ಇತ್ತೀಚಿನ ಸುದ್ದಿ
ಕಿನ್ನರಿ ಕಿಂಡರ್‌ಗಾರ್ಟನ್ ಮಕ್ಕಳ ಜತೆ ವಾಯ್ಸ್ ಆಫ್ ಆರಾಧನಾ ನಿರ್ದೇಶಕಿ ಪದ್ಮಶ್ರೀ ಹುಟ್ಟುಹಬ್ಬ
30/09/2022, 11:46
ಮಂಗಳೂರು(reporterkarnataka.com): ವಾಯ್ಸ್ ಆಫ್ ಆರಾಧನಾದ ನಿರ್ದೇಶಕಿ ಹಾಗೂ ಆರದಿರಲಿ ಬದುಕು ಆರಾಧನಾ ತಂಡದ ಪ್ರವರ್ತಕಿ ಪದ್ಮಶ್ರೀ ನಿಡ್ಡೋಡಿ ಅವರ ಹುಟ್ಟುಹಬ್ಬ ನಗರದ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನ ಕಿನ್ನರಿ ಕಿಂಡರ್‌ಗಾರ್ಟನ್ ನ ಮಕ್ಕಳ ಜತೆ ಆಚರಿಸಲಾಯಿತು. ಕಿಂಡರ್‌ಗಾರ್ಟನ್ ನ ಸಹಾಯಕ ಶಿಕ್ಷಕಿ ಸುಜಾತಾ ಅವರಿಗೆ ಈ ಸಂದರ್ಭದಲ್ಲಿ ಜಿನಸಿ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಹುಟ್ಟುಹಬ್ಬದ ಅಂಗವಾಗಿ ವಾಯ್ಸ್ ಆಫ್ ಆರಾಧನಾ ತಂಡದ ಪ್ರತಿಭೆಗಳಿಂದ ಸಂಗೀತ ರಸಮಂಜರಿ ನಡೆಯಿತು. ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. p
ಕಿನ್ನರಿ ಕಿಂಡರ್‌ಗಾರ್ಟನ್ ಪರವಾಗಿ ಮೊದಲು ಪದ್ಮಶ್ರೀ ಅವರ ಹುಟ್ಟುಹಬ್ಬದ ಕೇಕ್ ಕಟ್ ಮಾಡಲಾಯಿತು. ಕಿಂಡರ್‌ಗಾರ್ಟನ್ ನಿರ್ದೇಶಕಿ ಲತಾ ಎ. ಕಲ್ಲಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ವಾಯ್ಸ್ ಆಫ್ ಆರಾಧನಾ00l ತಂಡದಿಂದ ಕೇಕ್ ಕಟ್ ಮಾಡಲಾಯಿತು.
ಬಾಲ ಪ್ರತಿಭೆಗಳಾದ ಅಶ್ಮಿತ್ ಎ.ಜೆ., ಅನನ್ಯ ನಾರಾಯಣ. ಯಶಸ್ ಭಟ್ ಮೊದಲಾದವರಿಂದ ಸಂಗೀತ ಸುಧೆ ಹರಿಯಿತು. ವಾಯ್ಸ್ ಆಫ್ ಆರಾಧನಾ ತಂಡದ ಅಭಿಷೇಕ್ ಶೆಟ್ಟಿ ಐಕಳ, ದೀನ್ ರಾಜ್, ಕೆ. ದೇವಿಪ್ರಸಾದ್, ಬಸವರಾಜ್ ಮಂತ್ರಿ, ಜಯರಾಮ್, ಜ್ಯೋತ್ಸ್ನಾ, ಆಶಾ, ಪ್ರಸಾದ್, ಕಿನ್ನರಿ ಕಿಂಡರ್‌ಗಾರ್ಟನ್ ನಿರ್ದೇಶಕಿ ಲತಾ ಎ. ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು. ಜ್ಯೋತ್ಸ್ನಾ ಕಾರ್ಯಕ್ರಮ ನಿರೂಪಿದರು.