5:52 PM Saturday12 - September 2026
ಬ್ರೇಕಿಂಗ್ ನ್ಯೂಸ್
ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;…

ಇತ್ತೀಚಿನ ಸುದ್ದಿ

ಬಾಳೆ ಬೆಳೆಗೆ ದೃಷ್ಟಿ ತಾಗದಂತೆ ಅರೆಬೆತ್ತಲೆ ಮಾಡಲ್ ಗಳ ಫೋಟೋ ಅಳವಡಿಸಿದ ಕಿಲಾಡಿ ಕೃಷಿಕ!: ಪಡ್ಡೆ ಹುಡ್ಗರು ಫುಲ್ ಖುಷ್!!

21/02/2025, 18:16

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಫಲವತ್ತಾದ ಕೃಷಿ ಭೂಮಿಯಲ್ಲಿ ಸೊಗಸಾಗಿ ಬೆಳೆದ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ರಕ್ಕಸನ ಮುಖವಾಡ ಅಥವಾ ದೃಷ್ಟಿ ಬೊಂಬೆಗಳನ್ನು ಅಳವಡಿಸುವುದನ್ನು ನೋಡಿದ್ದೇವೆ. ಆದರೆ, ಇದಕ್ಕೆ ಬದಲಾಗಿ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಬಳಿ ಇರುವ ಕಕ್ಕರಹಟ್ಟಿ ಗ್ರಾಮದ ರೈತನೊಬ್ಬ ಐನಾತಿ ಐಡಿಯಾ ಹುಡುಕಿದ್ದಾನೆ.
ವಿಚಿತ್ರ ಆದರೂ ಸತ್ಯ ಎಂಬ ಮಾತಿನಂತೆ ಬೆದರು ಬೊಂಬೆಯ ಬದಲಾಗಿ ಅರೆಬೆತ್ತಲೆಯಾಗಿ ಇರುವ ಲೇಡಿ ಮಾಡೆಲ್ ಗಳ ಫೋಟೋಗಳನ್ನ ತನ್ನ ಜಮೀನಿನ ಸುತ್ತ ಅಳವಡಿಸಿ ಗ್ರಾಮಸ್ಥರು ಮತ್ತು ದಿನನಿತ್ಯ ಸಂಚರಿಸುವ ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದ್ದಾನೆ.
ನಂಜನಗೂಡಿನಿಂದ ಮಡಹಳ್ಳಿ ಹಾಗೂ ತಗಡೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಚುಂಚನಹಳ್ಳಿ ಬಳಿ ಇರುವ ಕಕ್ಕರಹಟ್ಟಿ ರೈತ ಸೋಮೇಶ್ ಇಂತಹ ಐನಾತಿ ಐಡಿಯಾ ಹುಡುಕಿ ಚರ್ಚೆಗೆ ಗ್ರಾಸವಾಗಿರುವ ವ್ಯಕ್ತಿ.
ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ಬೆಳೆಯನ್ನು ಸೊಗಸಾಗಿ ಬೆಳೆದಿದ್ದಾನೆ. ಬಾಳೆ ಬೆಳೆ ಮೇಲೆ ಸಾರ್ವಜನಿಕರು ಮತ್ತು ದಾರಿಹೋಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನ ಅಳವಡಿಸುವ ಬದಲು ಮಾಡೆಲ್ ಗಳ ಅರೆಬೆತ್ತಲೆ ಫೋಟೋಗಳನ್ನ ಅಳವಡಿಸಿದ್ದಾನೆ.


ತನ್ನ ಜಮೀನಿನ ಸುತ್ತ ಸುಮಾರು ಹತ್ತಾರು ಕಡೆ ಲೇಡಿ ಮಾಡೆಲ್ ಅರೆಬೆತ್ತಲೆ ಚಿತ್ರಗಳು ರಾರಾಜಿಸುತ್ತಿವೆ.
ದಾರಿಹೋಕರಂತೂ ಸೊಗಸಾಗಿ ಸಮೃದ್ದಿಯಾಗಿ ಬೆಳೆದ ಬಾಳೆ ಗಿಡಗಳ ಮೇಲೆ ದೃಷ್ಟಿ ಹರಿಸದೆ ಮಾಡೆಲ್ ಚಿತ್ರಗಳನ್ನಷ್ಟೇ ಕಣ್ತುಂಬಿಕೊಂಡು ಸಾಗುತ್ತಿದ್ದಾರಂತೆ.
ರೈತ ಸೋಮೇಶ್ ನ ಐನಾತಿ ಐಡಿಯಾ ಕೆಲವು ಗ್ರಾಮಸ್ಥರನ್ನ ಕೆರಳಿಸಿದ್ರೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವುದಂತೂ ನಿಜ.
ಒಟ್ಟಾರೆ ಸೋಮೇಶ್ ರವರ ಐಡಿಯಾನ ಹೊಗಳಬೇಕೋ…ತೆಗಳಬೇಕೋ…? ಎಂಬುದು ಗ್ರಾಮಸ್ಥರು ಮತ್ತು ಸಾರ್ವಜನಿಕರ ನಿರ್ಧಾರಕ್ಕೆ ಬಿಟ್ಟಿದ್ದು…!

ಇತ್ತೀಚಿನ ಸುದ್ದಿ

ಜಾಹೀರಾತು