ಇತ್ತೀಚಿನ ಸುದ್ದಿ
ಕಪಿಲಾ ನದಿ ಪ್ರವಾಹ: ಶ್ರೀ ಮಲ್ಲನ ಮೂಲೆ ಮಠದ ಬಳಿ ರಸ್ತೆಗೆ ನುಗ್ಗಿದ ನೀರು; ನಂಜನಗೂಡು-ಮೈಸೂರು ಹೆದ್ದಾರಿ ಬಂದ್
19/07/2024, 14:37
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಕಪಿಲಾ ನದಿ ಪ್ರವಾಹದಿಂದ ನಂಜನಗೂಡು-ಮೈಸೂರು ಹೆದ್ದಾರಿ ಬಂದ್ ಆಗಿದೆ.
ಕೇರಳದ ವಯನಾಡು ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಪಿಲಾ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಿದೆ. ಇದರಿಂದಾಗಿ ಕಪಿಲ ನದಿ ತೀರದಲ್ಲಿ ಹಾದು ಹೋಗಿರುವ ಮೈಸೂರು- ನಂಜನಗೂಡು ಹೆದ್ದಾರಿಯಲ್ಲಿ ಸುಕ್ಷೇತ್ರ ಶ್ರೀ ಮಲ್ಲನ ಮೂಲೆ ಮಠದ ಬಳಿ ನದಿಯ ಪ್ರವಾಹ ರಸ್ತೆಗೆ ಹರಿದು ಬಂದು ರಸ್ತೆ ಸಂಪೂರ್ಣ ಮುಳುಗಿಹೋಗಿದೆ. ಇದರ ಪರಿಣಾಮ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸಲು ಆಗದೆ ರಸ್ತೆಯನ್ನು ಬಂದ್ ಮಾಡಲಾಗಿದೆ.
ಈ ಹಿನ್ನಲೆ ಮೈಸೂರು ಚಾಮರಾಜನಗರ ನಂಜನಗೂಡು ಗುಂಡ್ಲುಪೇಟೆ ಸೇರಿದಂತೆ ತಮಿಳುನಾಡು ಹಾಗೂ ಕೇರಳ ರಾಜ್ಯದ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ.
ನಂಜನಗೂಡು- ಮೈಸೂರು ಹೆದ್ದಾರಿ ಬಂದ್ ಮಾಡಿ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಕೇವಲ ಒಂದು ಕಿಲೋಮೀಟರ್ ರಸ್ತೆಗೆ ಬದಲಾಗಿ ಸುಮಾರು ಹದಿನೈದರಿಂದ ಇಪ್ಪತ್ತು ಕಿಲೋಮೀಟರ್ ರಸ್ತೆ ಬಳಸುವಂತಾಗಿದೆಯಲ್ಲದೆ. ಟ್ರಾಫಿಕ್ ಸಮಸ್ಯೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ.