ಇತ್ತೀಚಿನ ಸುದ್ದಿ
ದೈವ ಅನುಕರಣೆ ಪ್ರಕರಣ | ಹೊಸದಾಗಿ ಕ್ಷಮಾಪಣೆ ಕೇಳಲು ಸಿದ್ಧ: ಬಾಲಿವುಡ್ ನಟ ರಣವೀರ್ ಸಿಂಗ್
10/04/2026, 21:06
ಬೆಂಗಳೂರು(reporterkarnataka.com): ಚಾವುಂಡಿ ದೈವ ಅನುಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ ಅವರು ಕೇಸ್ ಎದುರಿಸುತ್ತಿದ್ದಾರೆ. ಈ ಪ್ರಕರಣ ಕರ್ನಾಟಕ ಹೈಕೋರ್ಟ್ನಲ್ಲಿದೆ. ಇಂದು (ಏಪ್ರಿಲ್ 10) ನಡೆದ ವಿಚಾರಣೆಯಲ್ಲಿ ರಣವೀರ್ ಸಿಂಗ್ ಪರವಾಗಿ ವಕೀಲರು ಹೊಸ ಹೇಳಿಕೆ ನೀಡಿದ್ದಾರೆ. ಹೊಸದಾಗಿ ಕ್ಷಮೆ ಕೇಳಲು ಸಿದ್ಧ ಎಂದಿರುವ ರಣವೀರ್, ದೇವಾಲಯಕ್ಕೂ ಭೇಟಿ ನೀಡುವುದಾಗಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಚಾವುಂಡಿ ದೈವ ಅನುಕರಿಸಿದ ಪ್ರಕರಣದಲ್ಲಿ ಪರಿಷ್ಕೃತ ಕ್ಷಮೆಯಾಚನಾ ಅಫಿಡವಿಟ್ ಸಲ್ಲಿಸಲು ನಾನು ಸಿದ್ಧ. ಈ ಹಿಂದಿನ ಕ್ಷಮೆಯಾಚನೆ ಪ್ರಾಮಾಣಿಕವಾಗಿಲ್ಲ ಎಂಬ ಕಳವಳವನ್ನು ಇದು ದೂರ ಮಾಡುತ್ತದೆ’ ಎಂದು ರಣವೀರ್ ಸಿಂಗ್ ಪರವಾಗಿ ಸಜನ್ ಪೂವಯ್ಯ ಕೋರ್ಟ್ಗೆ ತಿಳಿಸಿದ್ದಾಗಿ ಬಾರ್ ಆ್ಯಂಡ್ ಬೇಂಚ್ ವರದಿ ಮಾಡಿದೆ. ನಾನು ಕ್ಷಮೆಯಾಚನೆಯ ಅಫಿಡವಿಟ್ ಸಲ್ಲಿಸಿದ್ದೇನೆ ಮತ್ತು ಆ ಅಫಿಡವಿಟ್ನಲ್ಲಿ ದೇವಸ್ಥಾನಕ್ಕೂ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದೇನೆ. ದೈವಾರಾಧಕರನ್ನು ನೋಯಿಸಿದ್ದೇನೆ ಎಂದು ಮಿಮಿಕ್ರಿ ಮಾಡಿದಾಗ ನನಗೆ ತಿಳಿದಿರಲಿಲ್ಲ. ನಾನು ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದವನು. ನನಗೆ ಈ ಸೂಕ್ಷ್ಮತೆಗಳ ಬಗ್ಗೆ ತಿಳಿದಿರಲಿಲ್ಲ’ ಎಂದು ರಣವೀರ್ ಸಿಂಗ್ ಕೋರ್ಟ್ಗೇ ಈ ಮೊದಲು ವಕೀಲರ ಮೂಲಕ ತಿಳಿಸಿದ್ದರು.












