12:06 AM Thursday27 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ಕರಾವಳಿ ನದಿ ಒಡಲಿನ ‘ನಿಧಿ’ ಕಾನೆ ಮೀನು: ಚಿನ್ನದ ದರ, ಪೌಷ್ಟಿಕಾಂಶ ಆಗರ

06/07/2026, 18:03

ಮನೋಜ್ ಕೆ. ಬೆಂಗ್ರೆ, ಮಂಗಳೂರು

info.reporterkarnataka@gmail.com

ತನ್ನ ವಿಶಿಷ್ಟ ಸ್ವಾದ, ಮೃದುವಾದ ಮಾಂಸ ಮತ್ತು ಔಷಧೀಯ ಗುಣಗಳಿಂದಾಗಿ ಮೀನು ಪ್ರಿಯರ ಸಾರ್ವಕಾಲಿಕ ಫೇವರೇಟ್ ಆಗಿರುವ ಕಾನೆ ಮೀನು ಕರಾವಳಿ ನದಿ ಒಡಲಿನ ನಿಜವಾದ ‘ನಿಧಿ’ ಎಂದರೆ ತಪ್ಪಾಗುವುದಿಲ್ಲ.
ಕರಾವಳಿ ಮಾಂಸಾಹಾರಿಗಳ ಆಹಾರ ಪದ್ಧತಿಯಲ್ಲಿ ಕಾನೆ ಮೀನಿಗೆ (Lady Fish) ರಾಜ ಮರ್ಯಾದೆ. Kane Rava Fry ಮತ್ತು Kane Curry ಕರಾವಳಿಯ ಪ್ರತಿಷ್ಠಿತ ಹೋಟೆಲ್‌ಗಳಿಂದ ಹಿಡಿದು ಮನೆಗಳವರೆಗೂ ಹಬ್ಬದೂಟದಷ್ಟೇ ಪ್ರಸಿದ್ಧ. ಮುಳ್ಳು ಕಡಿಮೆ, ಮಾಂಸ ಮೃದು. ಹಾಗಾಗಿ ಸಣ್ಣ ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಫೇವರೇಟ್.


‘ಕಾನೆ’ಯಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ಉತ್ತಮ ಗುಣಮಟ್ಟದ ಪ್ರೊಟೀನ್ ಮತ್ತು ಅತ್ಯಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಜೀರ್ಣಕ್ರಿಯೆಗೆ ಸುಲಭವಾಗಿರುವುದರಿಂದ ಆರೋಗ್ಯಕರ ಆಹಾರವಾಗಿ ವೈದ್ಯರೂ ಶಿಫಾರಸು ಮಾಡುತ್ತಾರೆ. “ಸತ್ವ ಜಾಸ್ತಿ, ಕೊಬ್ಬು ಕಡಿಮೆ” ಅನ್ನೋದೇ ಈ ಮತ್ಸ್ಯದ ಪ್ಲಸ್ ಪಾಯಿಂಟ್.
ಸಮುದ್ರ-ಸಾಗರದಲ್ಲೂ ವಿವಿಧ ತಳಿಗಳ ಕಾನೆ ಮೀನು ಸಿಗುತ್ತದೆಯಾದರೂ ನದಿ ಮತ್ತು ಕಡಲು ಸೇರುವ ಅಳಿವೆ ಬಾಗಿಲು ಪ್ರದೇಶ ಹಾಗೂ ಹಿನ್ನೀರಿನಲ್ಲಿ ಲಭ್ಯವಾಗುವ ‘ ಕಾನೆ’ಗೆ ರುಚಿ ಜಾಸ್ತಿ. ಉಪ್ಪು-ಸಿಹಿ ನೀರು ಮಿಶ್ರಣ ಆಗುವ ಆಯಕಟ್ಟಿನ ಸ್ಥಳವಂತೂ ಕಾನೆ ಮೀನುಗಳಿಗೆ ಸ್ವರ್ಗ ಸಮಾನ. ಕಾನೆ ಮೀನು ಹಿಡಿಯಲೆಂದೇ ಈಗ ಮೀನುಗಾರರಲ್ಲಿ ನಾನಾ ರೀತಿಯ ಬಲೆಗಳಿವೆ. ಕೆಲವೊಮ್ಮೆ ದಡದಿಂದ ಬೀಸುವ ಕೈಬಲೆಯಲ್ಲಿಯೂ ಕಾನೆ ಸಿಗುತ್ತೆ.
ಮಾರುಕಟ್ಟೆಯಲ್ಲಿ ಕಾನೆ ಮೀನಿನ ಬೆಲೆ ಸದಾ ಗಗನಮುಖಿ. ನದಿ ಕಾನೆಗಾಗಿ ಮುಂಜಾನೆಯೇ ಕಾನೆಪ್ರಿಯರು ನದಿತೀರದತ್ತ ಮತ್ತು ದಕ್ಕೆ ಕಡೆಗೆ ಹೆಜ್ಜೆ ಹಾಕುತ್ತಾರೆ. ಬೆಲೆ ಎಷ್ಟೇ ಇದ್ದರೂ ಸ್ವಾದಕ್ಕೆ ಮಾರುಹೋಗಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ.

*’ಕಾಣೆ’ಯಾಗುತ್ತಿದೆ ಕಾನೆ!*
ಆದರೆ, ಈ ನೈಸರ್ಗಿಕ ‘ಜಲನಿಧಿ’ಗೆ ಈಗ ಸಂಕಷ್ಟ ಎದುರಾಗಿದೆ. ನದಿ ಪಾತ್ರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ, ಕೈಗಾರಿಕೆಗಳ ರಾಸಾಯನಿಕಯುಕ್ತ ನೀರಿನಿಂದಾಗಿ ಈ ಮೀನು ಸಂತತಿಯೂ ಕ್ಷೀಣಿಸುತ್ತಿದೆ. ಒಟ್ಟಿನಲ್ಲಿ ಮೀನುಗಾರರ ಬದುಕಿಗಾಗಿ, ಮತ್ಸ್ಯ ಸಂಪತ್ತಿನ ವೃದ್ಧಿಗಾಗಿ ನದಿ ಮೂಲಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ.
“ನಮ್ಮ ಕಾಲದಲ್ಲಿ ನಾವು ಕೈಯಿಂದಲೇ ಕಾನೆ ಬಲೆ ಕಟ್ಟುತ್ತಿದ್ದೆವು. ಅಂದು ಕಾನೆಗೆ ಇಷ್ಟೊಂದು ಬೇಡಿಕೆ ಇರಲಿಲ್ಲ. ರುಚಿಯಲ್ಲಿ ಇಂದಿಗಿಂತ ಫಸ್ಟ್ ಕ್ಲಾಸ್ ಇತ್ತು. ಈಗ ನದಿ ಮಾಲಿನ್ಯದಿಂದಾಗಿ ಕಾನೆ ಲಭ್ಯತೆ ತುಂಬಾ ಕಡಿಮೆಯಾಗಿದೆ. ಆಧುನಿಕ ಬಲೆಗಳಿಂದ ಮೀನು ಹಿಡಿಯುವವರೂ ಜಾಸ್ತಿಯಾಗಿದ್ದಾರೆ” ಎಂದು ಮಂಜೇಶ್ವರದ ಪರಿಣತ ಮೀನುಗಾರರಾದ ಶತಾಯುಷಿ ನಾರಾಯಣ ಪುತ್ರನ್ ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು