10:44 AM Friday21 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ ಟಿಪ್ಪರ್ ಮತ್ತು ಕಾರು ಡಿಕ್ಕಿ

05/09/2025, 21:19

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnata@gmail.com

ಬೇರೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಸಡನ್ ಆಗಿ ಬ್ರೇಕ್ ಹಾಕಿದಕ್ಕೆ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಅಡ್ಡವಾಗಿ ತಿರುಗಿ ನಿಂತಿದ್ದ ಟ್ರ್ಯಾಕ್ಟರ್ ಗೆ ಟಿಪ್ಪರ್ ಅಪ್ಪಳಿಸಿರುವ ಮತ್ತು ಅದೇ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿರುವ ಘಟನೆ ವರದಿಯಾಗಿದೆ.


ಇಂದು ಮಧ್ಯಾಹ್ನ ಕೊಡಗರಹಳ್ಳಿ ಸಮೀಪದ ಮಾರುತಿ ನಗರದಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ.
ಕೂಡಿಗೆಯ ಆನಿ ಎಂಬುವವರ ಟ್ರ್ಯಾಕ್ಟರ್ ಅನ್ನು ಇಂದು ಮಧ್ಯಾಹ್ನ ರೇವಣ್ಣ ಎಂಬುವವರು ಕೆದಕಲ್ ನಿಂದ ಕೂಡಿಗೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯದ ಮಾರುತಿ ನಗರದ ತಿರುವಿನಲ್ಲಿ ವಾಹನವೊಂದಕ್ಕೆ ಸೈಡ್ ಕೊಡಲೆಂದು ಟ್ರ್ಯಾಕ್ಟರ್ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದಾನೆ ಎಂದು ಹೇಳಲಾಗಿದೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಟ್ರಾಕ್ಟರ್ ನ ಇಂಜಿನ್ ಭಾಗ ರಸ್ತೆಯ ಬಲಭಾಗಕ್ಕೆ ಅಡ್ಡವಾಗಿ ತಿರುಗಿ ನಿಂತುಕೊಂಡಿದೆ. ಇದೇ ಸಂದರ್ಭ ಕುಶಾಲನಗರ ಕಡೆಯಿಂದ ಮಡಿಕೇರಿಗೆ ಜೆಲ್ಲಿ ಕಲ್ಲು ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರ್ ಟ್ರಾಕ್ಟರ್ ನ ಇಂಜಿನ್ ಗೆ ಅಪ್ಪಳಿಸಿದೆ ಅಲ್ಲದೇ ಟ್ರಾಕ್ಟರ್ ನ ಹಿಂದೆ ಬರುತ್ತಿದ್ದ ಕಾರುವೊಂದು ಟ್ರಾಕ್ಟರ್ ಗೆ ಅಲ್ಪ ಪ್ರಮಾಣದಲ್ಲಿ ಗುದ್ದಿದೆ. ಟಿಪ್ಪರ್ ಅಪ್ಪಳಿಸಿದ ರಭಸಕ್ಕೆ ಟ್ರಾಕ್ಟರ್ ನ ಮುಂಭಾಗದ ಟಯರ್ ಕಿತ್ತು ಬಂದು ನಜ್ಜುಗುಜ್ಜುಗೊಂಡಿದೆ. ಟ್ರ್ಯಾಕ್ಟರ್ ಗೆ ಗುದ್ದಿದ ನಂತರ ಟಿಪ್ಪರ್ ರಸ್ತೆಬದಿಯ ಅಂಚಿನೊಳಗೆ ನುಸುಳಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಬೇಟಿ ನೀಡಿದ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು