2:43 AM Saturday6 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ… ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5… ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ Mysore | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಬಾನು ಮಸ್ತಾಕ್… ಜಿಎಸ್ ಟಿ ಸರಳೀಕರಣ ಗ್ರಾಹಕ ಸ್ನೇಹಿ ತೀರ್ಮಾನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ: ಸೆ. 14ವರೆಗೆ ಪ್ರವಾಸ ಮುಂದೂಡುವಂತೆ… ದಾವಣಗೆರೆಯಲ್ಲಿ ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗದ “ಆರಂಭ”ಕ್ಕೆ ಚಾಲನೆ

ಇತ್ತೀಚಿನ ಸುದ್ದಿ

ಕುಡಿಯುವ ನೀರಿಲ್ಲ, ಬೆಳಕಿಲ್ಲ, ನಿಯಮಾನುಸಾರ ಆಸರೆ ಮನೆ ಹಂಚಿಕೆಯಾಗಿಲ್ಲ: ನಾಗಬೇನಾಳ ಗ್ರಾಮ ಸಭೆ ಬಹಿಷ್ಕರಿಸಿದ ಗ್ರಾಮಸ್ಥರು

30/11/2024, 16:50

ಶಿವು ರಾಠೋಡ್ ಯಾದಗಿರಿ

info.reporterkarnataka@gmail.com

ಈ ಹಿಂದೆ ಸಾಕಷ್ಟು ಗ್ರಾಮ ಸಭೆ, ವಾರ್ಡ ಸಭೆ ಮಾಡಿದ್ದೀರಿ ಸಾರ್ವಜನೀಕರಿಂದ ಬಂದ ಸಮಸ್ಯೆಗಳು ನೂರಾರು ಬರೆದುಕೊಂಡು ಹೋಗಿದ್ದೇ ಆಯ್ತು. ಆದರೆ ಅವುಗಳನ್ನು ಕಾರ್ಯ ರೂಪಕ್ಕೆ ತಂದಿದ್ದೀರಾ? ಇವತ್ತಿನ ಗಾಮ ಸಭೆಯೂ ನಮಗೆ ಬೇಡ ಮೊದಲು ರದ್ದುಗೊಳಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರ ಮಾತಿಗೆ ಬಗ್ಗಿದ ಅಧಿಕಾರಿಗಳು ಕೊನೆಗೂ ನಾಗಬೇನಾಳ ಗ್ರಾಮ ಸಭೆಯನ್ನು ಮುಂದೂಡಿದ ಪರಿಣಾಮ ಬಂದ ಹಾದಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿಗಳು ಮರಳಿದ ಪ್ರಸಂಗ ಸಮೀಪದ ನಾಗಬೇನಾಳ ಗ್ರಾಮ ಪಂಚಾಯಿತಿನಲ್ಲಿ ನಡೆಯಿತು.


