಕ ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ದೇವಸ್ಥಾನ ಹಾಗೂ ಆವರಣವನ್ನು ಜಗಮಗಿಸುವಂತೆ ಅಲಂಕರಿಸಲಾಗಿತ್ತು.ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು,ಪಟ್ಟಣದ ಸಹಸ್ರಾರು ಭಕ್ತರು ಶ್ರೀಕೊತ್ತಲಾಂಜನೇಯ ಕಾರ್ತೀಕೋತ್ಸವವನ್ನು,ಬಹು ಶ್ರದ್ಧೆಯಿಂದ ಆಚರಿಸಿ ದೇವರ ಕೃಪೆಗೆ ಪಾತ್ರರಾದರು.