ಇತ್ತೀಚಿನ ಸುದ್ದಿ
Kodagu | ಅನ್ನಭಾಗ್ಯದ ಅಕ್ಕಿ ಅನ್ಯರ ಪಾಲು: ಅಕ್ರಮ ಮಾರಾಟ; ಓರ್ವನ ಬಂಧನ, 7 ಕ್ವಿಂಟಾಲ್ ಅಧಿಕ ಅಕ್ಕಿ ವಶ
05/08/2025, 10:46

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸೊಸೈಟಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 7 ಕ್ವಿಂಟಲ್ 79 ಕೆಜಿ ಅಕ್ಕಿ, ಒಂದು ವಾಹನ ಹಾಗೂ ಚಾಲಕನನ್ನು ಪೊನ್ನoಪೇಟೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಗೋಣಿಕೊಪ್ಪದ ಮುಸ್ತಫಾ ಮತ್ತು ಅರ್ವತೋಕ್ಲು ಗ್ರಾಮದ ಮನೋಜ್ ಎಂಬುವವರಿಂದ ಅಕ್ಕಿ ಸಂಗ್ರಹಿಸಿ ವಿಠಲ ಎಂಬಾತ ಮೈಸೂರು ಜಿಲ್ಲೆ ಯ ಹುಣಸೂರಿನ ಕಲ್ಕುಣಿಕೆ ಎಂಬಲ್ಲಿಗೆ ಸಾಗಿಸುತ್ತಿರುವಾಗ ಸಾರ್ವಜನಿಕರ ಸಹಕಾರದಿಂದ ಗೋಣಿಕೊಪ್ಪ -ಮೈಸೂರು ರಸ್ತೆಯ ಚೆನ್ನoಗೋಲಿ ಯಲ್ಲಿ ವಾಹನ ಅಡ್ಡಗಟ್ಟಿ ಹಿಡಿದಿದ್ದಾರೆ. ವಿಠಲ ಗೋಣಿಕೊಪ್ಪದಲ್ಲಿ ಗುಜುರಿ ಅಂಗಡಿ ನಡೆಸಿಕೊಂಡಿದ್ದು, ಅಂಗಡಿಗೆ ಬರುವ ಕಾರ್ಮಿಕರನ್ನು ಗುರಿಯಾಗಿರಿಸಿ ಈ ದಂಧೆ ನಡೆಸುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.