*ಸಾರ್ವಜನೀಕರ ಆರೋಪ:* ಸುಮಾರು ವರ್ಷಗಳಿಂದಲೂ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮರ್ಪಕವಾಗಿ ಕುಡಿಯಲು ನೀರು ಒದಗಿಸುತ್ತಿಲ್ಲ, ಬೆಳಕಿನ ವ್ಯವಸ್ಥೆಯೂ ಇಲ್ಲ. ಆಸರೆ ಮನೆಗಳನ್ನು ನಿಯಮಾನುಸಾರವಾಗಿ ಹಂಚಿಕೆ ಮಾಡಿ ಬಡವರಿಗೆ ಅನುಕೂಲ ಕಲ್ಪಿಸುತ್ತಿಲ್ಲ. ಪಕ್ಕದಲ್ಲೇ ನದಿ ಹರಿಯುತ್ತಿದ್ದರೂ ನಾಗಬೇನಾಳ ತಾಂಡೆಯಲ್ಲಿ ಕುಡಿಯುವ ನೀರಿಲ್ಲ, ದೂರದ ಹಳ್ಳ ಕೊಳ್ಳದಿಂದ ನೀರು ತರಬೇಕಿದೆ. ಕೋಟಿಗಟ್ಟಲೇ ಹಣ ವ್ಯಯಿಸಿ ಜೆಜೆಎಂ ನಿಂದ ಪ್ರತಿ ಮನೆಗೂ ನೀರು ಒದಗಿಸಬೇಕಿದ್ದರೂ ಜೆಜೆಎಂ ಕಾಮಗಾರಿ ಮುಗಿಯದೇ ಗ್ರಾಪಂಯವರು ಮುಗಿದಿದೆ ಎಂದು ತಮ್ಮ ವಶಕ್ಕೆ ಪಡಿಸಿಕೊಂಡಿದ್ದೀರಿ. ಯಾರ ಮನೆಗಾದರೂ ಈವರೆಗೆ ನೀರು ಬಂದಿದೆಯಾ ಎಂದು ಪ್ರಶ್ನಿಸಿದರು.
*ಖಾಸಗಿ ನೀರು:* ಕರ ಮಾತ್ರ ಕಟ್ಟಿಸಿಕೊಳ್ಳುತ್ತಿದ್ದಾರೆ ಗ್ರಾಪಂ ಮೂಲಕ ನಮಗೆ ನೀರೇ ಸಿಗುತ್ತಿಲ್ಲ, ಹೊಲ- ಗದ್ದೆಗಳಿಗೆ ತೆರಳಿ ಖಾಸಗಿ ನೀರು ಕುಡಿಯುತ್ತಿದ್ದೇವೆ. ಆರೇ ಶಂಕರ ಗಾಮದಲ್ಲೂ ಸಹ ಜೆಜೆಎಂ ನೀರು ಸಿಗುತ್ತಿಲ್ಲ. ಆದರೂ 40 ಲಕ್ಷ ಪೋಲಾಗಿದೆ. ಈಗಿರುವ ಪಿಡಿಓ ಗಳಿಗೂ ಗಮನಕ್ಕೆ ತಂದಿದ್ದೇವೆ ಎಂದು ಆರೋಪಿದರು.
ನರೇಗಾದಡಿ ಕಾಮಗಾರಿಗಳೇ ಆಗುತ್ತಿಲ್ಲ. ಸುಮಾರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ. ಸರಕಾರದ ಅನುದಾನ ಖರ್ಚು ಮಾಡುತ್ತಲೇ ಇದ್ದಾರೆ. ವಾಟರ್‌ಮೆನ್ ಗಳ ಕೊರತೆ ಇದ್ದರೂ ಹುದ್ದೆಗಳನ್ನು ತುಂಬುತ್ತಿಲ್ಲ. ಕೋರಂ ಭರ್ತಿಯಾಗದೇ ಸಭೆ ನಡೆಸುತ್ತಾರೆ. ಈ ಹಿಂದೆ ಸಭೆಯಲ್ಲಿ 120 ಮನೆಗಳನ್ನು ಆಯ್ಕೆ ಮಾಡಿದರೂ ಈವರೆಗೂ ಆ ಮನೆಗಳು ಮಧ್ಯವರ್ತಿಗಳ ಹಾವಳಿಯಿಂದ ನನೆಗುದಿಗೆ ಬಿದ್ದಿವೆ. ಜಿಪಿಎಸ್ ಮಾಡಲೂ ಹಣ ಕೊಡಬೇಕು ಎಂದು ಸಾರ್ವಜನೀಕರು ಒಟ್ಟಾರೆ ನಮ್ಮ ಗ್ರಾಪಂ ಗೆ ಯಾವ ಮೇಲಾಧಿಕಾರಿಗಳು ಗಮನ ಹರಿಸುತ್ತಿಲ್ಲ. ಕರ್ನಾಟಕದಲ್ಲೇ ಅತ್ಯಂತ ಕಳಪೆ ಆಡಳಿತ ಮತ್ತು ಅಭಿವೃದ್ಧಿ ವಂಚಿತ ಗ್ರಾಪಂ ಎಂದು ಮೌನೇಶ ಮಾದರ, ಮಾನಪತಿ, ಆನಂದ ನಾಯಕ, ಬೈಲಪ್ಪ ಗೌಂಡಿ, ಚನ್ನಬಸಪ್ಪ ಕೋಳೂರ, ಚಂಡು, ಹನಮಂತ ಗೌಂಡಿ, ಸುರೇಶ ಪಾಟೀಲ, ಸಂಗಪ್ಪ, ಶಾಂತಪ್ಪ ಪಾಟೀಲ, ಲಕ್ಷ್ಮಣ ರಾಠೋಡ, ಅಕಾಶ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತಾಪಂ ಎಡಿ ಪಿ.ಎಸ್.ಕಸನಕ್ಕಿ, ಪಿಡಿಓ ಮುರಿಗೆಮ್ಮ ಪೀರಾಪೂರ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಕಾಜಗಾರ, ಹೆಸ್ಕಾಂನ ಸಜ್ಜನ, ಕೃಷಿ ಇಲಾಖೆಯ ಬಿ.ಎಸ್.ಸಾವಳಗಿ, ಕಾರ್ಯದರ್ಶಿ ಟಿ.ಎಂ.ಕೋಲಕಾರ ಸೇರಿದಂತೆ ಸದಸ್ಯರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು